STORYMIRROR

Achala B.Henly

Abstract Classics Inspirational

3  

Achala B.Henly

Abstract Classics Inspirational

ಓ ಮುದ್ದು ಮನವೇ...

ಓ ಮುದ್ದು ಮನವೇ...

1 min
202

ಕೆಂಡವನುಗುಳುತಾ ಮಂಡೆಯನ್ನೇಕೆ ಬಿಸಿ ಮಾಡಿಕೊಳ್ಳುವೆ ಓ ಮುದ್ದು ಮನವೇ..?

ನಿನ್ನ ಮನಸ್ಸು ಚೆಂದಿದ್ದರೆ, ಬರುವ ಮಾತುಗಳೂ ಮುತ್ತಿನಂತೆ ಇರುವುದಲ್ಲವೇ..!!


ಅದ ಬಿಟ್ಟು ಚುಚ್ಚು ಮಾತುಗಳನ್ನಾಡುತಾ        

ನಿನ್ನ ತಲೆಯನ್ನಷ್ಟೇ ಅಲ್ಲದೇ

ಸುತ್ತಲ ಜಗವನ್ನೂ ಏಕೆ

ಸುಡು ಸುಡುವಂತೆ ಬಿಸಿ ಮಾಡುವೆ..?


ಪ್ರಕೃತಿ ವಿನಾಶದಿ ಭೂಮಾತೆ ನಲುಗಿರುವುದೇ

ಸಾಕೆಮಗೆ, ಮತ್ತೂ ಏಕೆ ಕಾವೇರಿಸುವ

ಮಾತಾಡಿ ಎಲ್ಲರ ಮನದಿ ವಿಷದುಂಬಿ

ಮುದ್ದು ಮನಸ್ಸನ್ನು ಹಾಳುಗೆಡವುವೆ..?!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract