STORYMIRROR

Dhanya Gowda

Abstract

2  

Dhanya Gowda

Abstract

ನಮನ

ನಮನ

1 min
108

ಕೈ ಮುಗಿದರು ಸಾಲದು ನಿನಗೆ,

ನೀನೆಂದಿಗೂ ನನ್ನ ಜಗವೇ.


ನಾ ಹಾಡುವ ಸ್ವರ ನಿನದೇ,

ನನ್ನ ಹೃದಯದ ಬಡಿತ ಹೇಳಿದೆ.

ನೀ ಕೊಡುವ ಪ್ರೀತಿಯು,

ಸಪ್ತಸಾಗರವ ಮೀರಿದೆ.


ಜೊತೆಗೆ ನೀನಿರಲು,

ದೇವರ ಮಡಿಲಿನಂತೆ.

ಹೇಗೆ ತೀರಿಸಲಿ ಋುಣವ,

ನಿಲುಕದ ಸುಂದರ ಬಾನಿನಂತೆ.


ನಿನ್ನ ನೋವು ನನಗಿರಲಿ,

ಬಿಡು ಎಲ್ಲ ಚಿಂತೆ.

ಈ ಶೂನ್ಯದಲ್ಲಿ‌‌,

ನನಗೆ ನೀ ಬ್ರಹ್ಮಾಂಡದಂತೆ.

ಹರಸು, ಕ್ಷಮಿಸು,

ನಿನ್ನಜೊತೆಗಿರಿಸು,

ಜನುಮಜನುಮಕೂ,

ನನಗೆ ನೀನೇ ಬೇಕು,

ಅಮ್ಮ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract