ಭುವಿಯು ಸಗ್ಗ
ಭುವಿಯು ಸಗ್ಗ
ಮನಕೆ ತಂಪು
ಬನದ ಸೊಂಪು
ತನವು ಅರಳಿ ಹಿಗ್ಗುತ
ಘನವು ಸಮಯ
ನೆನಪು ಅಮರ
ಮನವು ಪೂರ ಉನ್ನತ
ಅಂದ ಕಾನು
ಚಂದ ನೀನು
ಮಿಂದ ಸಮಯ ನೂತನ
ಬಂದ ಗಾಳಿ
ನಿಂದ ಚಣವು
ತಂದು ನಮಗೆ ಚೇತನ
ರವಿಯ ಬೆಳಕು
ಸಿಹಿಯ ಹಣ್ಣು ಹಂಪಲ
ವಿವಿಧ ಭಕ್ಷ
ಸವಿದು ತಣಿದು
ಕವಿದ ಸಮಯ ಮೌಲ್ಯವು
ಸಿರಿಯ ಹಸಿರು
ಭರದಿ ಬೆಳಕು
ಧರೆಯು ಚೆಂದ ಸಗ್ಗವು
ಹರುಷ ತಳಿರು
ಬಿರಿದ ಮನವು
ಮರಳಿ ಬರಲಿ ಸಮಯವು
