Ananth Singanamalli

Classics Inspirational Others

4  

Ananth Singanamalli

Classics Inspirational Others

ನಾನೂ ಬರ್ತೀನಿ ಅಪ್ಪ

ನಾನೂ ಬರ್ತೀನಿ ಅಪ್ಪ

2 mins
70


ನಾನೂ ಬರ್ತೀನಿ ಅಪ್ಪ.. 

            

ಅಂದು ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಚಪ್ಪಲಿ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಲ್ಯಾಪ್ ಟಾಪ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....?ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಅದೇ ಹಳೇ ಕ್ಯಾಶ್ ಬ್ಯಾಗ್ ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.


ನಡೆಯುತ್ತಿದ್ದರೆ ಚಪ್ಪಲಿಯಲ್ಲಿ ಏನೋ ಚುಚ್ಚಿದಂತಾಯ್ತು.ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಎತ್ತಿ ನೋಡಿದಾಗ ಚಪ್ಪಲಿಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೇ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ. ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಬ್ಯಾಗ್ ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ ತೆಗೆದು ಕೊಂಡ ಪಿ ಫ್ ಲೋನ್ ರಶೀದಿ, ನ್ಯೂ ಮಾಡೆಲ್ ಆಪಲ್ ಮೊಬೈಲ್ ಖರೀದಿಸಿದ ಬಿಲ್ಲು. ಅದು ನಾನು ಹಠಮಾಡಿದಾಗ, ನನಗಾಗಿ ಕೊಡಿಸಿದ್ದು.ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಚಪ್ಪಲಿ ಗಳನ್ನು ಹಾಕಿಕೊಂಡು ಬರುವಂತೆ ಅವರಿಗೆ ಮೇನೇಜರ್ ಕೊಟ್ಟ ನೋಟೀಸ್ ಲೆಟರ್. ಹೌದು ಅಮ್ಮ ಹೊಸ ಚಪ್ಪಲಿ ತೊಗೊಳ್ಳಿ ಎಂದು ನಾಲ್ಕು ತಿಂಗಳಿಂದ ಹೇಳುತ್ತಿದ್ದರೂ, ಅಪ್ಪ "ಇನ್ನೂ ಆರು ತಿಂಗಳು ಬರುತ್ತವೆ ಬಿಡೆ. ನನಗಿಂತ ಮಗನ ಆಸೆ ಹೆಚ್ಚಿನದಲ್ಲವಾ, ಮಗ ಸಂತಸ ಪಟ್ಟರೆ ಅಪ್ಪನಿಗೆ 

ಹೊಸ ಚಪ್ಪಲಿ ಹಾಕೊಂಡಂತೆ ಆಗುತ್ತೆ" ಎನ್ನುತ್ತಿದ್ದರು. 

   ನಮ್ಮ ಶೋ ರೂಮಲ್ಲಿ ಹೊಸ ಆಫರ್ ಈ Exchange ಮೇಳದಲ್ಲಿ ಹಳೆಯ ಲ್ಯಾಪ್ ಟಾಪ್ ಕೊಟ್ಟು ಹೊಸ ಲ್ಯಾಪ್ ಟಾಪ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು. 


ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಓಲ್ಡ್ ಮಾಡೆಲ್ ಲ್ಯಾಪ್ ಟಾಪ್ ಕಾಣಿಸುತ್ತಿಲ್ಲವಲ್ಲಾ ....? ನೆನಪಾಯಿತು.ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ.....

   ಈಗ ತೂತಾದ ಚಪ್ಪಲಿಯಿಂದ ನೋವಿನ ಅನುಭವ ಆಗಲಿಲ್ಲ. 

    ಮನೆಯಲ್ಲಿ ಅಪ್ಪ ಇಲ್ಲ... ಲ್ಯಾಪ್ ಟಾಪ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಫರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....!

    ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....!

  " ಬೇಡ ಅಪ್ಪ...! ನನಗೆ ಲ್ಯಾಪ್ ಟಾಪ್ ಬೇಡ..........ನೀವು ಬನ್ನಿ..." ನೋವಿನಿಂದ ಕೂಗಿದೆ," ನಾನೂ ನಿಮ್ಮಜೊತೆ ಬರ್ತೀನಿ ಅಪ್ಪ, ನನ್ನ ಕೊನೆ ಉಸಿರು ಇರುವ ವರೆಗೂ ನಿಮ್ಮ ಕಷ್ಟಗಳ ಜೊತೆಯಾಗಿ ಇರ್ತೀನಿ ಯೋಚನೆ ಮಾಡ ಬೇಡಿ ". ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಉದುರಿತು. 

   ಅಪ್ಪ -ಮಗನ ಬಾಂಧವ್ಯದ ಅರಿವು ಮೂಡಿಸಿ ಕಣ್ಣು ತೆರೆಸಿದ ನನ್ನ ಆರಾಧ್ಯ ದೈವ ಶ್ರೀರಾಘವೇಂದ್ರ ಸ್ವಾಮಿಗಳಿಗೆ ಭಕ್ತಿ ಪೂರ್ವಕವಾಗಿ ನಮಿಸಿದೆ.ಅವರು ಪಟ್ಟ ಕಷ್ಟ ಗಳಿಂದಲೇ ನಾನೀಗ ಒಂದು ಕಂಪನಿ CEO.ಸದಾ ಅಪ್ಪ ಅಮ್ಮನ ಸೇವೆ ಮಾಡಿ ಅವರ ಋಣ ಮನಃಪೂರ್ವಕವಾಗಿ ತೀರಿಸ್ತಾ ಇದೀನಿ. ನನ್ನ ಜೀವನದ ಮಹದಾಸೆ ಉಳಿಸಿ ಕೊಳ್ತೀನಿ ಎನ್ನೋ ಆತ್ಮವಿಶ್ವಾಸವಿದೆ. 

   "ಮಾತೃಭ್ಯೋ ನಮಃ, ಪಿತೃಭ್ಯೋ ನಮಃ "

          


Rate this content
Log in

Similar kannada story from Classics