STORYMIRROR

Shyla Shree C

Romance

1  

Shyla Shree C

Romance

ಒಲವು

ಒಲವು

1 min
59

ನಿನ್ನಂತರಂಗದ 

ನಿನಾದಕ್ಕೆ ಕರಗಿ,

ನಿನ್ನೊಲವ ವರ್ಷದಲಿ

ನಿನ್ನೊಂದಿಗೆ ಬೆರೆಯಲು,

ನಿವೇದನೆಯ

ನಿಯೋಗದಿ

ನಿಂತಿರುವೆ

ನಿನ್ನರಸಿ..

ನೀನೇ ಬಾರದೆ,

ನಿರೀಕ್ಷೆಯ

ನಿರಾಶೆಯಿಂದ

ನಿರುತ್ಸಾಹಿಯಾಗದೆ,

ನಿಖರವಾಗಿ

ನಿನ್ನರಿಯಲು,

ನಿನ್ನೊಲವ

ನಿಲ್ದಾಣದ

ನಿವಾಸಿಯಾಗಿ

ನಿಮಂತ್ರಣ ಪಡೆಯುವೆ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance