STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಧನ್ಯವಾದಗಳು ಗುರುದೇವ

ಧನ್ಯವಾದಗಳು ಗುರುದೇವ

1 min
306


 


ನಿಶೆಯ ಕಾರ್ಗತ್ತಲಿನಲಿ  

ದಿಶೆಗೆಟ್ಟು ನಾ ಕುಳಿತಾಗ

ಉಷೆಯ ಕಿರಣಗಳ ಹೊತ್ತು

ದಿಶೆಯ ತೋರಿದ ಹೇ ಗುರುವೇ 


ಸಂಸಾರದ ಲೆಕ್ಕಾಚಾರಗಳ 

ನಿಸ್ಸಾರವೆಂದು ಭೋಧಿಸುತ

ರಸರೂಪಿ ಚೈತನ್ಯದೆಡೆಗೆ 

ರಸ್ತೆ ತೋರಿಸಿದ ಹೇ ಗುರುವೇ


ಅಜ್ಞಾನವನು ಹೊಡೆದೋಡಿಸಿ

ಸುಜ್ಞಾನದ ದೀವಟಿಗೆ ಹಿಡಿದು

ಪ್ರಜ್ಞಾನಘನನನ್ನು ಕಾಣುವ 

ವಿಜ್ಞಾನ ಕಲಿಸಿದ ಹೇ ಗುರುವೇ


ಎನಗೆ ಉಪದೇಶಿಸಿದ ಗುರು

ನೀನು ಸಾಧಾರಣ ಮನುಜನಲ್ಲ

ನನ್ನ ಜೀವನದ ದಿಶೆ ಬದಲಿಸಿದ ದೈವ

ನಿನಗೆನ್ನ ಧನ್ಯವಾದಗಳು ಹೇ ಗುರುವೇ



Rate this content
Log in

Similar kannada poem from Abstract