ಹೀಗಿರಬೇಕು
ಹೀಗಿರಬೇಕು
ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ಶಿಕ್ಷಕನ ಪಾತ್ರ ಮುಖ್ಯವಾಗುತ್ತದೆ..ಸಂಸ್ಕೃತದಲ್ಲಿ ಗುರು ಅಂದರೆ ಅಂಧಕಾರದಿಂದ ಬೆಳಕಿನ ಕಡೆಗೆ ತೋರುವವರು. ಅಂದರೆ ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಬೆಳೆಯುತ್ತದೆ.
ನಮ್ಮ ಶಿಕ್ಷಕರ ಬಗ್ಗೆ ಹೇಳಲು ಸಂತೋಷವಾಗುತ್ತದೆ. ಅಂದು ನಾನು ಪದವಿ ಶಿಕ್ಷಣ ಕಲಿಯುತ್ತಾ ಇರುವ ಸಂದರ್ಭದಲ್ಲಿ ಉನ್ನತ ಶ್ರೇಣಿಯನ್ನು ಬಂದಿದಕ್ಕೆ ಅವರು ಸಂಪರ್ಕದ ಕರೆಯನ್ನು ಮಾಡಿದಾಗ ಸಂತೋಷದಿಂದ ಆ ನಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ಹೋದಾಗ ಅವರು 1000ರೂಪಾಯಿಗಳು ಮತ್ತು ರಾಜ್ಯಶಾಸ್ತ್ರದಲ್ಲಿ ಅತ್ಯುತ್ತಮ ಅಂಕವನ್ನು ಗಳಿಸಿದಕ್ಕೆ ನಮ್ಮ ಪ್ರಶಾಂತ್ ಸರ್ ನಮಗೆ ಜೀವನ ಮೌಲ್ಯ ಪುಸ್ತಕವು ಕೊಟ್ಟಿದ್ದು ಸಂತೋಷವಾಗುತ್ತದೆ. ನಮ್ಮ ಪ್ರಾಶುಪಾಲರು ಸಭೆಯಲ್ಲಿ ಮಾತುಗಳನ್ನು ಆಡುವಾಗ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು......
ಆಕೆ ಇನ್ನು ಕೈಗೆ ಕೈತುಂಬಾ ಬಳೆ ಬಿಂದಿ ತಲೆಗೆ ಹೂವವನ್ನು ಒಂದು ದಿನವೂ ಬಿಡದೆ ಹಾಕಿಕೊಂಡು ಬರುವ ಹುಡುಗಿ ಎಂದು ಹೇಳಿದಾಗ ಸಭೆಯ ಮೇಲೆ ಬರಬೇಕು ಎಂದು ಹೇಳಿದಾಗ ಎಲ್ಲರೂ ನನ್ನ ಮುಖವನ್ನೇ ನೋಡುತ್ತಾ ಇದ್ದರು ನನ್ನ ಹೆಸರು ಹೇಳಿದಾಗ ನಾನು ಧೈರ್ಯವಾಗಿ ಹೋದೆ ಈ ಸಂಸ್ಥೆಯ ಬಗ್ಗೆ ಹೇಳು ಎಂದು ಹೇಳಿದಾಗ ನಾನು ಒಂದೇ ಹೇಳಿದ ಮಾತುಗಳು ದುಡ್ಡು ಎಂದು ಬರುತ್ತೆ ಹೀಗುತ್ತೆ ಆದರೆ ಜೀವನದ ಸನ್ನಿವೇಶಗಳು ಮರೆಯಲಾದು ಎಂದು ಹೇಳಿದಾಗ ಎಲ್ಲರೂ ನಿಂತು ಚಪ್ಪಾಳೆಯನ್ನು ಹೊಡೆದರು....
ಹೀಗೆ ಮುಂದುವರೆದು ನಾನು ದೊಡ್ಡ ಮಾತುಗಳನ್ನೇ ಆಡಿದೆ ಎಂದು ಕ್ಷಮಿಸಿ ಬಿಡಿ ಎಂದು ಹೇಳಿದಾಗ ನಮ್ಮ ಸರ್ ಹೇಳಿದರು ಅವಳ ಸಣ್ಣ ಗುಣ ಎಂದರೆ ಯಾರ ಮನಸಿಗೆ ನೋವು ಮಾಡುವುದಿಲ್ಲ ಯಾರೇ ಮಾಡಿದರು ಸುಮ್ಮನ್ನೆ ಕಣ್ಣೀರು ಹಾಕಿಕೊಂಡು ಬರುತ್ತಾಳೆ ಎಂದು ಹೇಳಿದಾಗ ಅವರಿಗೆ ಎಲ್ಲರಿಗೂ ನಮಸ್ಕಾರ ಮಾಡಿ ತನ್ನ ಪಯಣವನ್ನು ಬೆಳೆಸಿದೆ.
