STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಚೀಲಿ ಮತ್ತು ಚಿಟ್ಟೆಯ ರೆಕ್ಕೆಗಳು

ಚೀಲಿ ಮತ್ತು ಚಿಟ್ಟೆಯ ರೆಕ್ಕೆಗಳು

1 min
550


ಇಲ್ಲೇ ಬಿದ್ದಿದ್ದವಲ್ಲಾ ಆ ಚಿಟ್ಟೆಯ ರೆಕ್ಕೆಗಳು

ಹರಿದು ಚಿಂದಿಯಾಗಿ ಅನಾಥ ಶವದಂತೆ, 

ಆಗ ತಾನೆ ಮೈಗೆಲ್ಲಾ ಆ ಬಾನ ನೀಲಿ ರಂಗನ್ನೆಲ್ಲಾ ಬಳಿದುಕೊಂಡು 

ಜಂಭದಿಂದ ಆಗಸದೆತ್ತರಕ್ಕೆ ಹಾರುವೆನೆಂಬ ಭ್ರಮೆಯಲ್ಲಿ

 ಗಾಳಿಯೊಂದಿಗೆ ತೇಲುತ್ತಿದ್ದ ಅದೇ ಬಣ್ಣದ ಚಿಟ್ಟೆಯ ರೆಕ್ಕೆಗಳು 


ಈಗ ಗುರುತೇ ಸಿಗದ ಹಾಗೆ ಮಣ್ಣೊಳಗೆ

ಬಿದ್ದು ಮತ್ತದೇ ಗಾಳಿಯೊಡನೆ ಸೇರಿ ಹಾರುತ್ತಿವೆ‌.

ಹೇಗೋ ಮೇಲೆ ಹಾರುತ್ತಿದ್ದೇನೆ! ಯಾರ ಕೈಗೂ ಸಿಗಲಾರೆ,

ಕುಳಿತುಬಿಡೋಣ ಸಣ್ಣ ತಾತ್ಕಾಲಿಕ ವಿಶ್ರಾಂತಿಗೆಂದೇ

ಆ ಕೆಂಬಣ್ಣದ ಹೂವಿನ ಮೇಲೆ ಕುಳಿತದ್ದು


ಎಲ್ಲಿತ್ತೋ ಆ ಬೆಳ್ಳನೆಯ ಮಾರ್ಜಾಲ

ಅದರ ಕಣ್ಣಗಳು ಸೆಳೆದು ಬಿಟ್ಟವು

ಚಿಟ್ಟೆಯ ಕೊಬ್ಬಿದ ಕಾಯವ ಕಂಡು

 ಒಮ್ಮೆಲೆ ಛಂಗನೆ ಹಾರಿ ಅದರ

ಕಥೆಯನ್ನೇ ಮುಗಿಸಿಯೇ ಬಿಟ್ಟಿತು.


ಮತ್ತೆ ಅಲ್ಲೇನು ಕೆಲಸ ಹೊರಟಿತು

ಇಂತಹುದೇ ಅಮಾಯಕ ಚಿಟ್ಟೆಗಳ ಬೇಟೆಗೆ

ಮಾರ್ಜಾಲದ ಮಾಯಾ ಜಾಲಕ್ಕೊಳಗಾದ

ಉಸಿರಿಲ್ಲದ ಚಿಟ್ಟೆಯ ರೆಕ್ಕೆಗಳು

ಬಿದ್ದಲ್ಲಿಯೇ ತೆವಳುತ್ತಾ ಹಾರುತ್ತಲೇ ಇದ್ದವು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics