ಹಳ್ಳಿಗಾಡಿನಲ್ಲಿ
ಹಳ್ಳಿಗಾಡಿನಲ್ಲಿ
ಹಳ್ಳಿ ಜನ,
ಒಳ್ಳೆ ಜನ,
ಹಾಲು..ಜೇನು
ಮನಸೆಲ್ಲ.
ಮಾತಿನಲ್ಲಿ,
ಹುಸಿ ಇಲ್ಲ,
ಕೊಡುವಾ..ಕೈಗಳಿಗೆ
ಬರವಿಲ್ಲ.
ಕಾಡಿನ ಮರಗಳ
ಜೊತೆಯಲ್ಲಿ,
ಹಾಡುವಾ..ಹಕ್ಕಿಯಂತೆ
ಅಲೆದಾಡಿ,
ಹಸಿರಲಿ ತಮ್ಮ
ಉಸಿರಿರಿಸಿ,
ಭೂಮಿತಾಯಿಯ
ಋಣವನು..ತೀರಿಸಿ,
ಹೋಗೋದು ಯಾವಕಡೆ..,
ನೀವು ಹೋಗುವಾ ಏಲ್ಲಾ ಕಡೆ,
ಹರಿಯುತಿರಲಿ ಪ್ರೀತಿ ಹೊಳೆ..
ಮುಗಿಯದು ಸೂರ್ಯನ
ಸೋನೆ ಮಳೆ.
