ವರುಷದ ವಿಕಸನ
ವರುಷದ ವಿಕಸನ
ವರುಷದ ವಿಕಸನದಲ್ಲಿ ಹೊಸತನ,
ನವ ಉಲ್ಲಾಸದಿ ಹೊಸವರುಷದ ಆಗಮನ,
ಹಳೆನೆನಪುಗಳ ಬುತ್ತಿಯಲ್ಲಿ ನವಜೀವನ,
ಸಾಗುತಲಿಹುದು ವರುಷಗಳ ವಿಕಸನ!!
ಕಳೆಯುವ ಕಾಲವು ಇರುಳೆಡೆಗೆ,
ಸವಿಯುವ ಕ್ಷಣಗಳು ಮನಸ್ಸಿನೆಡೆಗೆ,
ಹೃದಯುವು ಹಿಗ್ಗುತ ಉಲ್ಲಾಸದೆಡೆಗೆ
ನಮ್ಮ ಜೀವನ ಚಿರವಾಗಿ ಸಾಗಲಿ ಬೆಳಕಿನೆಡೆಗೆ!!
ಹೊಸ ವರುಷ ನಮಗಾಗಿ ಅರ್ಪಣೆ,
ಮರೆಯೋಣ ಕಹಿನೆನಪುಗಳ ಬವಣೆ,
ಪ್ರತಿ ಕ್ಷಣಗಳನು ಸವಿಯುತ ಮಾಡುವ ಸಂಭ್ರಮಾಚರಣೆ,
ಮಾದರಿಯಾಗಲಿ ಹೊಸ ವರ್ಷದ ಆಚರಣೆ!!
ಸಾಧನೆಗಳ ಪೈರು ಸದಾ ಅರಳಲಿ,
ನೆಮ್ಮದಿಯ ಬೆಳಕು ಅನುಕ್ಷಣ ಬೆಳಗಲಿ,
ಸಂತೃಪ್ತಿಯ ಹೊಳೆ ಪುಷ್ಕಳವಾಗಿ ಹರಿಯಲಿ,
ಚರಿತ್ರೆಯ ಪುಟಗಳಲ್ಲಿ ನಮ್ಮ ಬಾಳಪುಟ ವಿಜೃಂಭಿಸಲಿ
