STORYMIRROR

Dhanya Gowda

Inspirational

4  

Dhanya Gowda

Inspirational

ನನ್ನುಸಿರ ಹೆಸರೇ ಭಾರತ

ನನ್ನುಸಿರ ಹೆಸರೇ ಭಾರತ

1 min
393

ನಮ್ಮ ನಾಡು, ಪುಣ್ಯ ಬೀಡು

ಹೊನ್ನ ಕಳಶದಂತೆ

ನಮ್ಮ ಭೂಮಿತಾಯಿಗೆ ನೋಡು.


ಇತಿಹಾಸದ ಪುಟಗಳಲ್ಲಿ

ವೀರರು ಉದಯಿಸಿದ

ಕೆಚ್ಚೆದೆಯ ಕಲಿಗಳ

ದೇಶಪ್ರೇಮ ಮೆರೆದ ಮಣ್ಣಿದು.


ವಿಶ್ವಕೇ ಶಾಂತಿಯ ಮಂತ್ರ

ತೋರಿದರು ಮಹಾತ್ಮ,

ಶತ್ರುವನ್ನು ಪತನಗೊಳಿಸಿದ

ನಮ್ಮ ವೀರ ಯೋಧರು ಹುತಾತ್ಮ.


ಸ್ವಾತಂತ್ರ್ಯದ ಸ್ವಾದವ 

ಉಣಬಡಿಸಿದರು.

ಇಂದಿಗೂ ಏಂದಿಗೂ

ನಮ್ಮ ಕಾವಲು ಇವರು.


ಕಾಲದ ಪುಟಗಳು

ತಿರುವಿದಂತೆ.

ಸ್ವಾತಂತ್ರ್ಯ ಪೂರ್ವ ದಿನಗಳ

ನಾವು ಮರೆತೆವಂತೆ.


ಬದುಕಿನ ಬಂಡಿ

ಸಾಗಿದೆ ಬಹು ದೂರ.

ಮರಳಿ ಬರಲು ಮನಸಿರಲಿ

ಕಾಣದು ಸಹ ದ್ವಾರ.


ಬಡವ ಬಲ್ಲಿದ

ಅಳಿಸು ಈ ಬೇಧ.

ಪೂಜಿಸುವ ಕೈಗಳು

ಒರೆಸಲಿ ಕ್ರೋಧ.


ಇಟ್ಟಿಗೆ ಹೊರುವ ಕೈಗಳು

ಹಿಡಿಯಲಿ ಸ್ಲೇಟು ಬಳಪವ.

ಇವರೇ ಮುಂದೆ ಬರೆಯುವರು,

ಈ ದೇಶದ ಭವಿಷ್ಯವ.


ಶೋಶಿಸುವಿರೇಕೆ ಹೆಣ್ಣೆಂದು,

ಮರೆಯದಿರಿ

ಅವರಲ್ಲಿ ಒಬ್ಬರು

ನಿಮ್ಮ ತಾಯಿಯೆಂದು.


ಸ್ವರ್ಣಾಕ್ಷರಗಳಲಿ ಬರೆಯ ಬಯಸುವೆ

ನಮ್ಮ ಸರ್ವೋಚ್ಚ ಭಾರತದ 

ಇನ್ನುಳಿದ ಅಧ್ಯಾಯವ.

ಯುಗಯುಗಗಳೂ ಸಾರಲಿ,

ನಮ್ಮ ದೇಶದ ಮಹೋನ್ನತೆಯ.


ದಾರಿದೇಪವಾಗು ಭಾರತ,

ಕೀರ್ತಿ ಪತಾಕೆಯ ಹಾರಿಸುವ ರಥ,

ನಿನ್ನ ಜೊತೆಯಲ್ಲೇ,

ನಮ್ಮೆಲ್ಲರ ಜೀವನ ಪಥ.



Rate this content
Log in

Similar kannada poem from Inspirational