STORYMIRROR

Prabhakar Tamragouri

Classics Inspirational Others

3  

Prabhakar Tamragouri

Classics Inspirational Others

ಎಲ್ಲಿಂದೆಲ್ಲಿಗೋ ಪಯಣ.......!

ಎಲ್ಲಿಂದೆಲ್ಲಿಗೋ ಪಯಣ.......!

1 min
222


ಎಂದಿನ ಹಾಗೇ ಮುಸ್ಸಂಜೆಯಲಿ ಗೂಡು ಸೇರೋ ತವಕದಲಿ ಸಾಲು ಕಟ್ಟಿ , ರೆಕ್ಕೆ ಬಿಚ್ಚಿ ಬಾನಕ್ಕೆ ಹಾರಿವೆ ಬೆಳ್ಳಕ್ಕಿಗಳು ಸೂರ್ಯ ಮುಳುಗುತ್ತಿದ್ದಾನೆ ಸಾಗರದ ತೆರೆಗಳ ನಡುವೆ ಅಂಶ ಅಂಶವಾಗಿ ಮಾಯವಾಗುತ್ತಿದೆ ಹೊಂಗಿರಣದ ಬೆಳಕು ಸುತ್ತೆಲ್ಲ ಎದುರಾಯಿತು ರಾತ್ರಿಯಗಳಿಗೆ ಮೂಡಿತು ಬೆಳ್ಳಿ ಆಗಸದ ತುಂಬಾ ಬೀಸುತ್ತಿದೆ ಮಂದ ಮಾರುತ ಹೊತ್ತು ತಂದಿದೆ ಲಯಬದ್ಧ ಸಂಗೀತ ಅದೋ ಕಾಣುತ್ತಿದೆ ದೂರದಂಚಿನಲ್ಲಿ ಮಿಣುಕು ದೀಪವೊಂದು ತೋರುತ್ತಿದೆ ಹಡಗಿನ ಪಥವನ್ನು 

ಸಾಗರದ ಮಧ್ಯೆ ಎದ್ದ ಭೀಕರ ಅಲೆಗೆ ತೊಯ್ದಾಡಿತು ಮನ ಎಷ್ಟೊಂದು ನೋವು , ಯಾತನೆಗಳು ಕತ್ತಲೆ ಕಳೆದು ಬೆಳಕು ಮೂಡುತ್ತಿದ್ದಂತೆ ಮುಗುಳು ನಗೆ ತುಟಿಯಂಚಿನಲ್ಲಿ ಸಾಗರದಂಚಿನಲ್ಲಿ ನಿಂತ ಬೆಳ್ಳಕ್ಕಿ ಸಾಲು ಎಣಿಕೆ ಅಸಾಧ್ಯ !

ಬಾರಿ ಬಾರಿ ಕಳೆಯುತ್ತಿದೆ ಹಗಲು ಇರುಳು ಗೂಡು ಸೇರೋ ತವಕದಲಿ ಸಾಲು ಕಟ್ಟಿ ರೆಕ್ಕೆ ಬಿಚ್ಚಿ ಬಾನಕ್ಕೆ ಹಾರಿವೆ ಬೆಳ್ಳಕ್ಕಿಗಳು ಎಲ್ಲಿಂದೆಲ್ಲಿಗೋ ಪಯಣ ......!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics