ಆ ದಿನಗಳು
ಆ ದಿನಗಳು
ನೀನು ಬಿಂದಿಗೆ ಹಿಡ್ಕೊಂಡು
ನೀರಿಗೆ ಬಂದಾಗ.
ನಾನು ನಿನ್ನ ನೋಡಲು
ಓಡೋಡಿ ಬಂದಿದ್ದು.
ನೆನಪಿದೆಯಾ, ಆ ದಿನಗಳು
ಏನು ಅರೆಯದ ಬಾಲ್ಯ
ಪ್ರೀತಿಯು ಆಕರ್ಷಣೆಯು.
ನೀನು ನನ್ನ ಪ್ರೀತಿ ತಿರಸ್ಕರಿಸಿದಾಗ
ನಾನು ಕಣ್ತುಂಬ ಅತ್ತಿದ್ದು
ನಿನಗೆ ನೆನಪಿದೆಯಾ ಆ ದಿನಗಳು
ಇವಾಗ ನೆನೆಸಿಕೊಂಡರೆ ನಗು ಬರುವುದು
ಏನು ತಿಳಿಯದ ಆ ಬಾಲ್ಯದ ದಿನಗಳು
ನಿನಗೆ ನೆನಪಿದೆಯಾ ಆ ದಿನಗಳು.

