ಕಪ್ಪು ವರ್ತುಲಗಳು
ಕಪ್ಪು ವರ್ತುಲಗಳು


ಕನ್ನಡಿಯಲ್ಲಿ ಪದೇ ಪದೇ ನೋಡುತ್ತಿದ್ದ ಭುವಿ ಕಣ್ಣುಗಳ ಸುತ್ತಲ ಭಾಗಗಳು ಕಪ್ಪಾದಂತೆ ಕಾಣಿಸಿ ಗಾಬರಿಯಾದಳು. ವಿಶ್ವ ಸುಂದರಿ ಸ್ಪರ್ಧೆಗೆ ಹೋಗಬೇಕೆಂಬ ಕನಸು ನುಚ್ಚು ನೂರಾಗಿ ಆಕಾಶವೇ ಕಳಚಿ ಬಿದ್ದಂತಾಗಿ ಕುಸಿದಳು. ಸಾವರಿಸಿಕೊಂಡು ಸೋಫಾ ಮೇಲೆ ಒರಗಿ ಕೊಂಡಳು. ತಾನು ವಿಶ್ವ ಸುಂದರಿಗಿಂತ ಕಮ್ಮಿಯಿಲ್ಲ ಅಂತಿದ್ದವಳು ನಿರಾಶೆಯಿಂದ ಕಣ್ಣೀರು ಸುರಿಸಿದಳು. ಯಾಕೆ ನನಗೇ ಹೀಗೆ ಈ ಹಾಳು ಕಪ್ಪು ವರ್ತುಲಗಳು ಬಂದವು. ಒಂದು ಸಲವೂ ಗಮನಿಸಿರಿಲಿಲ್ಲ. ಜಂಭದ ಕೋಳಿಯಂತೆ ಮೆರೆಯುತ್ತಿದ್ದೆ. ತೀರ್ಪುಗಾರರ ಮುಂದೆ ಹೇಗೆ ಹೋಗಲಿ. ವಿಶ್ವ ಸುಂದರಿ ಪಟ್ಟ ಸುಮ್ಮನೆ ಸಿಗತ್ತ. ಮುಖ ನುಣುಪಾಗಿರಬೇಕು ಸೌಂದರ್ಯ ಸೂಸುತ್ತಿರಬೇಕು. ಕಣ್ಣುಗಳು ಮಿಂಚಬೇಕು. ಯಾವ ಕಲೆಗಳು ಇರಬಾರದು. ಫಿಸಿಕಲಿ ಮೆಂಟಲಿ ಹೆಲ್ತಿಲಿ ಫಿಟ್ ಆಗಿರ್ಬೇಕು. ಈ ಕಪ್ಪು ವರ್ತುಲಗಳನ್ನು ಬಿಟ್ಟರೆ ತಾನು ಎಲ್ಲದರಲ್ಲೂ ಫಿಟ್. ಯಾಕೆ ಹೀಗಾಯ್ತು. ಮೂರು ತಿಂಗಳಲ್ಲಿ ಎಲ್ಲಾ ರೀತಿಯಿಂದ ಫಿಟ್ ಆದರೆ ಮಾತ್ರ ಸ್ಪರ್ಧೆ ಗೆಲ್ಲಬಹುದು. ಅಯ್ಯೋ ದೇವ್ರೇ ಯಾಕೆ ಹೀಗೆ ಪರೀಕ್ಷೆ ಮಾಡ್ತಿಯಾ. ನಾನೇನು ಮಾಡ್ಲಿ. ವಿಲವಿಲ ಒದ್ದಾಡಿದಳು. ತಲೆ ಸಿಡಿಯುತ್ತಿತ್ತು. ರೋಲಾನ್ ಹಚ್ಚಿ ಕೊಂಡು ಕಣ್ಣು ಮುಚ್ಚಿದಳು. ಕಾಣದ ಕೈಯೊಂದು ನನ್ನ ತಲೆ ಒತ್ತಿದಂತಾಯ್ತು. ನೋಡಿದರೆ ಹರ್ಷ. ನನ್ನ ದುಃಖ ತಿಳಿದು ಸಾಂತ್ವನ ಹೇಳುತ್ತಿದ್ದ. "ಇಪ್ಪತ್ತೊಂದನೇ ಶತಮಾನದಲ್ಲಿ ಇಷ್ಟು ಗಾಬರಿನಾ? ಹೆದರಬೇಡ ನನ್ನ ಸ್ನೇಹಿತ ಚರ್ಮವೈದ್ಯ.ಯಾಕೆ ಹೀಗೆ ಬರುತ್ತದೆ ಅದಕ್ಕೆ ಪರಿಹಾರ ಕೇಳೋಣ. ಒಂದು ಕ್ಷಣಕ್ಕೆ ಆತ್ಮಸ್ಥೈರ್ಯ ಕಳ್ಕೋಬೇಡ. ಈಗ ಹಾಯಾಗಿ ಮಲಕ್ಕೋ" ಎಂದು ಹೇಳಿ ಹೋದ.
ಮರುದಿನ ಹರ್ಷನ ಸ್ನೇಹಿತ Dr.ಅರವಿಂದರ ಕ್ಲಿನಿಕ್ ಹೋದಳು ಭುವಿ.ಹರ್ಷ ಎಲ್ಲಾ ವಿವರಿಸಿ ಭುವಿ ಪರಿಚಯ ಮಾಡಿಸಿದ. ಕೂತ್ಕೋಳಿ ನಾನೆಲ್ಲ ಸಮಸ್ಯಗೆ ಪರಿಹಾರ ಹೇಳ್ತಿನಿ ಎಂದ ಅರವಿಂದ.
ನಿಮಗೆ ಗೊತ್ತೇ ಇದೆ ಹೆಣ್ಣಿನ ಚೆಲುವಿನ ಮುಖಕ್ಕೆ ಕಣ್ಣೇ ಕಾರಣ. ಆ ಕಣ್ಣಿನ ಕಾಂತಿಯೇ ಆಕರ್ಷಣೆ. ಕಣ್ಣಿನ ಸುತ್ತಲಿನ ಭಾಗಗಳನ್ನು ಅರೋಗ್ಯವಾಗಿಟ್ಟುಕೊಂಡರೆ ಸೌಂದರ್ಯ ಇಮ್ಮಡಿಸುತ್ತದೆ. ಈ ಕಪ್ಪು ವರ್ತುಲಗಳಿಗೆ ಮುಖ್ಯ ಕಾರಣ ನಿದ್ರಾಹೀನತೆ, ಖಿನ್ನತೆ
ದುಶ್ಚಟಗಳ ದಾಸರಾಗುವದು. ಇದು ಚರ್ಮಕ್ಕೆ ಸಂಬಂಧಿಸಿದ ಖಾಯಿಲೆ ಅಥವಾ ವಂಶ ಪರಂಪರೆಯು ಹೌದು.ಕೆಲ ಅಲಂಕಾರದ ಬಣ್ಣಗಳು ಇದಕ್ಕೆ ಕಾರಣ. ಇವನ್ನೆಲ್ಲ ನೈಸರ್ಗಿಕ ಚಿಕಿತ್ಸೆಯಿಂದ ಗುಣ ಪಡಿಸಬಹುದು. ಚೆನ್ನಾಗಿ ನಿದ್ದೆ ಮಾಡುವದು, ಇಲ್ಲ ಸಲ್ಲದ ವ್ಯಥೆ ಪಡುವದು, ಮದ್ಯಪಾನ, ಧೂಮ್ರಪಾನ ತ್ಯಜಿಸುವದು ಕಪ್ಪು ವರ್ತುಲಗಳನ್ನು ಮಾಯವಾಗಿಸುತ್ತವೆ. ಭುವಿ ಅವ್ರೇ ನನ್ನ ಲೆಕ್ಚರ್ ಬೇಸರ ತಂದಿತ? ಅರವಿಂದನ ಪ್ರಶ್ನೆಗೆ ಇಲ್ಲವೆಂದು ತಲೆಯಾಡಿಸಿದಳು. ಅರವಿಂದ ಮುಂದುವರೆಸಿದ. ಪ್ರತಿದಿನ ರಾತ್ರಿ ಬದಾಮಿ ಎಣ್ಣೆ ಕಣ್ಣಸುತ್ತ ತಿಕ್ಕಿ ಬೆಳಿಗ್ಗೆ ಬೆಚ್ಚನ್ನ ನೀರಿನಲ್ಲಿ ತೊಳೆಯಿರಿ. ಒಂದು ವಾರದಲ್ಲಿ ಬದಲಾವಣೆ ನೋಡಿ. ಹಾಗೇ ಈ ವಿಟಮಿನ್ ಪದಾರ್ಥ ಸೇವಿಸಿ. ಸಾಧ್ಯವಾದರೆ ಸೌತೆಕಾಯಿ ಹೋಳನ್ನು ಕಣ್ಣು ಮೇಲೆ ಇಟ್ಟುಕೊಳ್ಳಿ. ಔಷಧಿ ಮಾತ್ರೆ ನಕಲಿ
ಎಣ್ಣೆಗೆ ಹಣ ವ್ಯಯ ಮಾಡಿ ಮೋಸಹೋಗ್ಬೇಡಿ. ಇವೆಲ್ಲ ತಪ್ಪದೆ ದಿನ ಮಾಡಿ ಮನಸಿನ, ಚರ್ಮದ ಅರೋಗ್ಯ ಕಾಪಾಡಿಕೊಳ್ಳಿ. ಒಂದು ತಿಂಗಳಲ್ಲಿ ನಿಮ್ಮ ಈ ಕಪ್ಪು ವರ್ತುಲಗಳು ಮಾಯವಾಗಿ ನೀವು ನಿಮ್ಮ ಗುರಿ ತಲುಪುವಿರಿ. ಇದು ನೂರಕ್ಕೆ ನೂರು ಸತ್ಯವೆಂದು ಭುವಿಗೆ ಸಮಾಧಾನ ಹೇಳಿ, ಆಲ್ ದಿ ಬೆಸ್ಟ್ ಹೇಳಿದ.
ಮರುದಿನದಿಂದಲೇ ಅರವಿಂದ ಹೇಳಿದ ಎಲ್ಲವನ್ನು ಚಾಚೂ ತಪ್ಪದೆ ಮಾಡಿದಳು ಭುವಿ.
ಹರ್ಷನ ಸಾಂತ್ವನ, ನೈಸರ್ಗಿಕ ಚಿಕಿತ್ಸೆ ಫಲಿಸಿ ಒಂದು ತಿಂಗಳಲ್ಲಿ ಕಣ್ಣ ಸುತ್ತಲಿನ ಕಪ್ಪು ವರ್ತುಲಗಳು ನಿವಾರಣೆಯಾಗಿ ಮುಖದ ಅರೋಗ್ಯ ಹೆಚ್ಚಿ ಕಣ್ಣು ಕಾಂತಿಯುತವಾದವು. ಭುವಿಯ ಆನಂದಕ್ಕೆ ಪಾರವೇ ಇರಲಿಲ್ಲ. ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವ ಸುಂದರಿ ಕಿರೀಟ ಧರಿಸಿದಳು. ಅಂದಿನ ಭಾಷಣದಲ್ಲಿ ಕಪ್ಪು ವರ್ತುಲಗಳ ವಿಚಾರ ಎಲ್ಲರಿಗೂ ತಿಳಿಸಿದಳು. ಹರ್ಷನ ಬಾಳಸಂಗಾತಿಯಾಗಿ, ಅರವಿಂದನಿಗೆಕೃತಜ್ಞತೆ ಹೇಳಿದಾಗ ಸ್ವರ್ಗದಲ್ಲಿದ್ದಂತೆ ಅನಿಸಿತು.
"ಚರ್ಮದ ಅರೋಗ್ಯವೇ ಸೌಂದರ್ಯ ವರ್ಧಕ "
ಎಂಬ ಸ್ಲೋಗನ್ ಬಿಡುಗಡೆ ಮಾಡಿದಳು.ಅವಳ ನಿರಾಶೆ ಕಷ್ಟಗಳೆಲ್ಲ ಕಪ್ಪು ವರ್ತುಲ ಗಳಂತೆ ಅಳಿಸಿ ಹೋದವು.