Kavya Setty

Crime Thriller

2.8  

Kavya Setty

Crime Thriller

ಮುರಿದು ಬಿತ್ತು ಕಾಮುಕನ ಅಟ್ಟಹಾಸ

ಮುರಿದು ಬಿತ್ತು ಕಾಮುಕನ ಅಟ್ಟಹಾಸ

12 mins
149



ಮನೆಯೊಳಗೆ ಕಾಲಿಟ್ಟ ದೇವಮ್ಮನ ಕಣ್ಣಿಗೆ ಕಂಡದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳು, ತಡಮಾಡದೆ ದೇವಮ್ಮ ಇರುವ ಒಂದು ಕೋಣೆಯೊಳಗೆ ಹೋಗಿ ನೋಡುತ್ತಾಳೆ, ಫ್ಯಾನ್ನಲ್ಲಿ ತೂಗುತ್ತಿದ್ದ ಇಪ್ಪತ್ತರ ಹರೆಯದ ವಸುಮತಿ ದೇಹ ಕಂಡ ಕೂಡಲೇ ಏನೂ ಮಾಡುವುದು ತಿಳಿಯದೆ ಪಕ್ಕದ ಮನೆಯ ರಾಜೇಂದ್ರನನ್ನು ಕೂಗಿ ಇರುವ ವಿಷಯ ತಿಳಿಸಿ ಪೋಲಿಸ್ಗೆ ಸುದ್ದಿ ಮುಟ್ಟಿಸುತ್ತಾರೆ 



ಇದು ಮೊದಲನೆ ಬಾರಿ ಆಗಿದ್ದರೆ ಯಾರು ಏನು ಯೋಚನೆ ಮಾಡುತ್ತ ಇರಲಿಲ್ಲ, ಆ ಮನೆಯಲ್ಲಿ ನಡೆದ ಆರನೇ ಸಾವು ಇದು, ಅದರಲ್ಲೂ ಎಲ್ಲಾ ಸತ್ತಿರುವುದು ಹುಡುಗಿಯರೆ, ಎಲ್ಲಾ ಸಾವಿಗೂ ಮುಂಚೆ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂಬುದು 




ಆದ್ರೆ ಆ ಮನೆಯಲ್ಲಿ ಇದ್ದದ್ದು ದೇವಮ್ಮ ಮತ್ತೆ ಆಕೆಯ ಬುದ್ದಿಮಾಂದ್ಯ ಮಗ ರಾಜು ಮಾತ್ರ,,ದೇವಮ್ಮನಿಗೂ ವಯಸ್ಸಾದ ಕಾರಣ ಜಾಸ್ತಿ ಕೆಲಸ ಮಾಡಲು ಆಗದೆ ಹೋದಾಗ, ಮಗನನ್ನು ನೋಡಿಕೊಳ್ಳುವ ಸಲುವಾಗಿ ಮತ್ತೆ ಜೀವನ ನಡೆಸಲು ಮಾಡಿದ ಉಪಾಯವೆ ಈ pg, ಇರುವ ಎರಡು ಕೋಣೆಯಲ್ಲಿ ಒಂದು ಕೋಣೆ ಅವರಿದ್ಧು ಮತ್ತೊಂದು ಕೋಣೆ pg ಗೆ ಅಂತ ಇಟ್ಟಿದ್ದರು, 

ದೇವಮ್ಮನಿಗೆ ಹೆಣ್ಣು ಮಕ್ಕಳು ಕಂಡರೆ ವಿಶೇಷ ಪ್ರೀತಿ ಕಾಳಜಿ ಹಾಗಾಗಿ ಅವರು ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ತಮ್ಮಿಂದ ಸಹಾಯ ಆಗಲಿ ಅಂತ ಜಾಸ್ತಿ ಹಣ ಪಡೆಯದೆ ಅವರ ಮನೆಯ ಕೋಣೆಯಲ್ಲಿ ಜಾಗ ಕೊಟ್ಟಿದ್ದರು 




ಅವರ ಮನೆಗೆ ಬಂದ ಮೊದಲ ಹುಡುಗಿ ಜ್ಯೋತಿ, ಅಪ್ಪ ಅಮ್ಮ ಇಲ್ಲದ ಅನಾಥ ಹುಡುಗಿ, ಕೆಲಸ ಮಾಡುವ ಜಾಗಕ್ಕೆ ದೇವಮ್ಮನ ಮನೆ ಹತ್ತಿರ ಇದ್ದದ್ದರಿಂದ ಅಲ್ಲೇ ಉಳಿದುಕೊಳ್ಳುತ್ತಾಳೆ, ಆಕೆ ಕೂಡ ಮಗಳ ಹಾಗೆ ಅಲ್ಲಿರುತ್ತಾಳೆ, ಆರಾಮಾಗಿ ಕೆಲಸಕ್ಕೆ ಹೋಗಿ ಬರುತ್ತಿದ್ದ ಹುಡುಗಿ, ದಿನ ಕಳೆದಂತೆ ಮಂಕಾಗಿ ಹೋದಳು, ದೇವಮ್ಮ ಎಷ್ಟೇ ಕೇಳಿದರು ಒಂದು ಮಾತು ಸಹ ಆಡದೆ ಇರುತ್ತಿದ್ದಳು, 




ಹೀಗೆ ಒಂದು ದಿನ ದೇವಮ್ಮ ದೇವಸ್ತಾನಕ್ಕೆ ಹೋಗಿ ಬರೋಷ್ಟರಲ್ಲಿ ಜ್ಯೋತಿಯ ದೇಹ ಫ್ಯಾನ್ ಗೆ ಸುತ್ತಿಕೊಂಡಿರುತ್ತೆ, ಆಕೆಯ ಜೀವ ಈ ಜಗತ್ತಿನಿಂದ ದೂರ ಹೋಗಿರುತ್ತದೆ, ಆಗ ನಡೆದ ಪೋಲಿಸ್ ತನಿಖೆಯಲ್ಲಿ ಗೋತ್ತಾಗಿದ್ಧೆ ಜ್ಯೋತಿಯ ಮೇಲೆ ನಿರಂತರ ಅತ್ಯಾಚಾರ ಆಗಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಅಂತ, ಈ ವಿಷಯ ದೇವಮ್ಮನಿಗೆ ನಂಬುವುದಕ್ಕೆ ಆಗಲಿಲ್ಲ 




ಎಲ್ಲಾ ವಿಷಯ ಹೇಳುತ್ತಿದ್ದ ಹುಡುಗಿಗೆ ಈ ರೀತಿ ಆದದ್ದು ದೇವಮ್ಮನಿಗೆ ನಂಬುವುದಕ್ಕೆ ಆಗಲಿಲ್ಲ, ಜ್ಯೋತಿ ಕೆಲಸ ಮಾಡುವ ಜಾಗದಲ್ಲಿ ಆಕೆ ಬಗ್ಗೆ ಒಳ್ಳೆ ಅಭಿಪ್ರಾಯ ಇತ್ತು, ಅವಳಿಗೆ ಯಾವ ಗಂಡಸರ ಸಹವಾಸ ಸಹ ಇರಲಿಲ್ಲ, ಕೊನೆಗೂ ಆ ಕೇಸ್ ಅಲ್ಲಿಗೆ ನಿಂತಿತು 




ಕಾಲ ಹಾಗೆ ಇರದೆ, ದೇವಮ್ಮ ಕೂಡ ಆ ಕೋಣೆ ಬಾಡಿಗೆಗೆ ಬೇರೆ ಯಾರಾದರೂ ಸಿಗುತ್ತಾರ ಅಂತ ಹುಡುಕ್ತ ಇದ್ದ ಹಾಗೆ ಬಂದವಳು ವೀಣಾ, ಆಕೆ ಬಹಳ ಮೌನಿ, ಎಷ್ಟು ಬೇಕು ಅಷ್ಟೆ ಮಾತಾಡುತ್ತ ಇದ್ದ ಹುಡುಗಿ, ಆಕೆಗೆ ಕೆಲಸದ ಒತ್ತಡ ಜಾಸ್ತಿ, ಮನೆಯಲ್ಲಿ ಇರುತ್ತಿದ್ದದ್ದೆ ಕಮ್ಮಿ, ಮನೆಯಲ್ಲಿ ಇದ್ದರೂ ಇರದಂತೆ ಇದ್ದ ಹುಡುಗಿ, ಆಕೆ ಬಂದು ಒಂದು ವರ್ಷ ಆದರೂ ಮನೆಯಲ್ಲಿ ಏನೂ ದುರ್ಘಟನೆ ನಡೆದಿರಲಿಲ್ಲ, ಆಗ ದೇವಮ್ಮನಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು, ಆದ್ರೆ ಅದು ಜಾಸ್ತಿ ದಿನ ಇರಲಿಲ್ಲ, ಇದ್ಧಕಿದ್ಧ ಹಾಗೆ ಒಂದು ದಿನ ಕಣ್ಮರೆಯಾಗಿ ಹೋದ ಹುಡುಗಿ ವಾಪಸ್ ಬಂದಾಗ ಬೇರೆ ರೀತಿಯಾಗಿ ಕಾಣಿಸುತ್ತಿದ್ದಳು, ಮೌನದ ಹುಡುಗಿ ಏನೇ ಕೇಳಿದರೂ ಅಳುವುದು ಅಷ್ಟೆ ಮಾಡುತ್ತ ಇದ್ದಳು, ದೇವಮ್ಮ ಆಕೆಯ ಮನೆಯವರ ಬಗ್ಗೆ ವಿಚಾರಿಸಿದರು ವೀಣಾ ಏನು ಹೇಳಲಿಲ್ಲ, ಇದ್ಧಕಿದ್ಧ ಹಾಗೆ ಒಂದು ದಿನ ಜ್ಯೋತಿಯ ಹಾಗೆ ಅವಳು ನೇಣು ಹಾಕಿದ ಸ್ತಿತಿಯಲ್ಲಿ ಕಂಡಳು, 



ದೇವಮ್ಮನಿಗೆ ಯಾರ ಮೇಲು ಸಹ ಅನುಮಾನ ಬರಲಿಲ್ಲ, ತನ್ನ ಮನೆಯಲ್ಲಿ ಆಗುತ್ತಿದ್ದ ಘಟನೆಗಳಿಗೆ ಸಾಕ್ಷಿಯಾಗಿ ಇದ್ದಳು 




ಆದಾಗಿ 3-4 ಹುಡುಗಿಯರು ಬಂದು 4-5 ತಿಂಗಳಲ್ಲಿ ಶಿವನ ಪಾದ ಸೇರುತ್ತ ಇದ್ದರು, ಎಲ್ಲರು ಒಂದೇ ರೀತಿ ಸಾಯುತ್ತ ಇದ್ದರು, ಆದರೆ ಕಾರಣ ಯಾರಿಗೂ ಸಹ ತಿಳಿಯಲಿಲ್ಲ 




ಪೋಲಿಸರು ಸಹ ಎಷ್ಟೇ ತಿಳಿಯುವ ಪ್ರಯತ್ನ ಪಟ್ಟರು ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ, 

ಆ ಸಮಯದಲ್ಲಿ ಒಂದು ಹುಡುಗಿ ಮನೆ ಬಾಡಿಗೆಗೆ ಕೇಳಿಕೊಂಡು ದೇವಮ್ಮನ ಮನೆಗೆ ಬಂದಳು, ಆದರೆ ಇಷ್ಟೆಲ್ಲಾ ಅವಾಂತರ ಆದಮೇಲೆ ದೇವಮ್ಮನಿಗೆ ಯಾರ ಮೇಲೂ ನಂಬಿಕೆ ಇರಲಿಲ್ಲ, ಮತ್ತೆ ಮನೆಯಲ್ಲಿ ಮತ್ತೊಂದು ಘಟನೆ ನಡೆದರೆ ಅದಕ್ಕೆ ತಾನೆ ಹೊಣೆಯಾಗ ಬೇಕಾಗುತ್ತದೆ ಅನ್ನಿಸಿ, ಆ ಹುಡುಗಿಗೆ ಮನೆ ಬಾಡಿಗೆಗೆ ಕೊಡುವುದಕ್ಕೆ ಆಗುವುದಿಲ್ಲ ಅಂತ ಎಷ್ಟೇ ಹೇಳಿದರೂ ಸಹ ಆ ಹುಡುಗಿ ಪಟ್ಟು ಬಿಡದೆ ಅಲ್ಲಿಯೇ ಇರಬೇಕು ಅಂತ ದೇವಮ್ಮನ ಹತ್ತಿರ ಕೇಳಿಕೊಳ್ಳುತ್ತಾಳೆ, ಆ ಹುಡುಗಿಯ ಒತ್ತಾಯಕ್ಕೆ ಮಣಿದು ಅಲ್ಲಿರಲು ಒಪ್ಪಿಗೆ ಸೂಚಿಸುತ್ತಾರೆ ದೇವಮ್ಮ 



ಆ ಹುಡುಗಿ ಮನೆಗೆ ಬಂದ ಮೇಲೆ ದೇವಮ್ಮ ಆಕೆ ಕೆಲಸ ಮಾಡುವ ಜಾಗ, ಅವಳ ಹಿನ್ನಲೆ, ಹಾಗೆ ಅವರ ಹೆತ್ತವರ ವಿಳಾಸ ಎಲ್ಲಾ ಪಡೆದು ಪೋಲಿಸ್ಗು ವಿಷಯ ತಿಳಿಸಿದ್ದರು, ಆ ಹುಡುಗಿ ಯಾವುದಕ್ಕೂ ಮರು ಮಾತನಾಡದೆ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಕೊಟ್ಟಳು,



ಆ ಹುಡುಗಿ ಒಂದು ಪ್ರೈವೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತ ಇದ್ದಳು, ತಾನಾಯಿತು ತನ್ನ ಕೆಲಸ ಆಯಿತು ಅಂತ ತನ್ನ ಪಾಡಿಗೆ ತಾನು ಇದ್ದಳು, ದೇವಮ್ಮನ ಬಳಿ ಕೂಡ ಎಷ್ಟು ಬೇಕು ಅಷ್ಟೆ ಮಾತಾಡುತ್ತ ಇದ್ದಳು, ಸುಮಾರು ಮೂರು ತಿಂಗಳ ನಂತರ ಒಂದು ದಿನ ತನ್ನ ಹೆತ್ತವರನ್ನು ನೋಡಿಕೊಂಡು ಬರ್ತಿನಿ ಅಂತ ದೇವಮ್ಮನ ಬಳಿ ಹೇಳಿ ಆ ಹುಡುಗಿ ಮನೆಯಿಂದ ಹೊರಡುತ್ತಾಳೆ, ಆದ್ರೆ ಅವಳು ಸೀದಾ ಹೋಗಿದ್ದು ಪೋಲಿಸ್ ಸ್ಟೆಷನ್ಗೆ 




ಅಲ್ಲಿನ ಕೆಲಸ ಮುಗಿಸಿ ಇನ್ನೇನು ಹೊರಡಬೇಕು ಅಷ್ಟರಲ್ಲಿ ಒಬ್ಬ ಪೇದೆ ಬಂದು ಮೇಡಂ ಇದು ಒಂದು ಪಾರ್ಸಲ್ ಹೋಗ್ತ ಪಕ್ಕದ ಸ್ಟೆಷನ್ ಎಸ್ಐ ಗೆ ಕೊಟ್ಟು ಹೋಗಬೇಕಂತೆ ಅಂತ ಹೇಳಿ ಒಂದು ಪಾರ್ಸಲ್ ಕೊಟ್ಟು ಆ ಪೇದೆ ವಾಪಸ್ ಹೋಗುತ್ತಾನೆ 



ಆ ಪಾರ್ಸಲ್ ನೋಡಿ ಟೈಮ್ ನೋಡಿದಾಗ ಮದ್ಯರಾತ್ರಿ ಒಂದು ಘಂಟೆ ಆಗಿತ್ತು, ಆ ಸಮಯದಲ್ಲಿ ಪೋಲಿಸ್ ಜೀಪ್ ತಗೊಂಡು ಹೋಗೋದು ಬೇಡ ಅಂತ ನಿರ್ಧರಿಸಿ, ತನ್ನ ವೇಷ ಭೂಷಣ ಬದಲಾಯಿಸಿ ಪಕ್ಕ ಹುಡುಗನ ರೀತಿ ರೆಡಿ ಆಗಿ ಊರಿನ ಬಸ್ ಸ್ಟಾಪ್ಗೆ ಬರುತ್ತಾಳೆ ಆ ಹುಡುಗಿ ಅಲ್ಲಲ್ಲ ಹುಡುಗನ ವೇಷದಲ್ಲಿದ್ದ ಹುಡುಗಿ, ಅವಳು ಬಂದು ಐದು ನಿಮಿಷಕ್ಕೆ ಅಲ್ಲಿ ಮತ್ತೊಬ್ಬ ಹುಡುಗ ಬರುತ್ತಾನೆ, 



ಆ ಹುಡುಗನನ್ನು ನೋಡಿದ್ದೆ ಆತನನ್ನು ಎಲ್ಲೋ ನೋಡಿರೋ ಹಾಗೆ ಅನ್ನಿಸ್ತು, ಹಾಗೆ ಅವನನ್ನು ಕೂಲಂಕುಷವಾಗಿ ಗಮನಿಸುತ್ತ ಇದ್ದ ಹಾಗೆ ಆ ಹುಡುಗ ಕೂಡ ಈಕೆಯನ್ನು ನೋಡಿದ, ಆದರೆ ಅವನು ಅಷ್ಟು ಗಮನ ಕೊಡದೆ ಯಾರಿಗೋ ಫೋನ್ ಕಾಲ್ ಮಾಡಿ ಅಲ್ಲಿಯೇ ನಿಲ್ಲುತ್ತಾನೆ 



ಮತ್ತೊಂದು ನಿಮಿಷಕ್ಕೆ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬರುತ್ತಾರೆ, ಅವರು ಬರುತ್ತ ಇದ್ದಂತೆ ಬಸ್ ಕೂಡ ಬರುತ್ತೆ, ಮೂರು ಜನ ಬಸ್ ಹತ್ತುತ್ತಾರೆ, ಆದ್ರೆ ಒಬ್ಬರಿಗೊಬ್ಬರು ಯಾರು ಮಾತಾಡುವುದಿಲ್ಲ, ತಮ್ಮ ಪಾಡಿಗೆ ತಾವು ಸುಮ್ಮನೆ ಕುಳಿತುಕೊಳ್ಳುತ್ತಾರೆ, ಆದ್ರೆ ಗಂಡಸಿನ ವೇಷ ತೊಟ್ಟ ಹುಡುಗಿ ಮಾತ್ರ ಅವರೆಲ್ಲಾರನ್ನು ಅವರ ಚಲನವಲನಗಳನ್ನು ಚೆನ್ನಾಗಿ ನೋಡುತ್ತ ಇರುತ್ತಾಳೆ, ಇದು ಆ ಮೂರು ಜನರ ಗಮನಕ್ಕೆ ಬರುವುದಿಲ್ಲ 



ಸುಮಾರು ಒಂದು ಘಂಟೆಯ ಪ್ರಯಾಣದ ನಂತರ ಆ ಮೂರು ಜನ ಒಂದು ಕಡೆ ಇಳಿದು ಮೂರು ಜನ ಒಂದೊಂದು ದಿಕ್ಕಿನಲ್ಲಿ ಹೋಗುವುದುನ್ನು ಕಂಡ ಆ ಗಂಡಸಿನ ವೇಷಧಾರಿಯ ಹೆಣ್ಣು ಕೂಡ ಅಲ್ಲಿಯೇ ಇಳಿದು ಪರಿಚಯ ಅನಿಸಿದ ವ್ಯಕ್ತಿಯನ್ನು ಹಿಂಬಾಲಿಸುತ್ತಾಳೆ 



ಆತ ಸುಮಾರು ಒಂದು ಕಿಲೋ ಮೀಟರ್ ನಡೆದು ಒಂದು ಪಾಳು ಬಿದ್ದ ಹಳೆಯ ಮನೆಯೊಳಗೆ ಹೋಗುತ್ತಾನೆ, ತನ್ನನ್ನು ಒಬ್ಬರು ಗಮನಿಸುತ್ತ ಇದ್ದಾರೆ ಅನ್ನೋ ಅರಿವು ಸಹ ಅವನಿಗೆ ಇರುವುದಿಲ್ಲ, 

ಅವನನ್ನು ಹಿಂಬಾಲಿಸುತ್ತ ಬಂದ ಆ ಹೆಣ್ಣು ಅವನಿಂದ ಕೊಂಚವೆ ದೂರ ಉಳಿದು ಪಾಳು ಬಿದ್ದ ಮನೆಯ ಹಿಂಬಾಗಕ್ಕೆ ಹೋಗುತ್ತಾಳೆ, ಆದರೆ ಅಲ್ಲಿ ಎಲ್ಲೂ ಒಂದು ಬಾಗಿಲು ಸಹ ಇರುವುದಿಲ್ಲ, 



ಆ ಮಧ್ಯರಾತ್ರಿಲಿ ಆ ಕತ್ತಲಲ್ಲಿ ಒಳಗೆ ಏನು ನಡೆಯುತ್ತಿದೆ ಎಂದು ನೋಡಲು ಒಂದು ಜಾಗ ಸಹ ಕಾಣಿಸುವುದಿಲ್ಲ, ಅಷ್ಟರಲ್ಲಿ ಆ ಮನೆಯ ಒಂದು ದೀಪ ಉರಿಯುವುದನ್ನು ನೋಡಿದ ಆ ಹೆಣ್ಣು ಆ ಜಾಗಕ್ಕೆ ಹೋದರು ಅಲ್ಲಿ ಇದ್ದ ಎಲ್ಲಾ ಕಿಟಕಿಗಳು ಮುಚ್ಚಿದ್ದವು, ಕೊನೆಗೆ ಅಲ್ಲೇ ಹುಡುಕಾಡಿದ ಮೇಲೆ ಒಂದು ಕಿಟಕಿ ಸ್ವಲ್ಪವೇ ಹೊಡೆದ ಕಾರಣ ಒಳಗೆ ಸ್ವಲ್ಪ ಇಣುಕಿ ನೋಡಬಹುದಾದ ಜಾಗ ಸಿಕ್ಕಿತ್ತು 



ಆಕೆಗೆ ಖುಷಿಯಾಗಿ ನಿಧಾನವಾಗಿ ಸದ್ದು ಮಾಡದೆ ಒಳಗೆ ಇಣುಕಿ ನೋಡ ನೋಡುತ್ತಿದ್ದಂತೆ, ಅಲ್ಲಿನ ದೃಶ್ಯ ಕಂಡು ಹಾಗೆ ಸ್ತಬ್ದವಾಗಿ ನಿಲ್ಲುತ್ತಾಳೆ,,,,,,



ತಾನು ನೋಡುತ್ತಿರುವುದು ನಿಜವಾಗ್ಲೂ ಸತ್ಯನಾ ಅನ್ನೋ ರೀತಿಯಲ್ಲಿ ಆ ಹುಡ್ಗಿ ನೋಡುತ್ತ ಹಾಗೆ ನಿಂತಿರುತ್ತಾಳೆ, ಅಲ್ಲಿನ ದೃಶ್ಯ ಅವಳಿಗೆ ಭಯದ ಜೊತೆ ಮನುಷ್ಯ ಹೀಗೂ ಆಗುತ್ತಾನಾ ಅನ್ನೋ ರೀತಿಯಲ್ಲಿ ಒಳಗೆ ನಡೆಯುತ್ತಿರುವ ಘಟನೆಯನ್ನು ತನ್ನ ಫೋನ್ನಲ್ಲಿ ರೆಕೋರ್ಡ್ ಮಾಡುತ್ತ ಇರುತ್ತಾಳೆ,




*******




ಆ ಪಾಳು ಬಿದ್ದ ಹಳೆಯ ಮನೆ ತನ್ನದೆ ಎಂಬಂತೆ ಆ ಹುಡುಗ ಮನೆಯೊಳಗೆ ಹೋಗುತ್ತಾನೆ, ಅಲ್ಲೇ ಇದ್ದ ಹಳೆಯ ಸ್ವಿಚ್ ಹಾಕಿದ ಕೂಡಲೆ ಇದ್ದ ಒಂದೇ ಬಲ್ಬ್ ಉರಿಯಿತು, ಅಲ್ಲಿ ಕುಳಿತುಕೊಳ್ಳುವ ಆಸನ ಏನು ಇರಲಿಲ್ಲ, ಅವನು ಹಾಗೆ ಅಲ್ಲೇ ನೆಲದ ಮೇಲೆ ಕುಳಿತು, ಪಕ್ಕದಲ್ಲಿ ಮುಚ್ಚಿದ ಬಟ್ಟೆಯನ್ನು ತೆಗೆಯುತ್ತಾನೆ ಅದನ್ನು ನೋಡಿದ್ದೆ ಏನೋ ಒಂದು ರೀತಿ ಖುಷಿಯಾಗಿ ಅದನ್ನು ಅಪ್ಪಿ ಕೊಳ್ಳುತ್ತಾನೆ, ಅದು ಮತ್ತೇನು ಅಲ್ಲ, ಬೆಳಗ್ಗೆ ಅಷ್ಟೆ ಸತ್ತ ಒಂದು ಹೆಣ್ಣಿನ ಹೆಣ 





ಅದರ ಜೊತೆಗಿನ ಅವನ ಒಡನಾಟ, ಅವನ ವಿಚಿತ್ರ ವರ್ತನೆ, ಅವನ ಅರಿವಿಗೂ ಬಾರದೆ ನಡೆಯುತ್ತಿರುವ ಘಟನೆ, ಅದನ್ನೆಲ್ಲಾ ಆ ಹುಡುಗಿ ತನ್ನ ಮೊಬೈಲ್ ನಲ್ಲಿ ರೆಕೋರ್ಡ್ ಮಾಡಿಕೊಳ್ಳುತ್ತ ಹಾಗೆ ಸಮಯ ನೋಡುತ್ತಾಳೆ ಬೆಳಗಿನ ಜಾವ 3. 30 ತೋರಿಸುತ್ತ ಇರುತ್ತೆ, ಮೋಬೈಲ್ ತೆಗೆದು ಒಳಗೆ ಇಟ್ಟು, ಪೇದೆ ಕೊಟ್ಟ ಪಾರ್ಸಲ್ ನೆನೆಯುತ್ತ ಅಲ್ಲಿಂದ ಇನ್ನೇನು ಹೊರಡಬೇಕು ಅಷ್ಟರಲ್ಲಿ ಒಳಗೆ ಮತ್ತೆನೋ ಸದ್ದು ಕೇಳಿಸಿದಾಗ ಹಾಗೆ ಒಳಗೆ ಇಣುಕಿ ನೋಡುತ್ತಾಳೆ 




ಆ ಹುಡುಗ ಸತ್ತ ಹೆಣ್ಣಿನ ಹೆಣವನ್ನು ಅಲ್ಲೇ ಇದ್ದ ಒಂದು ರೂಮಿನ ಒಳಗೆ ಇಟ್ಟು ಅದನ್ನು ಪೂರಾ ಮುಚ್ಚಿ ಯಾರಿಗೋ ಫೋನ್ ಕಾಲ್ ಮಾಡಿ ಆ ಮನೆಯಿಂದ ಹೊರ ಬರುತ್ತಾನೆ, 

ಆ ಹುಡುಗಿ ಮತ್ತೆ ಹಿಂಬಾಲಿಸುತ್ತ ಬಸ್ ಸ್ಟಾಪ್ ನಲ್ಲಿ ಅವನಿಗೆ ಕಾಣದೆ ಮರೆಯಾಗಿ ನಿಲ್ಲುತ್ತಾಳೆ, 




ಅವರು ಬಂದು ಐದು ನಿಮಿಷಕ್ಕೆ ಬಸ್ ಬರುತ್ತೆ, ಆ ಹುಡುಗ ಬಸ್ ಹತ್ತುತ್ತಾನೆ, ಅವನನ್ನ ಹಿಂಬಾಲಿಸಿದ ಹುಡುಗಿ ಬಸ್ ಹತ್ತಲೋ ಬೇಡವೋ ಅಂತ ಯೋಚಿಸಿ ತಕ್ಷಣ ಬಸ್ ಹತ್ತುತ್ತಾಳೆ, ಅಲ್ಲಿ ಅಷ್ಟೊತ್ತಿಗೆ ಬಸ್ ಜನರಿಂದ ತುಂಬಿರುತ್ತೆ, ಎಲ್ಲೂ ಜಾಗಾನೆ ಇರದೆ ಆ ಹುಡುಗನ ಪಕ್ಕ ಮಾತ್ರ ಜಾಗ ಇರುತ್ತೆ, 

ಅಲ್ಲಿ ಅವನ ಜೊತೆ ಕೂರುವುದಕ್ಕೆ ಮನಸಾಗದೆ ಹಾಗೆ ನಿಂತಿರುತ್ತಾಳೆ, ಕೊನೆಗೆ ಕಂಡಕ್ಟರ್ ಬಂದು ಎಷ್ಟೋ ಸಲ ಹೇಳಿದ ಮೇಲೆ ಹುಡುಗನ ವೇಷದಲ್ಲಿದ್ದ ಕಾರಣ ಧೈರ್ಯವಾಗಿ ಅವನ ಪಕ್ಕ ಹೋಗಿ ಕೂರುತ್ತಾಳೆ,,




ಅವಳು ಬಂದು ಕೂತರು ಗಮನಿಸದೆ ತನ್ನ ಪಾಡಿಗೆ ತಾನು ಕಿಟಕಿಗೆ ಒರಗಿ ನಿದ್ದೆ ಮಾಡುತ್ತಾನೆ, ಅವನ ಪಾಡಿಗೆ ಅವನು ಇರುವುದನ್ನು ನೋಡಿ ಅವಳು ಸಮಾಧಾನದಿಂದ ಕೂರುತ್ತಾಳೆ, 




ಕೊನೆಗೆ ಅವನು ಇಳಿಯುವ ಸ್ತಳ ಬಂದಾಗ ಎದ್ದು ಅವಳ ಕಡೆ ನೋಡಿ ಒಂದು ಪೆಪರ್ ಅವಳ ಹತ್ತಿರ ಇಟ್ಟು ಬಸ್ನಿಂದ ಇಳಿದು ಹಿಂದೆ ತಿರುಗಿ ನೋಡದೆ ಹೋಗುತ್ತಾನೆ 




ಅವನು ಕೊಟ್ಟ ಚೀಟಿಯನ್ನು ಆಕೆ ಬಿಡಿಸಿ ನೋಡಿದಾಗ ಅವಳ ಕಣ್ಣುಗಳು ಭಯ ಮಿಶ್ರಿತ ಆಶ್ಚರ್ಯದಿಂದ ಅವನು ಕೊಟ್ಟು ಹೋದ ಚೀಟಿಯನ್ನು ಹಾಗೂ ಅವನು ಹೋದ ದಾರಿಯನ್ನು ನೋಡುತ್ತಿತ್ತು 

ಆ ಚೀಟಿಯಲ್ಲಿ ಹೀಗೆ ಬರೆದಿತ್ತು "ನೀನು ದೇವಮ್ಮನ ಮನೆಯಲ್ಲಿ ಇದ್ದ ಹುಡುಗಿ ತಾನೆ " 

ಇದ್ದ ಒಂದೇ ಒಂದು ಸಾಲು ಅವಳನ್ನು ಅವನ ಬಗ್ಗೆ ಯೋಚಿಸುವಂತೆ ಮಾಡಿತ್ತು 



ಅವನ ಕೊಟ್ಟ ಚೀಟಿಯನ್ನು ನೋಡಿದ್ದೆ ಆಕೆಗೆ ಆಶ್ಚರ್ಯದ ಜೊತೆ ಮುಖದ ಮೇಲೆ ಬೆವರ ಹನಿಗಳು ಮೂಡಿದವು,,

ಇನ್ನೇನು ಅವನನ್ನೇ ಕೇಳಬೇಕು ಅಷ್ಟರಲ್ಲಿ ಅವನು ಅಲ್ಲಿಂದ ಹೋಗಿದ್ದ, ಆ ಚೀಟಿಯನ್ನು ನೋಡುತ್ತ "ಅವನಿಗೆ ಹೇಗೆ ಗೊತ್ತಾಯಿತು, ಅದು ನಾನೇ ಅಂತ, ಇವನು ಅವನೇ ನಾ, ಇಲ್ಲ ಯಾರು ಇವನು " ಅಂತ ಯೋಚಿಸುತ್ತ ಇದ್ದ ಹಾಗೆ ಅವಳಿಗೆ ಮನೆಯ ನೆನಪಾಯಿತು 





ಈಗ ಈಕೆ ಮನೆಗೆ ಹೋದರೆ ಅಷ್ಟು ಬೇಗ ಯಾಕೆ ಬಂದಿದ್ದು???? ಇಷ್ಟೊತ್ತು ಎಲ್ಲಿ ಇದ್ದೆ???? ಏನಾಯಿತು???? ಹೇಗೆ???? ಯಾಕೆ???? ಅನ್ನೋ ಪ್ರಶ್ನೆಗಳು ದೇವಮ್ಮನ ಕಡೆಯಿಂದ ಬರುತ್ತೆ, ಅವರಿಗೆ ಉತ್ತರ ಕೊಡುವ ಪರಿಸ್ತಿಲಿ ನಾನಿಲ್ಲ, ಈಗ ಮನೆಗೆ ಹೋದರೆ ತೊಂದರೆ ಜಾಸ್ತಿ ಅಷ್ಟೆ, ಅದರಿಂದ ತಪ್ಪಿಸಿಕೊಳ್ಳುವ ಉಪಾಯ ಈಗ ಬೇರೆ ಎಲ್ಲಾದರೂ ಹೋಗಿ ಇನ್ನು 5-6 ದಿನ ಬಿಟ್ಟು ಬರೋದು, ಅಷ್ಟರಲ್ಲಿ ತನಿಖೆಗೆ ಬೇಕಾಗಿರುವ ಎಲ್ಲಾ ವಿಷಯಗಳನ್ನು ಆದಷ್ಟು ಬೇಗ ಸಂಗ್ರಹಿಸುವುದು ಅಂತ ನಿರ್ಧರಿಸಿ ಮನೆಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಾಳೆ 




ಅವನು ಕೊಟ್ಟ ಚೀಟಿಯ ಬಗ್ಗೆ ಜಾಸ್ತಿ ಯೋಚಿಸದೆ ತನ್ನ ಮುಂದಿನ ಕೆಲಸದ ಕಡೆ ಗಮನ ಹರಿಸುವ ಸಲುವಾಗಿ ಅಲ್ಲಿಂದ ಕೂಡಲೇ ಹೊರಡುತ್ತಾಳೆ 





******




ಇತ್ತ ಆ ಹುಡುಗ ಒಂದು ಮನೆಯ ಕಿಟಕಿಯ ಹತ್ತಿರ ಬಂದು ಮೆಲ್ಲಗೆ " ಸೂರಿ " " ಸೂರಿ " ಅಂತ ಕರೆದದ್ದೆ, ಮನೆಯೊಳಗೆ ಇದ್ದ ಮತ್ತೊಂದು ಹುಡುಗ ನಿಧಾನವಾಗಿ ಎದ್ದು ಕಿಟಕಿಯ ಹತ್ತಿರ ಬರುತ್ತಾನೆ 




ಸೂರಿ ಬಂದದ್ದೇ ನೋಡಿ ಕಿಟಕಿಯ ಸಂಧಿಯಿಂದ ಮೂರು ಪ್ಯಾಕೆಟ್ ಕೊಟ್ಟು ಇನ್ನೇನು ಹೊರಡಬೇಕು ಅಷ್ಟರಲ್ಲಿ ತಾನು ಬಸ್ನಲ್ಲಿ ನೋಡಿದ ಘಟನೆಯನ್ನು ಸೂರಿ ಬಳಿ ಹೇಳುತ್ತಾನೆ, ಅವನು ಹೇಳಿದ ಮಾತು ಕೇಳಿ ನಂಬಲಾಗದೆ ಸುಮ್ಮನೆ ನಿಂತಾಗ, ಆ ಹುಡುಗ "ಸೂರಿ ಯಾಕೋ ಸುಮ್ಮನೆ ಆದೆ, ನಾನ್ ಹೇಳಿದ್ದು ನಿನಗೆ ನಂಬುವುದಕ್ಕೆ ಆಗುತ್ತ ಇಲ್ಲ ಅಲ್ವಾ, ಆದ್ರೆ ನಾನ್ ನೋಡಿದ್ದು ಮಾತ್ರ ಖಂಡಿತ ಸತ್ಯ, ಯಾವುದಕ್ಕೂ ನೀನು ಹುಷಾರಾಗಿರು " ಅಂದಾಗ 


ಸೂರಿ ಅವನ ಮಾತನ್ನು ಪೂರ್ಣವಾಗಿ ಕೇಳಿಸಿಕೊಂಡು "ಸರಿ ಗಿರಿ ನಾನ್ ನೋಡಿಕೊಳ್ಳುತ್ತಿನಿ ಅದರ ಬಗ್ಗೆ ನೀನೇನು ಜಾಸ್ತಿ ಯೋಚನೆ ಮಾಡೋದು ಬೇಡ, ಅವಳು ಯಾರೇ ಆಗಿದ್ದರು ಸರಿ, ನನ್ನ ತಂಟೆಗೆ ಬಂದ್ರೆ ಗೊತ್ತಲ್ಲ, ಬಿಡು ಈಗ ಆ ವಿಷಯ, ನೀನು ಹುಷಾರಾಗಿರು, ನಾನ್ ಹೇಳುವರೆಗೂ ನೀನು ಇಲ್ಲಿ ಬರೋದು ಬೇಡ, ಏನಾದ್ರೂ ವಿಷಯ ಇದ್ದರೆ ನಾನ್ ಫೋನ್ ಕಾಲ್ ಮಾಡ್ತೀನಿ, ಮಿಕ್ಕ ವಿಷಯ ನಾನ್ ನೋಡಿಕೊಳ್ಳುತ್ತಿನಿ ಆಯ್ತಾ " ಅಂದಾಗ, ಗಿರಿ ಸರಿ ಎಂದು ತಲೆ ಆಡಿಸುತ್ತ ಅಲ್ಲಿಂದ ಹೋಗುತ್ತಾನೆ 



ಸೂರಿ ಮನೆಯಿಂದ ಹೊರಟ ಗಿರಿ ಸಮಯ ನೋಡುತ್ತಾನೆ, ಬೆಳಗಿನ ಜಾವ 4. 30am ತೋರಿಸುತ್ತ ಇರುತ್ತೆ, ಆದರೆ ಅವನ ಮನಸಿನ ತುಂಬ ಬಸ್ನಲ್ಲಿ ನೋಡಿದ ಘಟನೆಯೇ ನೆನಪಿಗೆ ಬರುತ್ತಿರುತ್ತದೆ, ತನ್ನ ಹಿಂದೆ ಮುಂದೆ ಏನಾಗುತ್ತಿದೆ ಅನ್ನೋ ಪರಿವೆಯಿಲ್ಲದೆ ಏನೇನೋ ಯೋಚಿಸುತ್ತ ಹೋಗುತ್ತ ಇರುತ್ತಾನೆ, ಸ್ವಲ್ಪ ದೂರ ಸಾಗಿದ್ದೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ಧಾರೆ ಅಂತ ಅನ್ನಿಸಿದಾಗ ತಿರುಗಿ ನೋಡುತ್ತಾನೆ ಯಾರು ಇರುವುದಿಲ್ಲ, ಸರಿ ನನ್ನ ಭ್ರಮೆ ಇರಬೇಕು ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಹೋಗುತ್ತಾನೆ 





ಗಿರಿಯನ್ನ ಬಹಳ ಹೊತ್ತು ಹಿಂಬಾಲಿಸಿದ ಇಬ್ಬರು ವ್ಯಕ್ತಿಗಳು ಅವನು ಹೋದ ಮನೆಯನ್ನು ನೋಡಿ ಮತ್ತೂ ಒಂದಿಷ್ಟು ಹೊತ್ತು ಅಲ್ಲೇ ಸುತ್ತಾಡುತ್ತ ಅಕ್ಕ ಪಕ್ಕದವರು ಯಾರಾದರೂ ಕಾಣಿಸಿದಾಗ ಗಿರಿಯ ಬಗ್ಗೆ ಅವರಿಗೆ ತಿಳಿದ ವಿಷಯ ಕೇಳಿ ಪಡೆದು ಅಲ್ಲಿಂದ ಹೊರಡುತ್ತಾರೆ 




***********




ಇತ್ತ ಸೂರಿ ಮನೆಯಲ್ಲಿ ಮುಂದಿನ ಯೋಜನೆ ಹಾಕುತ್ತ ಇರುತ್ತಾನೆ, ಗಿರಿ ಹೇಳಿದ ವಿಷಯ ಅವನ ಮನಸನ್ನು ಸ್ವಲ್ಪ ಕೆಡಿಸಿದರೂ, ಅದಕ್ಕೆ ತಾನು ಯಾವುದೇ ರೀತಿಯ ಆಸ್ಪದ ಕೊಡಬಾರದು, ಅದನ್ನ ಅಲ್ಲಿಗೆ ಮುಗಿಸುವ ಕಾರ್ಯದಲ್ಲಿ ಮುಳುಗುತ್ತಾನೆ, 




ಮೂರು ನಾಲ್ಕು ದಿನ ಕಳೆದರೂ ಮನೆಯಿಂದ ಹೊರಟ ಹುಡುಗಿಯ ಯಾವುದೇ ಸುಳಿವು ಇರದ ಕಾರಣ, ದೇವಮ್ಮ ತಾನೆ ಆ ಹುಡುಗಿಗೆ ಫೋನ್ ಕಾಲ್ ಮಾಡುತ್ತಾಳೆ, ಫೋನ್ ರಿಂಗ್ ಆದರೂ ಆ ಕಡೆಯಿಂದ ಯಾರು ಮಾತಾಡುವುದಿಲ್ಲ, ಎಷ್ಟು ಬಾರಿ ಪ್ರಯತ್ನಿಸಿದರು ಅದೇ ಉತ್ತರ ಬಂದಾಗ ದೇವಮ್ಮನಿಗೆ ಗಾಬರಿಯಾಗಿ ಮುಂದೇನು ಅಂತ ಏನು ಯೋಚಿಸದೆ ಸೀದಾ ಪೋಲಿಸ್ ಸ್ಟೆಷನ್ಗೆ ಹೋಗುತ್ತಾಳೆ, 

ಅವಳು ಹೋದ ದಾರಿಯನ್ನು ಎರಡು ಕಣ್ಣುಗಳು ಗಮಿನಿಸುತ್ತ ಏನು ಗೊತ್ತೆ ಇಲ್ಲ ಅನ್ನೋ ರೀತಿಯಲ್ಲಿ ಇರುತ್ತವೆ 




ದೇವಮ್ಮ ಇನ್ನೇನು ಪೋಲಿಸ್ ಸ್ಟೆಷನ್ ಒಳಗೆ ಹೋಗಬೇಕು ಆದರೆ ಅಷ್ಟರಲ್ಲಿ ಅಲ್ಲಿದ್ದ ಒಬ್ಬರನ್ನು ಕಂಡು ದಂಗಾಗಿ ಅಲ್ಲೇ ನಿಲ್ಲುತ್ತಾಳೆ, ದೇವಮ್ಮನ ಎದುರು ಬಂದ ಆ ವ್ಯಕ್ತಿಯನ್ನು ಕಂಡು ದೇವಮ್ಮ "ನೀನು ಸ್ವಪ್ನ ಅಲ್ವಾ???" ಅಂದಾಗ 



ಆ ವ್ಯಕ್ತಿ ದೇವಮ್ಮನನ್ನು ಒಂದು ಮುಗುಳುನಗೆಯನ್ನು ಬೀರುತ್ತ "ಹೌದು ದೇವಮ್ಮ, ನಾನೇ ಸ್ವಪ್ನ, ನಿಮಗೆ ನನ್ನ ಈ ರೀತಿ ನೋಡಿ ಗಾಬರಿಯಾಗಿರಬೇಕು ಅಲ್ವಾ" ಅಂದಾಗ, 



ದೇವಮ್ಮ "ಅದು ಅದು, ಹೌದು, ಆದರೆ ನೀನು ಇಲ್ಲಿ, ಅದು ಪೋಲಿಸ್ ಯೂನಿಫರ್ಮ್ನಲ್ಲಿ,,, ಹೇಗೆ ಇದೆಲ್ಲಾ, ಇಲ್ಲಿ ಏನಾಗುತ್ತ ಇದೆ ಅನ್ನೋದೆ ಗೊತ್ತಾಗುತ್ತ ಇಲ್ಲ,,, ನೀನು ನಿಜವಾಗ್ಲೂ ಯಾರು??" ಎದುರುಗಡೆ ಇದ್ದ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಉತ್ತರಕ್ಕಾಗಿ ಕಾಯುತ್ತಾಳೆ ದೇವಮ್ಮ 



"ದೇವಮ್ಮ ಹೇಳ್ತಿನಿ ನಿಮಗೆ ಇವತ್ತು ಎಲ್ಲಾ ವಿಷಯ ಹೇಳ್ತಿನಿ, ನಿಮಗೂ ಕೆಲವೊಂದು ವಿಷಯಗಳು ತಿಳಿಯಬೇಕು, ನಿಮಗೆ ಗೊತ್ತ, ನಾನ್ ನಿಮ್ಮನೆಗೆ ಯಾಕೆ ಬಂದೆ, ಅದು ನೀವು ಮನೆ ಕೊಡಲ್ಲ ಅಂದರು ನಿಮ್ಮನ್ನ ಅಷ್ಟೊಂದು ಕಾಡಿ ಬೇಡಿ ಯಾಕೆ ಅಲ್ಲಿಗೆ ಬಂದೆ ಅಂತ, ನಿಮ್ಮ ಮನಸಲ್ಲಿ ಎಷ್ಟೋ ಪ್ರಶ್ನೆಗಳು ಇವೆ, ಅದಕ್ಕೆ ನಾನೇ ಉತ್ತರ ಕೊಡ್ತೀನಿ, ಅದರೆ ಅದಕ್ಕೂ ಮುಂಚೆ ನಿಮ್ಮನೆಗೆ ಯಾಕೆ ಬಂದೆ ಗೊತ್ತ, ಅದೇ ನಿಮ್ಮನೆಲಿ ಆಗ್ತ ಇದ್ದ ಹುಡುಗಿಯರ ಕೊಲೆಯ ರಹಸ್ಯ ಕಂಡು ಹಿಡಿದು ತಿಳಿಯುವ ಸಲುವಾಗಿ, ಹೌದು ದೇವಮ್ಮ ನಾನು ಒಬ್ಬ ಪೋಲಿಸ್ ಆಫಿಸಿರ್, ಆದರೆ ಪೋಲಿಸ್ ಸ್ಟೆಷನ್ಗೆ ಅಂತ ಹೇಳಿಕೊಂಡು ಬಂದ್ರೆ ನನ್ನ ಕೆಲಸ ಆಗಲ್ಲ ಅಂತ ಆ ರೀತಿಯಾಗಿ ಬರಬೇಕಾಗಿತ್ತು, ಆದರೆ ನಿಮಗೆ ವಿಷಯ ತಿಳಿಸಿ ನನ್ನ ಕರ್ತವ್ಯಕ್ಕೆ ಮೋಸ ಮಾಡೋಕೆ ಮತ್ತು ಆ ವಿಷಯ ಅಕ್ಕ ಪಕ್ಕ ಇದ್ದ ಕೊಲೆಗಾರನಿಗೆ ಗೊತ್ತಾಗಿ ಅವನು ತಪ್ಪಿಸಿಕೋಳೋಕೆ ನಾನೇ ಅವಕಾಶ ಮಾಡಿ ಕೊಟ್ಟಂತೆ ಆಗುತ್ತೆ ಅಂತ ನಿಜ ವಿಷಯ ಹೇಳಿಲ್ಲ ಅಷ್ಟೆ,, "



ದೇವಮ್ಮ ಅವಳು ಹೇಳುತ್ತಿದ್ದ ವಿಷಯ ಕೇಳಿ ಇನ್ನು ನಂಬಲಾಗದೆ ಆಕೆಯನ್ನು ನೋಡುತ್ತ ಹಾಗೆ ಕೂತಿರುತ್ತಾಳೆ, ಸ್ವಪ್ನ ಒಂದೆರಡು ಬಾರಿ ದೇವಮ್ಮನ ಕರೆದರೂ ಆಕೆಗೆ ಕೇಳಿಸದೇ ಹಾಗೆ ಕೂತಿರುತ್ತಾಳೆ, ಕೊನೆಗೆ ಸ್ವಪ್ನ ಜೋರಾಗಿ ದೇವಮ್ಮ ಅಂತ ಕೂಗಿ ಆಕೆಯನ್ನು ಅಲ್ಲಾಡಿಸಿದಾಗ ಎಚ್ಚತ್ತ ದೇವಮ್ಮ, "ಏನಮ್ಮ ನೀನು ಇಷ್ಟು ದೊಡ್ಡ ವಿಷಯ ಈಗ ಹೇಳುತ್ತ ಇದ್ಯಾ, ಆದರು ನೀನು ಬಂದದ್ದು ಒಳ್ಳೆಯ ಕೆಲಸಕ್ಕಾಗಿ ಅಲ್ವಾ, ಪರವಾಗಿಲ್ಲಮ್ಮ,ಆದರೂ ಈಗ ನೀನೆ ಹೇಳಿದೆ, ಅದು ಕೊಲೆಗಾರ ನನ್ನ ಅಕ್ಕ ಪಕ್ಕ ಇದ್ದ ಅಂತ, ನಿಜಾನ ಅದು ಹಾಗಿದ್ರೆ, ಯಾರು ಅವನು??? ಅವನು ಸಿಕ್ಕಿದ್ನ ಹಾಗಿದ್ರೆ??? ಹೇಳು ಸ್ವಪ್ನ 



ಸ್ವಪ್ನ "ಇಲ್ಲ ದೇವಮ್ಮ ಅವನು ನಿಮ್ಮ ಸುತ್ತಮುತ್ತ ಇರೋದು ಮಾತ್ರ ನಿಜ, ಅವನನ್ನು ಇನ್ನು ನಾವು ಹಿಡಿದಿಲ್ಲ, ಆದಷ್ಟು ಬೇಗ ಅವನನ್ನು ಹಿಡಿಯುತ್ತಿವಿ "



ದೇವಮ್ಮ " ಹಾಗಿದ್ರೆ ಅವನು ಯಾರು ಅಂತ ನಿಮಗೆ ಗೊತ್ತಾಗಿದೆ ಅಂತಾಯಿತು ಅಲ್ವಾ "



ಸ್ವಪ್ನ "ಹೌದು ದೇವಮ್ಮ, ಆದರೆ ಇನ್ನೊಂದು ಮುಖ್ಯವಾದ ವಿಷಯ ಸಿಗಬೇಕು ಅದು ಸಿಕ್ಕ ಕೂಡಲೆ ಅವನನ್ನ ಹಿಡಿಯುತ್ತಿವಿ "



ದೇವಮ್ಮ "ಅವನು ನಮ್ಮ ಸುತ್ತಮುತ್ತ ಇರೋನೆ ಆಗಿದ್ರೆ ನನಗೂ ಅವನು ಗೊತ್ತಿರುವವನೆ ಆಗಿರುತ್ತಾನೆ ಅಲ್ವಾ "



ಸ್ವಪ್ನ "ಹೌದು ದೇವಮ್ಮ, ನಿಮಗೂ ಅವನು ಚೆನ್ನಾಗಿ ಗೊತ್ತಿರುವವನು "



ದೇವಮ್ಮ ಆಶ್ಚರ್ಯದಿಂದ "ಹೌದಾ, ಹಾಗಿದ್ರೆ ಯಾರು ಅವನು ಈಗಲೇ ಹೇಳು ಸ್ವಪ್ನ, ಅವನನ್ನು ನಾನೇ ಸಾಯಿಸಿ ಬಿಡ್ತೇನೆ, ಅವನಿಂದ ಸತ್ತಿರೋ ಹೆಣ್ಣು ಮಕ್ಕಳಿಗೆ ಶಾಂತಿ ಆದ್ರೂ ಸಿಗುತ್ತೆ " ಏದುಸಿರು ಬಿಡುತ್ತ ಒಂದೇ ಸಮನೆ ನುಡಿಯುತ್ತ ಇದ್ದ ದೇವಮ್ಮನನ್ನು ಸಮಾಧಾನ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾಳೆ ಸ್ವಪ್ನ,,,,,



ಅಷ್ಟರಲ್ಲಿ ಒಬ್ಬ ಪೇದೆ ಬಂದು ಒಂದು ಲಕೋಟೆಯನ್ನು ಕೊಟ್ಟು ಹೋಗುತ್ತಾನೆ, ಅದನ್ನು ತೆರೆದು ನೋಡಿದ್ದೆ ಖುಷಿಯಾಗಿ ಸ್ವಪ್ನ, "ಇನ್ನೇನು ಈ ಕ್ಷಣದಿಂದ ನಿನ್ನ ಅಟ್ಟಹಾಸ ಮುಗೀತು, ಎಲ್ಲಾ ಪಾಪಗಳು ನಿನ್ನಿಂದ ಇವತ್ತಿಗೆ ಕೊನೆಯಾಗಲಿ, ಗಂಟು ಮೂಟೆ ಕಟ್ಟಿ ತಯಾರಾಗಿರು "



ಪೋಲಿಸ್ ಸ್ಟೆಷನ್ನಿಂದ ಹೊರಟ ಸ್ವಪ್ನ ದೇವಮ್ಮನ ಜೊತೆ ಸೀದಾ ಹೋಗಿದ್ದು ದೇವಮ್ಮನ ಮನೆಗೆ, ದೇವಮ್ಮ ತನ್ನ ಮನೆಯ ಮುಂದೆ ಗಾಡಿ ನಿಲ್ಲಿಸಿದನ್ನು ನೋಡಿ ಆಶ್ಚರ್ಯದಿಂದ ಗಾಡಿಯಿಂದ ಇಳಿದು ನನ್ನನ್ನು ಬಿಟ್ಟು ಹೋಗೋಕೆ ಅಂತ ತನಗೆ ತಾನೆ ತಿಳಿದು ಧನ್ಯವಾದ ತಿಳಿಸೋಕೆ ಹಿಂದೆ ತಿರುಗಿ ನೋಡುತ್ತಾಳೆ, ಅಷ್ಟರಲ್ಲಿ ಗಾಡಿಯಿಂದ ಎಲ್ಲರೂ ಇಳಿದಿದ್ದರು 




ದೇವಮ್ಮನಿಗಿಂತ ಮುಂಚೆ ಅವರೆ ಮನೆಯ ಕಡೆ ಹೆಜ್ಜೆ ಹಾಕುವುದನ್ನು ನೋಡಿ ಕೊಲೆಗಾರ ಇಲ್ಲೇ ಇದ್ದಾನ ಅನ್ನೋ ಅನುಮಾನದಲ್ಲಿಯೆ ಅವರುಗಳ ಹಿಂದೆ ಹೋಗುತ್ತಾರೆ 




ಅವರೆಲ್ಲ ತನ್ನ ಮನೆಯೊಳಗೆ ಹೋಗಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗುವುದನ್ನು ನೋಡಿ ಇನ್ನು ತಡೆಯಲಾರದೆ ಸ್ವಪ್ನ ಬಳಿ ಬಂದು "ಏನಮ್ಮ ಇದು, ಇಲ್ಲಿ ಏನು ನಡೀತಾ ಇದೆ, ಯಾಕೆ ಎಲ್ಲರೂ ನನ್ನ ಮನೆಯೊಳಗೆ ನುಗ್ಗಿ ಈ ರೀತಿ ಮಾಡ್ತ ಇದ್ದೀರ, ಅದು ನನಗೊಂದು ಮಾತು ಕೂಡ ಹೇಳದೆ, ಹೇಳು ಸ್ವಪ್ನ "




ಸ್ವಪ್ನ ದೇವಮ್ಮನ ಮುಖ ನೋಡುತ್ತ ಏನನ್ನು ಹೇಳದೆ ತನ್ನ ಕೆಲಸ ತಾನು ಮಾಡುತ್ತ ಇರುತ್ತಾಳೆ, 




ಸ್ವಪ್ನ ಸುಮ್ಮನೆ ಇರುವುದನ್ನು ನೋಡಿದ ದೇವಮ್ಮ ಮತ್ತೆ ಅವಳ ಬಳಿ ಬಂದು ಕಣ್ಣೀರು ಹಾಕುತ, ಮತ್ತೆ ಕೇಳಿದಾಗ 

ಸ್ವಪ್ನ ದೇವಮ್ಮನಿಗೆ ಇನ್ನೇನು ವಿಷಯ ಹೇಳಬೇಕು ಅಷ್ಟರಲ್ಲಿ ತನ್ನ ಮಗ ರಾಜುನಾ ಪೋಲಿಸರು ಅನಾಮತ್ತಾಗಿ ಎಳೆದುಕೊಂಡು ಬರುವುದನ್ನು ನೋಡಿದ ಹೆತ್ತ ತಾಯಿ ಅವನ ಬಳಿ ಓಡಿ ಹೋಗಿ, ಪೋಲೀಸರ ಕೈಯನ್ನು ಸರಿಸಿ, ತನ್ನ ಮಗನನ್ನು ಅಪ್ಪಿ ಹಿಡಿಯುತ್ತಾಳೆ, 

ತನ್ನ ತಾಯಿಯನ್ನು ನೋಡಿದ ಕೂಡಲೇ ಅವಳ ಮಗ ಕೂಡ ಆಕೆಯನ್ನು ಅಪ್ಪಿಕೊಂಡು ಅಳುವುದಕ್ಕೆ ಶುರು ಮಾಡುತ್ತಾನೆ 




ಅವನ ಅಳು ಸಹಿಸದ ದೇವಮ್ಮ "ನಿಮ್ಮನ್ನ ನೀವು ಏನಂತ ತಿಳಿದುಕೊಂಡಿದ್ದಿರ, ಬುದ್ದಿ ಬೆಳೆಯದ ಮಗು ಇದು, ಇವನನ್ನು ಆ ರೀತಿ ಅದು ಪ್ರಾಣಿಗಳಿಗಿಂತ ಕಡೆಯಾಗಿ ಅವನನ್ನ ಎಳೆದುಕೊಂಡು ಬರ್ತಾ ಇದ್ದಿರ, ಅಂತ ತಪ್ಪು ಅವನೇನು ಮಾಡಿದ್ದಾನೆ, ಏನೋ ಕೊಲೆಗಾರನ ಹಿಡಿತೀರ ಅಂತ ನಾನ್ ಅಂದುಕೊಂಡಿದ್ದರೆ, ನನ್ನ ಮಗನ್ನ ಈ ರೀತಿ ಎಳೆದುಕೊಂಡು ಯಾಕೆ ಬಂದ್ರಿ, ಹೇಳಿ, ನಿಮಗೆ ಯಾರಿಗೂ ಮನುಷ್ಯತ್ವ ಅನ್ನೋದು ಇಲ್ಲವ, ಆಗ್ಲಿನಿಂದ ಅಷ್ಟೊಂದು ಕೇಳ್ತ ಇದ್ದೀನಿ, ದಯವಿಟ್ಟು ಹೇಳಿ " ಕೊನೆಗೆ ಸ್ವಪ್ನ ಕಡೆ ತಿರುಗಿ " ಸ್ವಪ್ನ ನೀನಾದರೂ ಹೇಳಮ್ಮ, ಯಾಕೆ ನನ್ನ ಮಗನನ್ನ ಈ ರೀತಿ ಎಳೆದುಕೊಂಡು ಬಂದದ್ದು ಅಂತ "

  



ದೇವಮ್ಮ ಎಷ್ಟೇ ಕೇಳಿದರೂ ಎಲ್ಲರೂ ಸುಮ್ಮನೆ ನಿಂತಿದ್ದರು, ಕೊನೆಗೆ ಸ್ವಪ್ನ ದೇವಮ್ಮನ ಕಡೆ ತಿರುಗಿ, "ನೋಡಿ ದೇವಮ್ಮ ನಿಮಗೆ ನಾವು ಹೇಳೋ ವಿಷಯ ನಂಬುವುದಕ್ಕೆ ಆಗದೆ ಇರಬಹುದು ಆದ್ರೆ ಅದೇ ಸತ್ಯ, ನಾವು ಸಾಕ್ಷಿ ಸಮೇತ ಈಗ ಬಂದಿರುವುದು ಅಂತ ನಿಮಗೆ ಗೊತ್ತಿದೆ ಅಂತ ಅಂದುಕೊಂಡಿದ್ದೀನಿ, ನಾನು ಈಗ ನಿಮ್ಮನೆಯಲ್ಲಿ ಇದ್ದ ಹುಡುಗಿಯಾಗಿ ಇಲ್ಲಿ ಬಂದಿಲ್ಲ, ಒಂದು ಜವಾಬ್ದಾರಿ ಕೆಲಸ ಹೊತ್ತು ಪೋಲಿಸ್ ಆಗಿ ಇಲ್ಲಿ ಬಂದಿದ್ದೀನಿ,

ನಿಮಗೆ ಗೊತ್ತಿದೆ ನಿಮ್ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ, ಆ ಘಟನೆಗಳ ತನಿಖೆ ಮಾಡೋಕೆ ನಾನು ಇಲ್ಲಿ ಬರಬೇಕಾಯಿತು, ಆ ಘಟನೆಗಳ ತನಿಖೆ ಈಗ ಮುಗಿದು ಕೊಲೆಗಾರನನ್ನು ಕೂಡ ಕಂಡು ಹಿಡಿದಿದ್ಧು ಆಯ್ತು " ಅಂದು ಮಾತು ನಿಲ್ಲಿಸಿದಾಗ, ದೇವಮ್ಮ ಆಕೆಯ ಮುಖ ನೋಡುತ್ತ " ಅಂದ್ರೆ ನಿನ್ನ ಮಾತಿನ ಅರ್ಥ, ಕೊಲೆಗಾರ ನನ್ನ ಮಗ ಅಂತಾನ, ಇಲ್ಲ ಇದು ಖಂಡಿತ ಸಾದ್ಯವಿಲ್ಲ, ನನ್ನ ಮಗ ಅಂತವನಲ್ಲ, ನಿಮಗೆ ಕೊಲೆಗಾರನನ್ನು ಹಿಡಿಯುವುದಕ್ಕೆ ಆಗಲಿಲ್ಲ ಅಂದ್ರೆ ಅದು ನಿಮ್ಮ ಕರ್ಮ ಅದು ಬಿಟ್ಟು ಪ್ರಪಂಚ ಅಂದ್ರೆ ಏನು ತಿಳಿದೆ ಇರೋ ನನ್ನ ಮಗ, ಅವನನ್ನು ಕೊಲೆಗಾರ ಅನ್ನೋಕೆ ನಿಮಗೆ ಮನಸಾದ್ರು ಹೇಗೆ ಬಂತು, ಅವನಿಗೆ ನಾನು ನನಗೆ ಅವನು ಅಷ್ಟೆ, ಅವನಿಗೆ ನನ್ನ ಬಿಟ್ಟರೆ ಯಾರು ಇಲ್ಲ, ಅಲ್ಲ ಸ್ವಪ್ನ ನೀನೆ ಈ ಮನೆಯಲ್ಲಿ ಅಷ್ಟು ದಿನ ಇದ್ದೆ, ಒಂದೇ ಒಂದು ದಿನ ಆದ್ರೂ ನನ್ನ ಮಗ ತಾನಾಗಿ ತಾನು ನಿನ್ನ ಹತ್ತಿರ ಯಾವತ್ತಾದ್ರು ಬಂದಿದ್ದನ ಹೇಳು ನೀನೆ, ಅಂತವನನ್ನು ನೀವೆ ಕೊಲೆಗಾರ ಅಂತ ಹೇಗೆ ಹೇಳ್ತಿರ "




ಸ್ವಪ್ನ " ನೋಡಿ ದೇವಮ್ಮ ನಿಮ್ಮ ನೋವು ನನಗೆ ಅರ್ಥ ಆಗುತ್ತೆ ಹಾಗಂತ ತಪ್ಪು ಮಾಡಿದವರನ್ನು ಹಾಗೆ ಬಿಡೋಕೆ ಆಗಲ್ಲ ಅಲ್ವಾ "




ದೇವಮ್ಮ "ಇಲ್ಲ ನನ್ನ ಮಗ ಅಂತವನಲ್ಲ, ನಾನು ನಿಮ್ಮ ಯಾವ ಮಾತನ್ನು ನಂಬುವುದಿಲ್ಲ "




ಅಷ್ಟರಲ್ಲಿ ಒಬ್ಬ ಪೇದೆ ಗಿರಿಯನ್ನ ಕರೆದುಕೊಂಡು ಬರುತ್ತಾರೆ, ಅವನನ್ನು ನೋಡಿದ್ದೆ ದೇವಮ್ಮನ "ಇವನು ಯಾರು " ಅಂತಾರೆ 




ಸ್ವಪ್ನ "ಹೇಳ್ತಿನಿ ದೇವಮ್ಮ, ಇವನು ಗಿರಿ, ಕೊಲೆಗಾರನ ಆಪ್ತ ಸಹಾಯಕ, ಅವನಿಗೆ ಏನೇನು ಬೇಕು ಎಲ್ಲವನ್ನು ಒದಗಿಸುತ್ತ ಇದ್ದವನು,, ಬಹಳ ನಿಯತ್ತಿನ ಮನುಷ್ಯ, ಕೊನೆಗೆ ಆದ್ರೆ ಆ ನಿಯತ್ತೆ ಅವನನ್ನು ಕಾಪಾಡಲಿಲ್ಲ ಅಷ್ಟೆ ಅದಕ್ಕೆ ಸತ್ಯವನ್ನು ತಾನಾಗಿ ಹೇಳಿ ನಮಗೆ ಎಷ್ಟೋ ಸಹಾಯ ಮಾಡಿದ "




ದೇವಮ್ಮ "ಅಂದ್ರೆ ನಿಮ್ಮ ಮಾತಿನ ಅರ್ಥ ಏನು, ನನಗೆ ಇನ್ನು ಏನು ಅರ್ಥ ಆಗುತ್ತ ಇಲ್ಲ,"




ಸ್ವಪ್ನ "ದೇವಮ್ಮ, ನಿಮ್ಮ ಮಗ ನಿಮ್ಮ ಮಗ ಅಂತ ಏನು ಹೇಳುತ್ತ ಇದ್ದೀರ ಅವನೆ ನಿಜವಾದ ಕೊಲೆಗಾರ, ನಾನು ಅದಕ್ಕೆ ಬೇಕಾದ ಸಾಕ್ಷಿ ಎಲ್ಲಾ ತೋರಿಸ್ತಿನಿ, ಹಾಗೆ ರಾಜು ಅಲಿಯಾಸ್ ಸೂರಿ ಅವನ ಮತ್ತೊಂದು ಹೆಸರು, ಅವನು ನಮ್ಮಂತೆ ಇರುವವನು, ನಿಮ್ಮ ಮುಂದೆ ಮಾತ್ರ ತನಗೇನೂ ಗೊತ್ತಿಲ್ಲ ಅನ್ನೋ ರೀತಿ ಇದ್ದ, ನೀವು ಯಾವಾಗ ಮನೆ ಹೆಣ್ಣು ಮಕ್ಕಳಿಗೆ ಮನೆ ಬಾಡಿಗೆಗೆ ಕೊಡುವುದಕ್ಕೆ ಶುರು ಮಾಡಿದ್ರಿ, ಆಗ ಅವನ ಮನಸಿನ ಆಸೆಗಳು ವಿಕೃತ ರೂಪ ಪಡೆಯಿತು, ಅದಕ್ಕೆ ಸಾತ್ ಕೊಟ್ಟವನು ಈ ಗಿರಿ, ನೀವು ಮಾಡುವ ಅಡುಗೆಯಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಮತ್ತು ಬರೋ ತರಾ ಮಾಡಿ ತನ್ನ ಕಾರ್ಯ ಮುಗಿಸಿ ಸುಮ್ಮನೆ ಆಗುತ್ತಿದ್ದ, ಅದು ಯಾವಾಗ ಬೇರೆ ರೂಪ ಪಡೆಯೋಕೆ ಶುರು ಆಯ್ತು ಆಗ ಆ ಹುಡುಗಿಯರನ್ನು ಕೊಲ್ಲುತ್ತ ಬಂದ, ಹೀಗೆ ಅವನ ಕಾಮದ ಆಸೆಗೆ ಬಂದ ಹುಡುಗಿಯರನ್ನು ಹಾಗೆ ಸಾಯಿಸುತ್ತ ಬಂದ, ಅವನು ನನ್ನ ತಂಟೆಗೆ ಕೂಡ ಬಂದ ಆದ್ರೆ ನನಗೆ ಅವನ ಮೇಲೆ ಮೊದಲೆ ಅನುಮಾನ ಇದ್ದದ್ದರಿಂದ ಅವನ ಆಟ ನನ್ನ ಹತ್ತಿರ ನಡೆಯಲಿಲ್ಲ , ಮಧ್ಯರಾತ್ರಿ ದಿನಾ ಗಿರಿ ಬಂದು ಅವನಿಗೆ ಬೇಕಾದ ವಸ್ತುಗಳನ್ನು ಕೊಟ್ಟು ಹೋಗುತ್ತಿದ್ದ,, ಆದ್ರೆ ಈ ಕಾಮದ ಪಿಶಾಚಿ ಆ ಗಿರಿಯ ಹುಡುಗಿಯನ್ನು ಸಹ ಬಿಡಲಿಲ್ಲ, ಅದು ಗೊತ್ತಾಗಿ ಗಿರಿ ಅವನಿಗೆ ತಿಳಿದ ಎಲ್ಲಾ ವಿಷಯವನ್ನು ನಮಗೆ ಹೇಳಿದ "




ದೇವಮ್ಮ ಅಷ್ಟು ಮಾತನ್ನು ಕೇಳಿ ಮಗನ ಮುಖವನ್ನು ನೋಡುತ್ತಾಳೆ, ಅವನ ಮುಖದಲ್ಲಿ ಏನು ಬದಲಾವಣೆ ಇರಲಿಲ್ಲ 




ಸ್ವಪ್ನ ಮುಂದುವರೆಸುತ್ತ " ಅವನು ಬುದ್ದಿಮಾಂದ್ಯ ಹುಡುಗ ಅಲ್ಲ ಅವನಿಗೆ ಪ್ರಪಂಚ ಅಂದ್ರೆ ಏನು ಅಂತ ನಮ್ಮೆಲ್ಲರಿಗಿಂತ ಚೆನ್ನಾಗಿ ಗೊತ್ತು, ಅವನೊಬ್ಬ ಮಾನಸಿಕ ರೋಗಿ, ಅದನ್ನ ನೀವು ಕಂಡು ಹಿಡಿಯಲಿಲ್ಲ ಅಷ್ಟೆ, 

ಮುಂಚೆನೆ ಗೊತ್ತಿದ್ದರೆ ಈ ರೀತಿ ಅನಾಹುತಗಳು ಆಗುತ್ತ ಇರಲಿಲ್ಲ, ಅವನೊಳಗಿನ ಕಾಮುಕ ವ್ಯಕ್ತಿ ಹೊರಗೆ ಬರುತ್ತ ಇರಲಿಲ್ಲ, ನೀವು ನಿಮ್ಮ ಪಾಡಿಗೆ ಇದ್ದು, ಅವನನ್ನು ಒಂಟಿಯಾಗಿ ಮಾಡಿ, ಅವನ ಮನಸ್ತಿತಿ ಮಿತಿ ಮೀರಿ ಹೋಗಿ ಈ ಎಲ್ಲಾ ಅನಾಹುತಕ್ಕೆ ಕಾರಣವಾಯಿತು "



ದೇವಮ್ಮ ಇನ್ನು ಕೂಡ ಅವರ ಮಾತನ್ನು ನಂಬಲಾಗದೆ, ಮಗನ ಹತ್ತಿರ ಬಂದು ಪ್ರೀತಿಯಿಂದ ತಲೆ ಸವರಿ "ಅವರು ಹೇಳಿದ್ದೆಲ್ಲಾ ನಿಜಾನಾ " ಅಂದಾಗ, ತಪ್ಪಿಸಿಕೊಳ್ಳುವ ದಾರಿ ಕಾಣದೆ ರಾಜು ಅಲಿಯಾಸ್ ಸೂರಿ ತಲೆ ಆಡಿಸುತ್ತ "ಹೌದು " ಅನ್ನುತ್ತಾನೆ 



ಅದನ್ನ ಕೇಳಿ ಹೆಂಗರುಳಿನ ದೇವಮ್ಮ ಚಟಾರನೆ ಅವನ ಕೆನ್ನೆಗೆ ಬಾರಿಸಿ, "ಯಾಕೋ ಹೀಗೆ ಮಾಡಿದೆ, ಏನು ಗೊತ್ತಿಲ್ಲದೆ ಇರೋ ಮಗು ಅಂತ ಸುಮ್ಮನೆ ಇದ್ಧದ್ಧಕ್ಕೆ ಹೀಗ ಮಾಡೋದು, ಆ ಹೆಣ್ಣು ಮಕ್ಕಳು ನಿನಗೇನು ಅನ್ಯಾಯ ಮಾಡಿದ್ದರು, ಪಾಪ ಅವರೆನೆಲ್ಲಾ ನರಳಿ ನರಳಿ ಸಾಯೋತರ ಮಾಡಿ ಬಿಟ್ಟೆ, ನೀನು ಮನುಷ್ಯ ಅನ್ನೋ ಪದಕ್ಕೆ ಅನರ್ಹ, ನಿನ್ನ ನನ್ನ ಮಗ ಅಂತ ಹೇಳಿಕೊಳ್ಳುವುದಕ್ಕೆ ನನಗೆ ಅಸಹ್ಯ ಆಗುತ್ತೆ, ನೀನು ಈ ಭೂಮಿಗೆ ಭಾರ, ನಿನ್ನ ನಾನೇ ಕೊಲ್ಲುತ್ತ ಇದ್ದೆ, ಆದ್ರೆ ನೀನಂತ ಪಾಪಿಗೆ ಜನ್ಮ ಕೊಟ್ಟು ಈಗ ನಿನ್ನನ್ನು ಮುಟ್ಟುವುದಕ್ಕು ಅಸಹ್ಯ ಆಗ್ತಾ ಇದೆ "




ಸ್ವಪ್ನ ಕಡೆ ತಿರುಗಿ, "ಕರೆದುಕೊಂಡು ಹೋಗಿ ಈ ಪಾಪಿಯನ್ನು, ಇನ್ನು ಒಂದು ನಿಮಿಷ ಕೂಡ ಇವನು ಇಲ್ಲಿ ಇರಬಾರದು "



ಸ್ವಪ್ನ ತನ್ನ ಕೈಯಲ್ಲಿ ಇದ್ದ ಕೋಳವನ್ನು ರಾಜು ಅಲಿಯಾಸ್ ಸೂರಿಗೆ ತೊಡಿಸಿ ಅಲ್ಲಿಂದ ಕರೆದುಕೊಂಡು ಹೋಗುತ್ತಾಳೆ, 





ಮುಗಿಯಿತು 



Rate this content
Log in

Similar kannada story from Crime