Dhananjaya GN

Romance


4  

Dhananjaya GN

Romance


ಕೊರೊನ ತಂದ ಪ್ರೇಮ

ಕೊರೊನ ತಂದ ಪ್ರೇಮ

6 mins 156 6 mins 156


ಆಸ್ಪತ್ರಯಿಂದ ಹೊರ ನಡೆಯುತ್ತಿದ್ದ ರಾಮುನ ಮುಖದಲ್ಲಿ ಅದೇನೋ ಸ್ವಲ್ಪ ದುಃಖದ ಛಾಯೆ ಬಿರಿದಿತ್ತು. ತನ್ನ ಭಾರವಾದ ಹೆಜ್ಜೆಯನ್ನು ಇಡುತಾ ಅವನು ಮುಂದೆ ನಡೆದ. ದಾರಿಯುದ್ದಕ್ಕೂ ಬೆಳೆದು ನಿಂತಿರುವ ಗಿಡಗಳಲ್ಲಿ ಅರಳಿದ ಹೂಗಳು ಅದೇನೋ ಇಂದು ಭೇಗನೆ ಬಾಡಿದಂತೆ ಭಾಸವಾಗುತ್ತಿತ್ತು. ದಿನದ ಯಾತ್ರೆಯಲ್ಲಿ ಎಂದು  ಅರಳಿದ ದಾಸವಾಳ ವನ್ನು ಕೈಗಿತ್ತು ಮನೆಕಡೆ ನಡೆಯುವುದು ಅವನ ವಾಡಿಕೆಯಾಗಿತ್ತು.... ಆದ್ರೆ ಇಂದು ಯಾವುದಕ್ಕೂ ಮನಸು ಒಪ್ಪಿಕೊಳ್ಳುತ್ತಿಲ್ಲ!!.

   ತೋಟದ ಕರೆಯಲ್ಲಿರುವ ದಾರಿಯಿಂದ ರಸ್ತೆಯ ಮೆಟ್ಟಿಲನ್ನು ಏರುತ್ತಿದ್ದಂತೆ, ಹಿಂದಿನಿಂದ 'ಶಂಕರ'ನ ದ್ವನಿ ಕೇಳಿಬರುತ್ತಿತ್ತು.

 ಅಡಿಕೆ ಮರಕ್ಕೆ ಎರಗಿ ನಿಂತಿದ್ದ ಶಂಕರ, ಮುಗುಲ್ನಗುತ್ತಾ...

"ಅದೇನು 'ರಾಮು' ಆಸ್ಪತ್ರಯಿಂದ ಬೇಗನೆ ಬಂದಿಯಲ್ವ,

"ಸೌಖ್ಯವಾಗಿದ್ದಿಯಾ... ತಾನೇ...!!'

   ಮೆಟ್ಟಿಲನ್ನು ಹತ್ತುತ್ತಿದ್ದ ' ರಾಮು' ಹಿಂತಿರುಗಿ ಹೌದೆಂದು ತಲೆ ಅಲ್ಲಾಡಿಸಿದ.

   "ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಲ್ವಾ"

ಅಲ್ಲಿ ಎಲ್ಲದಕ್ಕೂ ಸರಕಾರ ದಿಂದ ಸೌಲಭ್ಯ ವಾಗಿ ಸಿಗುತ್ತದೆ ಅಂತೆ..!!"


"ಹೌದಾ..?"

  ಅವನು ಹೀಗೆ ಒಂದೊಂದೇ ಪ್ರಶ್ನೆಗಳನ್ನು ಕೇಳಿ ಹೋಗುತ್ತಿದ.


ಅವನ ಮಾತುಗಳನ್ನು ಕೇಳುತ್ತಿದ್ದ ರಾಮು ತುಸು ಹೊತ್ತಿನ ಮೌನದ ನಂತರ,

ಸೌಮ್ಯ ಸ್ವರದಲ್ಲಿ

"ಮನುಕುಲಕ್ಕೆ ಪ್ರಕೃತಿ ಕೊಟ್ಟ ಶಿಕ್ಷೆ... ಅನುಭವಿಸಬೇಕು ..ಅಷ್ಟೇ.."

ಎಂದು ಗೋಣಗುತ್ತಾ.. ಮುಂದೆ ಹೆಜ್ಜೆ ಹಾಕಿದ.


   

  ಅಂಗಲಕ್ಕೆ ತಲುಪಿದ 'ರಾಮು'ವನ್ನು 'ಪ್ರಿಯ' ದೂರದಿಂದಲೇ ಗುರುತಿಸಿದಳು , ಹಿತ್ತಲಲ್ಲಿ ಪಾತ್ರ ತೊಳೆಯುತ್ತಿದ್ದ ಅವಳು ತಲೆ ಎತ್ತಿ ನಗುತ್ತಾ"ಅಮ್ಮಾ..!! ಅಸ್ಪತ್ರಯಿಂದ ಅಣ್ಣ ಬರುತ್ತಿದ್ದಾನೆ " ಎಂದು ಕೂಗಿದಳು.

ಅಡುಗೆ ಕೋಣೆಯಲ್ಲಿದ್ದ 'ಜಾನಮ್ಮ' ಸೆರಗಿನ ತುದಿಯಿಂದ ಮುಖವನ್ನು ಒರೆಸುತ್ತಾ ಹೊರ ಬಂದಳು...

             ಮುಗುಳ್ನಗೆ ಬೀರಿ 

ಜಾನು, "ಏನೋ...!!ನಿನ್ನ ಮುಖದಲ್ಲಿ ಒಂದಿಷ್ಟು ಬೇಸರ ಎದ್ದು ಕಾಣುತ್ತಿದೆ ಯಲ್ವಾ..!!" 

"ಏನಾಯ್ತು..??" ಎಂದು ತುಸು ಆತಂಕ ದಿಂದ ಕೇಳಿದಳು.


"ಕೈಯಲ್ಲಿರುವ ಚೀಲವನ್ನು ಅಲ್ಲಿಟ್ಟು ಬೇಗನೆ ಸ್ನಾನಮಾಡಿ ಬಂದುಬಿಡು" ಎಂದು ಹೇಳಿ ಅಲ್ಲೇ ಹತ್ತಿರದ ಕುರ್ಚಿಯಲ್ಲಿ ಕುಳಿತುಕೊಂಡಳು,"

ಈ 'ಕೊರೋನಾ' ದಿಂದಾಗಿ ಎಲ್ಲಿ ಹೋಗುದಾದ್ರು ಹೇಗೆ, ಮದುವೆ, ಸಂಭ್ರಮ ಯಾವುದು ಇಲ್ಲ ಎಂದೂ ಪಿಸುಗುಟುತ್ತಾ 'ಜಾನಮ್ಮ' ಅಂಗಳಕ್ಕಿಳಿದಳು.

    

   ಮನೆಯ ಸುತ್ತೆಲ್ಲ ಮುಸ್ಸಂಜೆ ಯ ಕತ್ತಲು ಆವರಿಸಿತ್ತು, ದೂರದ ಬೆಟ್ಟಗಳಲ್ಲಿ ಸಂಧ್ಯಾದೀಪ ದಂತೆ ಉರಿಯುತ್ತಿರುವ ಮನೆಬೆಳಕುಗಳು, ಉರಿಯುವ ಸೂರ್ಯನು ಸಂಧ್ಯಾಛಾಯೆಯ ತೆಕ್ಕೆಯೊಳಗೆ ಸೇರಿಬಿಡಲೆ0ಬ ಹಂಬಲದಿಂದ ಓಡುತ್ತಿದ. ಮೋಡಗಳು ಸರಿದು ಇಣುಕಿ ನೋಡುತ್ತಿರುವ ಚಂದಿರನು  'ರಾಮು'ನ ಮುಖವನ್ನು ನೋಡಿ ನಗುವಂತೆ ತೋರುತ್ತಿತ್ತು.


    ಊರಂಚಿನ ಒಂದು ಹಳ್ಳಿಯಲ್ಲಾಗಿತ್ತು ರಾಮುನ ಮನೆ, 'ಡಿಗ್ರಿ' ಮುಗಿದು ಬ್ಯಾಂಕ್ ಪರೀಕ್ಷೆ ಬರೆದು ಮೈಸೂರಿನ 'ಬ್ಯಾಂಕ್' ಒಂದರಲ್ಲಿ ಉದ್ಯಮಿ ಆಗಿದ್ದ . ಊರಿಗೆ ಬಂದು ಇವತ್ತಿಗೆ ಎರಡು ವಾರ ಆಗುತಿತ್ತು. ಬಂದ ಆದಿವಾಸದಿಂದ 'ಕ್ವಾರಂಟಿನ್' ನಲ್ಲಿದ ರಾಮು ಬಳಿಕ "ಕೊರೋನಾ ಪೊಸಿಟಿವ್" ಆಗಿ ಆಸ್ಪತ್ರೆಗೆ ಧಾಖಲಿಸಿದ್ದ. ಚಿಕಿತ್ಸೆ ಮುಗಿದು ಮನೆಗೆ ತಲುಪಿದ್ದ ಅವನ ಮನಸ್ಸು ತುಂಬಾ ಅಸ್ಪತ್ರಿ ದಿನಗಳು ತುಂಬಿಕೊಂಡಿದ್ದವು.

   

  

   ಆಸ್ಪತ್ರಿಯ ಆ ಹದಿನಾಲ್ಕು ದಿನಗಳು ಅವನಿಗೆಂದೂ ಮರೆಯಲಾಗದ ದಿನಗಳಾಗಿದ್ದವು. ಪಕ್ಕದ ಕೋಣೆಯಿಂದ ಯಾವಾಗಲೂ ಇಣುಕಿ ನೋಡುತ್ತಿದ್ದ ಆ ಸುoದರ ಕಣ್ಣುಗಳು, ಅವನ ಮನಸ್ಸನ್ನು ಅದೆಂದೋ ಕಿತ್ತುಕೊಂಡಿತ್ತು. ಎಲ್ಲೋ ಕಂಡು ಪರಿಚಯ ವಿದ್ದ0ತೆ ತೋರುತ್ತಿರುವ ಆ ಎರಡು ಕಣ್ಣುಗಳು..!!. ಈ ಹಿಂದೆ ಅದೆಂದೋ ಆ ಕಂಗಳಿಗೆ ಮನಸೋತು ಅಲೆದಾಡಿದಂತೆ ಭಾಸವಾಗುತ್ತಿತ್ತು.   


  ಅದೆಷ್ಟೋ ಸಲ ಅವನು ಅವಳನ್ನು ಮಾತನಾಡಬೇಕು,ವಿಚಾರಿಸಬೇಕೆಂದುಕೊಂಡಿದ್ದ ....ಆದ್ರೆ ... ಅಸ್ಪತ್ರಿ ನಿಯಮಗಳು ಅನುಯೋಜ್ಯ ವಾಗಿರಲಿಲ್ಲ. ಒಂದುವೇಳೆ ಅಲ್ಲಿ ಬರುವ ದಾದಿಯರನ್ನು ವಿಚಾರಿಸುವ ಎಂದು ಕೊಂಡಿದ್ದ... ಆದ್ರೆ.. ಅವನ ಹಿಂಜರಿಕೆ ಅವನನ್ನು ಬೆನ್ನಟ್ಟು ತಿತ್ತು. ಇಷ್ಟು ಪರಿಚಯವಿರುವ ಕಣ್ಣುಗಳನ್ನು ಹೊತ್ತ ಆ ಹುಡುಗಿ ಯಾರೆಂದು ತಿಳಿಯುವ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿತ್ತು. ಅದೆಷ್ಟೋ ಬೇಗನೇ ಹೊರಬಂದು ಅವಳ ಊರು ಹೆಸರು ತಿಳಿಯಬೇಕೆಂದು ಹಂಬಲಿಸುತ್ತಿದ್ದ ಅವನಿಗೆ ಅಸ್ಪತ್ರಿ ದಿನಗಳು ಉರುಳಿದ್ದು ಅದೆಷ್ಟೋ ವೇಗದಲ್ಲಾಗಿತ್ತು. 

  

   

  

   ಸ್ನಾನ ಮುಗಿದ ರಾಮು ಮನೆಯೊಳಗೆ ಹೆಜ್ಜೆ ಹಾಕಿದ. ಹತ್ತಿರದ ಕೋಣೆಯಿಂದ 'ಟಿ ವಿ ' ಶಬ್ದ ಕೇಳಿಬರುತ್ತಿತ್ತು. ಒಮ್ಮೆ ಕಿವಿ ಕೊಟ್ಟು ಆಲಿಸಿದರೆ 'ಕೊರೊಣ' ವಿಷಯ ಹೊರತು ಬೇರೇನು ಕೇಳುತ್ತಿರಲಿಲ್ಲ. 'ಟಿ ವಿ' ಯನ್ನು ಒಮ್ಮೆ 'ಓಫ' ಮಾಡೋಣ ಎಂದು ಕೊಂಡ ಅವನು ಏನೋ ನೆನೆದು ಮತ್ತೆ ಸುಮ್ಮನಾದ. ದಿನದ 'ಕೊರೊನ' 'ಪೊಸಿಟಿವ್' ಸಂಖ್ಯೆ ಹಾದು ಬರುತಿತ್ತು, ಮತ್ತೊಂದು ಕಡೆ 'ಕೊರೊನ ವ್ಯಾಕ್ಸಿನ್' ವಿಷಯ, ಮದ್ದಿನ ವಿಷಯ.....ಹಾಗೆ ಮುಂದುವರಿಯುತ್ತಿತ್ತು. ಎಂದೂ ಹೆಚ್ಚಾಗುತ್ತಿರುವ ಕೊರೊನ ಸಂಖ್ಯೆ ಕಂಡು ರಾಮು ನಿಟ್ಟುಸಿರು ಬಿಡುತ್ತಾ " ಇದರ ಕೊನೆ ಎಂದು ..? ಆ ದೇವನೆ ಬಲ್ಲ" ಎಂದು ಮರುಗುತ್ತಾ ಊಟದ ಕೋಣೆಗೆ ನಡೆದ.

   

    ಮೈಸೂರು ನಿಂದ ಪ್ರತಿಸಲ ಬಂದಾಗ ಬಂದುಮಿತ್ರರ ಮನೆಗೆ ಹೋಗಿ , ಕೆಲಸದ ಒತ್ತಡವನ್ನು ಮರೆತು ಮಜಾಮಾಡುವುದು ಎಂದೂ ಹವ್ಯಾಸ ವಾಗಿತ್ತು. ಆದರೆ ಈವಾಗ ಅದೆಲ್ಲವೂ ಎಲ್ಲೋ ಮಾಯವಾದ ಅನುಭವ ಬೆನ್ನಟ್ಟುತ್ತಿತ್ತು, 'ಕೊರೋಣ' ಸೋಂಕು ತಗಳಿದೆ ಎಂದು ಗೊತ್ತಾದಮೇಲೆ ಈ ಕಡೆ ಸುಳಿಯುವವರು ಅಂತೂ ಇಲ್ಲವಾಗಿದ್ದಾರೆ. ಮನಸ್ಸಿನಲ್ಲಿ ಬಹಳ ಯೋಚನೆಗಳು ನರ್ತನ ಮಾಡುತ್ತಿದ್ದರಿಂದ ಎಂಕಾಂಗಿ ಯಾಗಿ ಸಮಯ ಕಳೆಯಬೇಕು ಎನ್ನುವ ಅವಸರ ಈವಾಗ ತಾನೇ ತಾನಾಗಿಯೇ ಅವನ ಪಾಲಿಗೆ ಹರಿದು ಬರುತಿತ್ತು. 

  


    ಹಗಳಿರುಳೆನ್ನದೆ ದಿನಗಳು ಹಲವು ಉರುಳಿದವು,

  ದಿನ ಬೆಳಕಾದಡನೆ ಅವಳ ನೆನಪು ಅವನನ್ನು ಬೆಂಬಿಡದ ಬೂತದಂತೆ ಕಾಡುತಿತ್ತು. ರಾತ್ರಿ ಮಲಗುವಾಗಳು, ಉರಿವ ದೀಪದಲ್ಲೂ ಅವಳದೇ ಬಿಂಬ ಕಾಣುತಿತ್ತು. ಆದ್ರೆ... ಅವಳ ಬಗೆಗಿನ ಯಾವ ಮಾಹಿತಿಯ ಸುಳಿವು ಅವನಲ್ಲಿರಲಿಲ್ಲ... ಅವನ ಮುಖದಲ್ಲಿ ಅದೆಂದೂ ನಿರಾಶೆ ಎದ್ದು ಕಾಣುತ್ತಿತ್ತು. 

" ಲೋಕ್ಡೌನ್ ನ ಈ ಸಮಯದಲ್ಲಿ ಎಲ್ಲಿ ಹೋಗಿ ವಿಚಾರಿಸಲಿ.....!!, ಕೆಲವೊಮ್ಮೆ ಅವನಿಗೆ ತೋರುತ್ತಿತ್ತು ಒಮ್ಮೆ ಹೊರಗೆ ಹೋಗಿ ಸುತ್ತಾಡಿ ಬರಬೇಕೆಂದು ...ಆದ್ರೇ ... ಪೊಲೀಸ್ ನವರ ಅನುಮತಿ ಪಡೆಯುಬೇಕಲ್ವಾ...!!" , ಅವನ ಮನಸ್ಸು ಒಂದೊಂದೇ ನೆನೆದು ಮರುಗುತ್ತಿತ್ತು .

    

   ಸಮಯ ಮುಸ್ಸಂಜೆ ಆಗುತಿತ್ತು,ಅತ್ತ ಕೋಣೆಯಿಂದ  ಚಾದ ಗ್ಲಾಸ್ ನ್ನು ಹಿಡಿದುಕೊಂಡು ಬಂದಳು 'ಜಾನಮ್ಮ'

'ರಾಮು.. ' ಎಂದು ದೀನ ಸ್ವರದಲ್ಲಿ ಕರೆದು ಹತ್ತಿರದ ದಿಣ್ಣೆಯಲ್ಲಿ ಕುಕ್ಕರಿಸಿದಳು.. 'ಜಾನಮ್ಮ' ನ ಮುಖದಲ್ಲಿ ವಾತ್ಸಲ್ಯ ಎದ್ದು ಕಾಣುತ್ತಿತ್ತು, ಸೌಮ್ಯ ಸ್ವರದಲ್ಲಿ ಅದೇನೂ ಹೇಳಲೆಂದು ಬಾಯ್ತೆರೆದು ಮತ್ತೆ ಸುಮ್ಮನಾದಳು.

ಕಿಟಿಕಿ ಹೊರಗಡೆ ಕಣ್ಣು ಹಾಯಿಸಿ ಕುಳಿತಿದ್ದ ರಾಮು.. ಹಿಂತಿರುಗಿ

"ಅಮ್ಮ ಏನು ಹೇಳಬೇಕೆಂದು ಕೊಂಡಿದ್ಯಾ..." ಎಂದು ಜಾನಮ್ಮನ ಮುಖ ನೋಡಿದ.

ಅಲ್ಪ ಹಿಂಜರಿಕೆಯಿಂದ ಜಾನಮ್ಮ "ಮದುವೆ ಆಲೋಚನೆ ಏನು ಮಾಡಿದ್ದಿಯಾ.!!"

"ಈ ಬರುವ ತಿಂಗಳಲ್ಲಿ ಮಾಡಬೇಕೆಂದು ಕೊಂಡಿದಿಯಲ್ವಾ..!!"

ಚಾದ ಲೋಟವನ್ನು ಕೈಯಲ್ಲಿ ಹಿಡಿದು... ತುಸು ಗೌರವದಿಂದ... ರಾಮು, "ಯಾವುದಕ್ಕೂ ಈವಾಗ ಆಗಲ್ಲ ಅಲ್ವಾ..!"

"ಕೊರೋನಾ ಮುಗಿಯದೆ ಏನು ಮಾಡೋಕೆ ಆಗುತ್ತೆ" 

ಚಾದ ಲೋಟವನ್ನು ಬಾಯ್ಗಿಟ್ಟು ಸ್ವಲ್ಪ ಸ್ವಲ್ಪ  ಕುಡಿಯಲಾರಂಭಿಸಿದ.

  

  ಅಣ್ಣಾ..!!ಈವಾಗ ಮದುವೆ ಆದ್ರೆ ಖರ್ಚು ಕಡಿನೆಯಲ್ಲಿ ಆಗುತ್ತಂತೆ.... ನಿನ್ನೆ 'ಟಿವ್' ಯಲ್ಲಿ ನೋಡಿದ್ದೆ" ಹತ್ತಿರದ ಕೋಣೆಯಲ್ಲಿ ಕೂತಿದ್ದ 'ಪ್ರಿಯ' ನಗುತ್ತಾ ಹೀಯಾಳಿದಳು...

 ಮುಗುಲನಗುತ್ತ ಹೌದೆಂದು ತಲೆ ಅಲ್ಲಾಡಿಸಿದ ಜಾನಮ್ಮ "ಒಂದು ಹುಡುಕಿ ಉಂಟು ನೋಡ್ತಿಯಾ... ಏನು...??"

"ಮತ್ತೆ ಹೇಗೇನೆ ಇದ್ರೆ ಪ್ರಾಯ ನಿಲ್ಲುತ್ತೆಯಾ ನಿಂಗೆ...!!"

"ಈವಾಗ ಇಲ್ಲಾಂದ್ರೆ ಬರುವ ವರ್ಷ ಆದ್ರೂ ನೋಡು.."

ಜಾನಮ್ಮನ ಮುಖದಲ್ಲಿದ್ದ ಮುಗುಳ್ನಗೆ ಮಾರಿ ಸ್ವಲ್ಪ ಏರು ದ್ವನಿಯನ್ನು ಒಂದೊಂದೇ ಹೇಳುತ್ತಾ ಹೋದಳು....


   ರಾಮು "ಎಲ್ಕದಕ್ಕೂ ಸಮಯ ಬರುತ್ತೆ , ಈ ವರ್ಷ ಇನ್ನು ಯಾವಾಗ," ಎಂದು ಮುಗುಳ್ನಗುತ್ತಾ ದೂರಕ್ಕೆ ಕಣ್ಣು ಹಾಯಿಸಿ ಕುಳಿತುಕೊಂಡ .  ಹೊರಗಡೆ ಸಂಜೆಯು ಮೆಲ್ಲನೆ ಕತ್ತಲೆಯೆಡೆಗೆ ಸಾಗುತ್ತಿತ್ತು.ಮನದಲ್ಲಿ ಮೆತ್ತನೆ ಅವಳ ನೆನಪು ಮುದ್ಧಿಸುತ್ತಿತ್ತು...ಏಕೆ.. ಏನೆಂದು ತಿಳಿಯದೆ ಅವನ ಮನಸ್ಸು ಮತ್ತೇ ಚಡಪಡಿಸುತ್ತಿತ್ತು.


  

    ' ಲೋಕ್ಡೌನ್, ಕರ್ಫ್ಯೂ' ಎಂಬಂತೆ ದಿನಗಳು ಒಂದೊಂದೇ ಹರಿದು ಸಾಗುತ್ತಿತ್ತು. ಮನೆಯಲ್ಲಿ ಕುಳಿತು ರಾಮುಗೆ ಅದೆಷ್ಟೋ ವರುಷಗಳು ಹರಿದಂತೆ ಭಾಸವಾಗುತ್ತಿತ್ತು.


  'ಲೋಕ್ಡೌನ್ನ' ತೀವ್ರತೆ ಅಲ್ಪ ಶಮನ ವಾದಾಗ  ರಾಮು ಹತ್ತಿರದ ಪೇಟೆಯಲ್ಲಿ ಸುತ್ತಾಡಳೆಂದು ಹೊರಗಿಳಿದ, ಮೈಸೂರಿನ ಬಂದ ಮೇಲೆ ಹೊರ ನಡೆಯುವುದು ಇದು ಮೊದಲ ಸಲವಾಗಿತ್ತು. ಬೆರಳೆಣಿಕೆಯಷ್ಟು ಜನಮಾತ್ರ ಪೇಟೆಯಲ್ಲಿ ಸುತ್ತಾಡುತ್ತಿದ್ದರು, ಮಾರುಕಟ್ಟೆ, ಅಂಗಡಿಗಳೆಲ್ಲ ವಿಜನವಾಗಿಯೇ ಇತ್ತು, ಪರಿಚಯದ ಮುಖಯಾವುದು ಕಾಣುತ್ತಿರಲಿಲ್ಲ. 

   


  ಮನಸ್ಸಲ್ಲಿ ಎಂದೂ ಹೆಸರು, ಊರು ತಿಳಿಯದ ಸುಂದರ ನಯನಗಳ ನೆನಪು ಮಾತ್ರ.ಇದ್ದ ರಸ್ತೆಗಳನ್ನು ತಿರುವುಗಳನ್ನು ಅಲತೆಮಾಡಿ ಕೈ ಗಡಿಯಾರದ ಗಂಟೆ 6 ಆಗುತನಕ ಅವನು ಪೇಟೆಯಲ್ಲಿ ಸುತ್ತಾಡುತ್ತಿದ್ದ .


  ನಡೆದು ಸುಸ್ತಾದಾಗ ಎಂದೂ ಸಂಜೆ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ತೆರಳಿ ಕುಳಿತುಕೊಳ್ಳುವುದು ಹವ್ಯಾಸವಾಗಿತ್ತು, ಅಲ್ಲಿ ಮತ್ತೇ... "ನೀನು ಯಾಕೆ ಇಲ್ಲಿ ಕೂತಿದ್ದಿಯಾ, ಎಲ್ಲಿಗೆ ಹೋಗ್ತೀಯ??"?ಎಂದು ಕೇಳುವವರಿಲ್ಲ ....ಎಷ್ಟು ಹೊತ್ತು ಕುಳಿತುಕೊಂಡರು ಕೇಳುವವರಿಲಿಲ್ಲ.... ಕೆಲವೊಮ್ಮೆ ಅವನ ಮನಸ್ಸಿಗೆ ಅನಿಸುತಿತ್ತು "ನನ್ನಂತಹ ಮೂಡರು ಈ ಪ್ರಪಂಚದಲ್ಲಿ ಇದ್ದಾರೆಯೇ ಎಂದು...!! ಎಲ್ಲೋ ಕಂಡ ಎರಡು ಕಣ್ಣುಗಳನ್ನು ಹುಡುಕಿ ನಡೆದು ಸಮಯ ವ್ಯರ್ಥ ಮಾಡುತ್ತಿರುವ ನನ್ನಂತಹ ಮೂಡರು..!!! ನನ್ನ ಪೆದ್ದುತನ ಹೊರತು ಮತ್ತೇನು ಹೇಳಲಿ...!!!" ಅವನ ಮನಸ್ಸು ಮರುಗುತ್ತಿತ್ತು.

   

    ಮುಸ್ಸಂಜೆ ಮನೆಕಡೆ ವಾಪಸಾಗುತ್ತಿದ್ದ ಅವನ ಕಂಗಳನ್ನು ಮಳೆಗಾಲದ ತಣ್ಣನೆಯ ಮಾರುತ ತಲ್ಲಣಿಸಿ ಹಾದುಹೋಗುತ್ತಿತ್ತು. ನೋಡುತ್ತಿದ್ದಂತೆ ಮಳೆಹನಿಗಳು ಒಂದೊಂದೇ ಧರೆ ಗಿಳಿಯುತ್ತಿತ್ತು. ದೂರ ಆಕಾಶದಲ್ಲಿ ಮುಂಗಾರು ಮಳೆಯ ಖಾರ್ಮೋಡಗಳು ಸಾಲುಗಟ್ಟಿದ್ದವು.....

    

    ಹಾಗೇ ಮನೆಯಲ್ಲೇ ಬಾಕಿಯಾಗಿದ್ದ ಅವನಿಗೆ ಕೊನೆಗೂ ಕರ್ನಾಟಕದ 'ಪಾಸ್' ದೊರಕಿತ್ತು. ಮುಂಗಾರು ಮಳೆಯ ಪ್ರಾರಂಭವಾಗಿತ್ತು ಅಂದು, 'ಕೊರೋನಾ'ದ ಆರ್ಭಟ ಮತ್ತೂ ಸ್ವಲ್ಪ ಕಡಿನೆಯಾಗಿತ್ತು, ಮರುದಿನ ಸಾಯಂಕಾಲದ 'ಬಸ್ನ'ಲ್ಲಿ ಹತ್ತಿದ ಅವನು ಮುಂಜಾನೆಯೊಳಗೆ ಮೈಸೂರ್ ಮುಟ್ಟಿದ. 

  ಆ ದಿನ ಎಂದಿನಂತೆ ಕೆಲಸಕ್ಕೆ ಹಾಜರಾದ ಅವನು ತನ್ನ 'ಕ್ಯಾಬಿನ್' ಸೇರಿ 'ಪೈಲ್' ಗಳನ್ನು ಒಂದೊಂದೇ ತೆಗೆದು ಮಗುಚ ಲಾರಂಭಿಸಿದ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಎದ್ದ ರಾಮು ಮುಖವನ್ನು ಕೈಯಿಂದ ಒರೆಸಿ ಹತ್ತಿರದ ಲೋಟದಿಂದ ನೀರು ಕುಡಿದು, ಹತ್ತಿರದ 'ಕಂಪ್ಯೂಟರ್' 'ಒನ್'ಮಾಡಿ ' ಕುಳಿತುಕೊಂಡ .

  ಪಕ್ಕದ'ಕ್ಯಾಬಿನ್' ನಿಂದ 'ಟೋಕನ್' ಸಂಖ್ಯೆ ಒಂದೊಂದೇ ಕೇಳಿಬರುತ್ತಿತ್ತು. 

   ಒಂದೊಂದು ಸಂಖ್ಯೆ ಹರಿದು ಬಂದಂತೆ ....ಅವನ ದುಗುಡ ತುಂಬಿದ ಮನಸ್ಸಲ್ಲಿ ಅವಳ ನೆನಪುಗಳ ಸುರುಳಿ ಒಂದೊಂದೇ ಬಿಚ್ಚಿ ಮಾಯವಾಗುತ್ತಿತ್ತು....ಒಂದು ಕಡೆ ಮನೆಯಿಂದ ದೂರವಾಗಿರುವ ದುಃಖ, ಮತ್ತೊಂದು ಕಡೆ ಮದುವೆ ವಿಷಯ ,ನಡುವೆ ಹಾದುಬಂದ ಆ ಹುಡುಗಿ ನೆನಪು. ಎಲ್ಲಾ ಅವನ ಮನಸ್ಸನ್ನು ತೀವ್ರವಾಗಿ ಕೆಣಕುತಿತ್ತು.

  

  ಈ ಹಿಂದೆಂದೂ ಮೌನಿಯಾಗಿರದ ರಾಮುವನ್ನು ನೋಡಿ ಹತ್ತಿರ ಕೂತಿದ್ದ 

'ಸೋಮು' ನಗುತ್ತಾ "ಏನು ಮಾರಾಯ ತುಂಬಾ ದುಃಖದಲ್ಲಿದಿಯಾ"

"..ಏನಾಯ್ತು..?"

"ಮನೆಬಿಟ್ಟುಬಂದ ದುಃಖವಾ...!!"

"ಅದೆಲ್ಲಾ ಒಂದೆರಡು ದಿನ ಅಷ್ಟೇ.." ಎಂದು ಹೀಯಾಳಿಸಿ ಮಾತನಾಡಿದ.


'ಕಂಪ್ಯೂಟರ್' ಮೇಲಿಂದ ಕಣ್ಣೆತ್ತಿ 'ರಾಮು' 'ಸೋಮ'ನ ಮುಖ ನೋಡಿ ಅದೇನಿಲ್ಲಪ್ಪ.. ಸುಮ್ನೆ....

ಎಂದು ಮುಗುಳ್ನಗುತ್ತಾ ಮತ್ತೆ ತನ್ನ ಕೆಲಸದಲ್ಲಿ ತೊಡಗಿದ.

   

  ಆದಿನ 'ಬ್ಯಾಂಕ್ನ'ಲ್ಲಿ ಜನಜಂಗುಲಿ ಸ್ವಲ್ಪ ಕಡಿಮೆಯಿತ್ತು.

ಅಲ್ಲೊಂದು ಇಲ್ಲೊಂದು ಬೆರಳೆಣಿಕೆಯಷ್ಟು ಜನ ಮಾತ್ರ 'ಬ್ಯಾಂಕ'ನೊಳಗಿದ್ದರು.


  ಅಲ್ಪ ಹೊತ್ತಲ್ಲಿ ಯಾರೋ 'ಎಸ್ಕ್ಯೂಸ್ ಮಿ' ಎಂದು ಕರೆಯುವ ಧ್ವನಿ ಕೇಳಿ ತಲೆ ಎತ್ತಿ ನೋಡಿದ ರಾಮುನ ಮುಖದಲ್ಲಿ ಆಶ್ಚರ್ಯ ತುಂಬಿತ್ತು..!!

ಎದುರು ಗಡೆ ಮುಖಕ್ಕೆ ಮಾಸ್ಕ್ ಹಾಕಿ ನಿಂತಿರುವ ಸುಂದರ ಮೊಗದ ಚೆಲುವೆ.

ನೋಟಿನ ಕಂತೆ ಯನ್ನು ಹಿಡಿದು ನಿಂತಿದ್ದ ಅವಳ ಕಣ್ಣುಗಳ ನೋಟ, ಈ ಹಿಂದೆ ಮನದಲ್ಲಿ ಅಂಟಿಕೊಂಡಿದ್ದ ಕಣ್ಣುಗಳ ಅದೇ ರೂಪ... ಅದೇ ಭಾವ..!! 

   

  "ಹೌದು ಅವಳೇ ಇವಳು ಅಂದು 'ಕೊರೋನಾ 'ವಾರ್ಡ'ನಲ್ಲಿ ಕಂಡ ಅದೇ ಕಣ್ಣುಗಳು ." 

"ನಾನು ಪರಿತಪಿಸುತ್ತಿದ್ದ ಅದೇ ಕಣ್ಣುಗಳು..!!"ಎಂದು ಪಿಸುಮಾತಾಡಿದ ರಾಮನ ಮುಖದಲ್ಲಿ ವ್ಯಾಕುಲತೆ, ಕುತೂಹಲ ತುಂಬಿ ಬಂದಿತ್ತು.

ಅವನ ಮನದಲ್ಲೇನೋ ಚಡಪಡಿಕೆ...!!


 ರಾಮು ಬಾಯ್ತೆರೆದು ಏನೋ ಮಾತನಾಡಬೇಕೆಂದಿದ್ದ ಆದ್ರೆ ಗಂಟಲು ಒಣಗಿತ್ತು ಮಾತು ಬರುತ್ತಿರಲಿಲ್ಲ.

ಅವನು ಮುಖವನ್ನು ಕೈ ಯಿಂದ ಒರೆಸುತ್ತಾ...ದ್ವನಿ ಸರಿಮಾಡಿಕ್ಕೊಂಡು....

ಏನು ಹೇಳಬೇಕೆಂದು ತಿಳಿಯದೆ

"ನೀವು... ದುಡ್ಡು 'ಡೆಪಾಸಿಟ್' ಮಾಡ್ಲಿಕ್ಕೆ...."

ಮತೆ ಗಂಟಲು ಸರಿಮಾಡುತ್ತಾ ...

"ಬಂದದ್ದಾ" ಎಂದು ಮೆಲುದ್ವನಿಯಲ್ಲಿ ಪ್ರಶ್ನಿಸಿದ.

 ಮಾತಿಗಾಗಿ ಚಡಪಡಿಸುತಿದ್ದ ರಾಮು ವನ್ನು... ನೋಡಿದ ಅವಳು

ಸ್ವಲ್ಪ ಹೊತ್ತಿನ ಮೌನದ ನಂತರ ....ಅವಳೇ

ಬಾಯ್ತೆರೆದು.

"ನಿಮ್ಮ ಹೆಸರು ರಾಮ್ ಅಲ್ವ.??.

ನೀವು ಅವತ್ತು 'ಕೊರೋನಾ' ಆಸ್ಪತ್ರೆಯಲ್ಲಿ 'ಅಡ್ಮಿಟ್' ಆಗಿದ್ರ..!!??" ಎಂದು ವಿನಯದಿಂದ ಪ್ರಶ್ನಿಸಿದಳು

"ಹೌದು, ಅದ್ಹೇಗೆ ನಿಮ್ಗೆ ಗೊತ್ತು..!!" ರಾಮು ಸಂಕೋಚದಿಂದ ಅವಳ ಮುಖ ನೋಡಿದ.


  ಮುಖದಲ್ಲಿ ಅರಳಿದ ತಿಳಿನಗೆಯೊಂದಿಗೆ ಅವಳು .."ಆವತ್ತು ನಾನೂ ಅಲ್ಲಿ 'ಅಡ್ಮಿಟ್' ಆಗಿದ್ದೆ, ನಿಮ್ಮನ್ನು ನೋಡಿದ ಕ್ಷಣವೇ ನನ್ಗೆ ಪರಿಚಯ ಸಿಕ್ಕಿತ್ತು, ಮತ್ತೆ 'ಡಿಸ್ಚಾರ್ಜ್' ಸಮಯದಲ್ಲಿ ನಿಮ್ಮ ವಿಳಾಸವನ್ನು ತಿಳಿದು ವಿಚಾರಿಸಿದಾಗ ಎಲ್ಲಾ ವಿಷಯ ಗೊತ್ತಾಗಿತ್ತು...ನೀವು ಕೊರೋನಾ ಸೋಂಕು ತಗಲಿ 'ಅಡ್ಮಿಟ್' ಆಗಿದ್ದು ಅಂತ...!!


ಮತ್ತೆ ಮಾತು ಮುಂದುವರಿಸಿದ ಅವಳು...


 "ನಾನು ಇಲ್ಲಿ ಮೈಸೂರು 'ಯೂನಿವರ್ಸಿಟಿ' ಯಲ್ಲಿ 'ಲೆಕ್ಟರ್' ಆಗಿ ಕೆಲಸ ಮಾಡ್ತಿದ್ದೀನಿ.

ನಾನು ನಿಮ್ಮನ್ನು ಮೊದಲು ಅದೆಷ್ಟೋ ಬಾರಿ ನೋಡಿದ್ದೆ... ಇದೇ 'ಕ್ಯಾಬಿನ್' ನಲ್ಲಿ ..ಮಾತಾಡಿಲ್ಲ ಅಷ್ಟೇ...."

ಅವಳ ಮುಖದಲ್ಲಿ ಮುಗುಲ್ನಗೆಯಿತ್ತು.


  "ನಾನು ನಿಮ್ಮ ಊರಿನವಳೇ...

ನಾನು ನೀವು ಕಲಿತ ಅದೇ 'ಹೈಸ್ಕೂಲು' ನಲ್ಲಿ ಕಲಿತ್ತಿದೆ, ನನ್ನ ಅಣ್ಣನ 'ಕ್ಲಾಸ್ಮ್ಯಾಟ್' ಆಗಿದ್ರು ನೀವು...

ಮತ್ತೆ ವಿಚಾರಿಸಿದಾಗ ಗೊತ್ತಾಗಿತ್ತು ನೀವು ಇಲ್ಲಿ ,'ಬ್ಯಾಂಕ್' ಉದ್ಯಮಿ ಆಗಿದ್ರಿ ಅಂತ.

ನಿಮ್ಮನ್ನು ಮೊದಲಸಲ ನೋಡಿದಾಗಲೇ ಪರಿಚಯವಾಗಿತ್ತು...ಆದ್ರೇ.. ಮಾತಾಡಲು ಧೈರ್ಯವಿರಲಿಲ್ಲ..."


  ಅವಳು ಹೀಗೆ ಒಂದೊಂದೇ ಹೇಳಿ ಹೋಗುತ್ತಿದ್ದಳು..

ಉತ್ಸುಕತೆ ಕಣ್ಣುಗಳಲ್ಲಿ ತುಂಬಿ ಅವಳಾಡುವ ಮಾತುಗಳನ್ನು ಪುನಃ ಪುನಃ ಕೇಳುವಂತೆ ಅವನ ಕಿವಿಗಳು ಹಂಬಲಿಸುತ್ತಿತ್ತು. ಈ ಕೇಳುವ ಮಾತುಗಳೆಲ್ಲ ಇಷ್ಟು ದಿನ ಕಂಡು ಉಳಿದ ಕನಸುಗಳ ಭಾಗವೇ...!! ಎಂಬಂತೆ ತೋರುತ್ತಿತ್ತು....ಅವನಿಗೆ

   

  ರಾಮು ಏನೋ ಹೇಳಲೆಂದು ಬಾಯ್ತೆರೆದು ಮತ್ತೆ ಸುಮ್ಮನಾದ

ಸ್ವಲ್ಪ ಹೊತ್ತು ಏನೋ ಆಲೋಚಿಸಿ

  

   ಹಾಗಾದ್ರೆ...ನೀವು ...'ಮಾಯ'.


   ಹೌದು 'ಮಾಯ' ಎಂದು ತಲೆ ಅಲ್ಲಾಡಿಸಿದಳು...

"ಚಿಕ್ಕಂದಿನಲ್ಲಿ ನೋಡಿದ ನೆನಪು... ಈವಾಗ ತುಂಬಾ ಬದಲಾಗಿದ್ದೀರಾ...!!'

ಹೌದೆಂದು ತಲೆ ಅಲ್ಲಾಡಿಸಿದ ಮಾಯಾಳ ಮುಖದಲ್ಲಿ ಮುಗುಳ್ನಗೆ ಇತ್ತು.


  ಕೈಯಲ್ಲಿರುವ ಹಣವನ್ನು ಬ್ಯಾಗ್ನೊಳಗೆ ಹಾಕಿ ಮತ್ತೆ ತಲೆ ಎತ್ತಿ 'ಮಾಯ' ...ನಾವು ಈಗ ಒಂದು ವರ್ಷದಿಂದ ತಂದೆ,ತಾಯಿ ಎಲ್ಲಾ ಇಲ್ಲೇ ಮನೆಮಾಡಿದ್ದೇವೆ...ರಜೆ ಸಿಕ್ಕಿದಾಗ ಊರಿಗೆ ಹೋಗುದು ಅಷ್ಟೇ...!!"


    ಅವಳಾಡುವ ಮಾತುಗಳನ್ನು ಕೇಳುತ್ತಿದ್ದ ಅವನ ಮನಸ್ಸಿಗೆ, ಚಿಕ್ಕಂದಿನಲ್ಲಿ ಅದೆಷ್ಟೋಬಾರಿ ನೋಡಲೆಂದು ಪರಿತಪಿಸುತ್ತಿದ್ದ ,ಅವಳ ಮುಖದ ಅವ್ಯಕ್ತವಾದ ರೂಪ ಹರಿದು ಬರುತ್ತಿತ್ತು.


   ಅವನಿಗೆ ಸಂತೋಷ ಆನಂದ ಎಲ್ಲವೂ ಒಮ್ಮೆಲೇ ಉಕ್ಕಿಬಂದಂತಾಯಿತು.

ಅವಳಿರುವ ಕನಸು ದಾರಿ ಎಲ್ಲವನ್ನು ಪ್ರೀತಿಸುತ್ತಿದ್ದ ಅವನ ಮನಸ್ಸು 'ಮಾಸ್ಕ್ 'ಎಂಬ ಮುಖವಾಡಹೊತ್ತ ಮೊಗದಲ್ಲಿರುವ ಸುಂದರ ನಗೆಯನ್ನು ನೋಡಲೆಂದು ಹಂಬಲಿಸುತ್ತಿತ್ತು...

  

 ಮನಸ್ಸಿಗೆ ಸ್ವಲ್ಪ ಧೈರ್ಯತಂದು ,ಅವಳ ಕಣ್ಣುಗಳನ್ನು ನೋಡಿದ ರಾಮನ ನಯನಗಳಲ್ಲಿ ಸ್ನೇಹ , ವಾತ್ಸಲ್ಯ ತುಂಬಿತ್ತು. ತನ್ನ ಕೈಯ್ಯಲ್ಲಿರುವ ರಸೀದಿಯನ್ನು ಮಲ್ಲನೆ ಅವಳ ಕೈಗಿತ್ತ ರಾಮು..

  "ಪರಿಚಯ ಮಾಡಿದಕ್ಕೆ ತುಂಬಾ ಧನ್ಯವಾದಗಳು " ಎಂದು ಮೆಲುಧ್ವನಿ ಉಚ್ಚರಿಸಿದ.


ಮುಖದಲ್ಲಿ ಬಿರಿದ ತಿಳಿನಗೆಯೊಂದಿಗೆ ಹಿಂತಿರುಗಿ ಸ್ವಾಗತವನ್ನಿತ್ತ 'ಮಾಯ,' ರಸೀದಿಯನ್ನು ಬಾಗಿಗೆ ತುರುಕಿಸಿ, ಬಾಗಿಲ ಕಡೆ ಹೆಜ್ಜೆಹಾಕಿದಳು.


  ಅವಳ ಮುದ್ದಾದ ಮುಖ ಯಾಕೆ ನನನ್ನು ಇಷ್ಟು ಸೆಳೆಯುತ್ತದೆ!? ಅದರ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ, ಹತ್ತಿರವಿದ್ದ ಕುರ್ಚಿಯನ್ನು ನಿದಾನವಾಗಿ ಎಳೆದ ಅವನು

ಕಂಪ್ಯೂಟರ್ ಮುಂದೆ ಕುಳಿತು ತನ್ನ ಕೆಲಸವನ್ನು ಮುಂದುವಿರಿಸಿದ.

   

  ದೂರ ಬಾಗಿಲ ಎಡೆಯಿಂದ ಇಣುಕಿ ನೋಡುತ್ತಿರುವ ಸೂರ್ಯ ರಶ್ಮಿಗಳೆಡೆಯಲ್ಲಿ ನಡೆದು ಸಾಗುತ್ತಿದ್ದ ಅವಳು, ಸುತೆಲ್ಲಾ ಕಣ್ಣು ಹಾಯಿಸಿ,ಮತ್ತೆ ಕಣ್ಣೆತ್ತಿ ನೋಡಿದ ಅವಳ ಕಣ್ಣಾಲಿಗಳಲ್ಲಿ ಸ್ನೇಹದ ಛಾಯೆ ಬಿರಿದಿತ್ತು.

   

   ನಡೆದು ಸಾಗುತ್ತಿದ್ದ ಅವಳ ಮುಖವನ್ನು ನೋಡಿದ ರಾಮುನ ಮನಸ್ಸಿನ ಅಂತರಾಳದಲ್ಲಿ ಹೀಗೆ ಗೋಣಗುತ್ತಿತ್ತು....

   

  "ನನ್ನನ್ನು ಪ್ರೀತಿಸುವ ಇವಳೇ ಈ ಬಾಳಿಗೆ ಜೊತೆಯಾದರೆ ಸಾಕಿತ್ತು ...ಈ ಸುಂದರ ಬಾಳಿಗೆ ಇನ್ನೇನು ಬಯಸಲು ಸಾಧ್ಯ. !!"

  ಗಿಡದ ಮೇಲೆ ನಗುತ ಕೂತ ದುಪ್ಪಟ್ಟ ಹಿಡಿಯಲು, ಮನ ಕಾತರಿಸುತ್ತಾ, ದುಪ್ಪಟ್ಟು ಅರಸುತ್ತಾ ನಡೆದ ಅವನ ಮನದ ಅಂತರಾಳ ದಲ್ಲೊಂದು ನಗುವು ತಾನಾಗಿ ಮೂಡಿ ಬರುತ್ತಿತ್ತು.....

   

  Rate this content
Log in

More kannada story from Dhananjaya GN

Similar kannada story from Romance