STORYMIRROR

Vijaya Bharathi

Abstract Classics Others

3  

Vijaya Bharathi

Abstract Classics Others

ಸಂಕ್ರಾಂತಿ

ಸಂಕ್ರಾಂತಿ

1 min
213

ದಕ್ಷಿಣದಿಂದುತ್ತರಕೆ

ಕಟಕದಿಂ ಮಕರನೆಡೆಗೆ

ಸೂರ್ಯಪಥ ಸಂಚಲನ

ಅದುವೆ ಮಕರ ಸಂಕ್ರಮಣ


ಉದಿಸುವದು ಉತ್ತರಾಯಣ

ಮುಳುಗುವುದು ದಕ್ಷಿಣಾಯನ

ತೆರುವುದಾಗ ದೇವಯಾನ

ಪಾವನತಮ ಸಂಕ್ರಮಣ


ಸುಗ್ಗಿಯಾ ಸಂಭ್ರಮಗಳು

ಎಲ್ಲೆಲ್ಲೂ ಹಬ್ಬುವುವು

ಕಬ್ಬು ಬತ್ತಗಳಾ ತೆನೆ

ಹರುಷದಿಂ ತೂಗುವುವು


ಧಾನ್ಯಗಳಾ ರಾಶಿಗಳು

ಮುಗಿಲೆತ್ತರಕ್ಕೇರುವುವು

ಮನೆಮನೆಗಳಾ ಕಣಜಗಳು

ಹಿಗ್ಗಿ ಹಿರಿದಾಗುವುವು


ಎಳ್ಳು ಬೆಲ್ಲಗಳ ನೀಡುತ

ಒಳ್ಳೆ ಮಾತುಗಳ ಆಡುತ

ಸಂಭ್ರಮದ ಸಂಕ್ರಾಂತಿ

ನೀಡಲೆಲ್ಲರಿಗೂ ಸುಖ ಶಾಂತಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract