ಶೀರ್ಷಿಕೆ - ಮಹಿಳಾ ಶಕ್ತಿ
ಶೀರ್ಷಿಕೆ - ಮಹಿಳಾ ಶಕ್ತಿ
ಸಾಧಿಸುವ ಛಲ ನಿನ್ನದಾಗಬೇಕು
ಕೈ ಬೆರಳು ಮಾಡಿದರೆ ನಿಲ್ಲಿಸಬೇಕು
ಮುಳ್ಳಿನ ಹೊದಿಕೆ ದಾಟಿ ಬರಬೇಕು
ದೌರ್ಜನ್ಯ ಕಂಡರೆ ದುರ್ಗಿಯ ಅವತರಿಸಬೇಕು
ನಿರ್ಭಯವಾಗಿ ಹೋರಾಟ ಮಾಡುವಳು
ಗಡಿಯಲ್ಲಿನ ಶತ್ರುಗಳ ತಲೆ ಕತ್ತರಿಸುವವಳು
ಪ್ರಬಲ ಶಕ್ತಿಯಾಗಿ ಬೆಳೆದಿದ್ದಾಳೆ
ಯಶಸ್ವಿ ಸಾಧಕರ ಪಟ್ಟಿ ಹೆಸರು ಪಡೆದಿದ್ದಾಳೆ
ಅಭಿವೃದ್ಧಿ ಕಾರ್ಯಕ್ರಮ ನಿನ್ನ ಹೆಸರಿದೆ
ಸಮಾಜದ ಬಹುದೊಡ್ಡ ಶಕ್ತಿಯಾಗಿದೆ
ಉಜ್ವಲ ಭವಿಷ್ಯ ನಿನ್ನಯ ಕೈಯಲ್ಲಿದೆ
ಸರ್ವತೋಮುಖ ಅಭಿವೃದ್ದಿ ನಿನ್ನದಾಗಿದೆ
ಆರ್ಥಿಕ ಬೆನ್ನಲುಬಾಗಿ ಬೆಳೆದಿದ್ದಾಳೆ
ಆರೋಗ್ಯ ಸಂರಕ್ಷಣೆ ಮಾಡಿದ್ದಾಳೆ
ಸಮಾಜವನ್ನು ತಿದ್ದುವ ಶಕ್ತಿ ಆಕೆಯಲ್ಲಿದೆ
ಪ್ರಜ್ಞಾವಂತ ಸಮಾಜ ನಿರ್ಮಾಣವಾಗಿದೆ
