STORYMIRROR

Vijayalaxmi C Allolli

Abstract Classics Inspirational

4  

Vijayalaxmi C Allolli

Abstract Classics Inspirational

ಯಶಸ್ಸು

ಯಶಸ್ಸು

1 min
364

'ಆಗದು' ಎನ್ನುವ ಬಲಹೀನತೆಗೆ

'ಮಾಡುವೆ' ಎನ್ನುವುದನ್ನು ಬಲವನ್ನಾಗಿಸು,

ಅಂದಾಗ ಮಾತ್ರ ಯಶಸ್ಸು ಸಾಧ್ಯ..


ಇನ್ನೊಬ್ಬರ ಒತ್ತಾಯಕ್ಕೆ ಮಾಡುವ ಕೆಲಸಕ್ಕಿಲ್ಲ

ಯಶಸ್ಸು;

ಮನದಾಳದಿಂದ ಮಾಡುವ ಕೆಲಸಕ್ಕೆ

ಸಿಗುವುದು ಯಶಸ್ಸು....


ಯಶಸ್ಸು,ಕೀರ್ತಿ,ಜಯ ಸರಾಗವಾಗಿ ಸಿಕ್ಕರೆ

ಅದಕ್ಕೆ ಬೆಲೆ ಕಡಿಮೆ;ಜನರ ಮನದಲ್ಲೂ ಹೆಚ್ಚು ದಿನ

ಉಳಿಯುವುದಿಲ್ಲ....

ಕಠಿಣ ಪರಿಶ್ರಮ ಪಟ್ಟು ಪಡೆದದ್ದು

ತಲೆ ತಲೆಮಾರುಗಳಲ್ಲೂ ಉಳಿಯುತ್ತದೆ....


ಸರತಿ ಸಾಲಿನಲ್ಲಿ ನಿಂತು,ನಮ್ಮ ಸರದಿ ಬರುವವರೆಗೂ ಕಾದು

ಹೇಗೆ ನಮ್ಮ ಕೆಲಸಗಳನ್ನು ಮುಗಿಸಿ ಕೊಳ್ಳುತ್ತೇವೆಯೊ,

ಅದೇ ರೀತಿಯಾಗಿ ಜೀವನದಲ್ಲಿ ಬಂದಂತಹ ಕಷ್ಟಗಳ

ಸರದಿ ಸಾಲು ಮುಗಿಯುವವರೆಗೂ ತಾಳ್ಮೆಯಿಂದ ಕಾಯಬೇಕು ಅಂದಾಗ ಮಾತ್ರ ಯಶಸ್ಸು ಸಾಧ್ಯ...



Rate this content
Log in

Similar kannada poem from Abstract