ಸಿದ್ಧ-ಅರ್ಥ
ಸಿದ್ಧ-ಅರ್ಥ
ಗೊತ್ತು..
ನೀನು ಶುಭ್ರ ಬಿಳಿಪರದೆ..
ಮೌನ ಮುರಿಯುವ ತವಕ
ಬಂದೂಕಿಗೆ |
ಮತೀಯ ದಿಟ್ಟಿಗೆ
ಪೆಟ್ಟುಕೊಟ್ಟ
ನಿನ್ನ ಮಗ್ಗ.
ಸಹಿಸಲಾಗದು ಅದಕೆ |
ಕೇಕೆ ಹಾಕುವ
ಬಂದೂಕು ಅದು
ಚಾಕುಚೂರಿ
ಬಿದಿರ ದೊಣ್ಣೆ ||
ಅರ್ಧ ತೆರೆದ ಕಂಗಳು
ಪೂರ್ಣ ತೆರೆದ
ಹೃದಯವು |
ಅರ್ಥಬದ್ಧ
ದಿವ್ಯಮೌನ||
ಸಹಿಸಲಾರದ
ಹತ್ಯಾರುಗಳು
ಬರಲೇ ಇಲ್ಲ
ನಿನ್ನ ಬಳಿ ||
ಮೌನದ
ಪ್ರಖರ ಬೆಳಕು
ತಾಳಲಾಗದು
ಅವಕೆ..||
ಮಂದಸ್ಮಿತದ
ನಿನ್ನ ನಗುವು
ವರವಾಗುವುದಿಲ್ಲ ಅವಕೆ..||
ರಾಜಕೀವಿಗೆ ಬೇಕು
ಒಡೆದು ಆಳುವ
ನೀತಿ.
ಹಾಗೂ
ಕೆಂಪು ಕಣ್ಣಿನ
ದೈವಗಳು ||
ನೀ ಮಾತ್ರ
ದಿವ್ಯ ಮೌನ..
ಉತ್ತರದ ಶಿಖರವಿದ್ದಂತೆ ||
ಸಿದ್ಧ-ಅರ್ಥದ
ಸಿದ್ಧಾರ್ಥ ||
