STORYMIRROR

Lakumikanda Mukunda

Classics Inspirational Others

4  

Lakumikanda Mukunda

Classics Inspirational Others

ಗಜಲ್

ಗಜಲ್

1 min
277


ಹೊಂಗನಸಿನ ಇಂದ್ರಚಾಪದಿ ಏಳು ಬಣ್ಣ ಕಾಣದೆ ಕರ್ತಾರ..

ಬಣ್ಣ ಬಣ್ಣದ ಕನಸುಗಳಿಗೀಗ ಕೆಟ್ಟ ಕಣ್ಣು ಬಿದ್ದಿದೆ ಕರ್ತಾರ..


ಅಲಕೆಯಲಿ ಮೇರೆವ ಕುಬೇರನಿಗೂ ಸಂಪತ್ತಿನ ಮೋಹವಂತೆ

ಸಿಬಿಕೆಯೇರುವಾಗಿನ ಖಾಲಿ ಕರವ ಈ ಜಗ ಮರೆತಿದೆ ಕರ್ತಾರ..


ಚಿಗುರುವ ತರುಲತೆಗಳೆಲ್ಲ ಮುಖಬಾಡಿ ನಲುಗುತಿವೆ ಇಲ್ಲಿ

ಸುಳಿವ ತಂಗಾಳಿಯೂ ನಿಗಿಕೆಂಡದಂತೆ ಸುಡುತಿದೆ ಕರ್ತಾರ..


ಜಗದ ಚಿಂತಕರೆಲ್ಲ ಚಿತ್ತಗೆಟ್ಟು ಮದವೇರಿ ಚಿತೆಯೇರಿದ್ದಾರೆ

ಮೂಲೋಕವೇ ಮದಿರೆಯ ಮತ್ತಿಗೆ ಶರಣಾಗಿದೆ ಕರ್ತಾರ..


ಹಗಲಿಗೆ ಹೆಗಲಾದ ಕತ್ತಲೆಯಲಿ ಈ ಕಾಲವೂ ಬೆತ್ತಲಾಗಿದೆ 

ಪಾಪಿಗಳ ಮಧ್ಯೆ ಲಕುಮಿಕಂದನ ಪಯಣ ಸಾಗದೆ ಕರ್ತಾರ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics