STORYMIRROR

ಹೃದಯ ಸ್ಪರ್ಶಿ

Classics Inspirational Others

4  

ಹೃದಯ ಸ್ಪರ್ಶಿ

Classics Inspirational Others

ಅವಳು...!!

ಅವಳು...!!

1 min
465

ಎದೆಯ ಕದವ ತಟ್ಟುವಳು

ಹೊಸ್ತಿಲನು ದಾಟಲೊಲ್ಲಳು

ಸ್ನೇಹ ಸುಧೆಯ ಹರಿಸುವಳು

ಪ್ರೀತಿ ಅಮೃತ ಬಡಿಸಲೊಲ್ಲಳು


ಮನದ ಮಹಾರಾಣಿಯಾಗಿಹಳು

ಪ್ರೇಮ ದೇವತೆಯಾಗಲೊಲ್ಲಳು

ನೋವು ನಲಿವಿನ ರೂವಾರಿಯವಳು

ಸದಾ ಕಾಲ ಜೊತೆಗಿರಲೊಲ್ಲಳು


ಮನದ ತಂಗಾಳಿ ಅವಳು

ದಿನ ನಿತ್ಯ ಬೀಸಲೊಲ್ಲಳು

ಮೌನವನೂ ಮಾತಾಗಿಸಬಲ್ಲಳು

ಮನದ ಮಾತಿಗೆ ದನಿಯಾಗಲೊಲ್ಲಳು


ಜೀವನದ ಹಾದಿಯಲಿ ಏಕಾಂಗಿ ಅವಳು

ಜೊತೆಗೊಂದು ಸಾಂಗತ್ಯ ಬಯಸಲೊಲ್ಲಳು

ಮೌನದಲ್ಲಿಯೇ ಹಾಯಾಗಿರುವಳು

ಆಡಂಭರದ ಜೀವನಕೆ ಬಲು ದೂರ ಅವಳು


Rate this content
Log in

Similar kannada poem from Classics