STORYMIRROR

Ranjitha M

Abstract Tragedy Others

4  

Ranjitha M

Abstract Tragedy Others

ಬೇಸರದ ಭಾವಗಳುದಯ

ಬೇಸರದ ಭಾವಗಳುದಯ

1 min
339

ಬೇಸರದ ಭಾವಗಳು

ಎದೆಯೊಳಗೆ ಸೇರಿ 

ಪದೆ ಪದೆ ನೆನಪಾಗಿವೆ

ಹಳೆಯ ನೆನಪುಗಳು

ಮನಸಿನ ಗಾಯಕೆ

ಯಾವ ಔಷಧಿಯಿಲ್ಲ

ಹತಾಶೆಯ ಸಾಗರದಿ

ಒದ್ದಾಡುತಿದೆ ಮನಸು

ಈಜಲು ಬಾರದೆ

ಸಾವು ಬದುಕಿನ ನಡುವೆ

ವಿವಿಲನೆ ಒದ್ದಾಡುತಿದೆ

ಬೇಸರದ ಭಾವಗಳು

ಹುಟ್ಟಿವೆ ಮನದಲಿ

ಹೇಳದೆ ಕೇಳದೆ 

ಕಳೆಯಂತೆ ಬೆಳೆದಿವೆ

ಅಂಧಕಾರದ ಅಳಿವಿಗೆ

ದಾರಿ ಕಾಣದಾಗಿದೆ

ಬೇಸರದ ಭಾವಗಳು

ಬೆಳೆದು ಹೆಮ್ಮರವಾಗಿವೆ

ಮನದಿ ಚಿಂತೆಯ 

ಫಲಪುಷ್ಪಗಳು ಚಿಗುರಿವೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract