ಶೀರ್ಷಿಕೆ : ಮೌನ ಗೋಪುರದ ಮನದಳಲು
ಶೀರ್ಷಿಕೆ : ಮೌನ ಗೋಪುರದ ಮನದಳಲು
ನಿನ್ನ ಮೌನಕ್ಕೆ ಗೋಪುರ ಕಟ್ಟಿಸಿದೆನು
ಸಮಸ್ಯೆಗಳ ಸುರಿಮಳೆ ಭರಿಸಿದೆನು
ನೆನಪಿನ ದೋಣಿಯನ್ನು ಸೃಷ್ಟಿಸಿದೆನು
ಹಕ್ಕಿಗಳ ಬದುಕು ಕೊನೆ ಮಾಡಿದೆನು
ಕನಸಿನರಮನೆಗೆ ಪ್ರವೇಶ ನೀಡಿದೆನು
ಒಮ್ಮೆಲೇ ಮನಸ್ಸು ಹಗುರವಾಯಿತು
ಕನಸುಗಳ ರೆಕ್ಕೆಗಳನ್ನು ಹಾರಿಸಿದೆನು
ನನ್ನ ಮುಖದಲ್ಲಿ ನಗುವು ಮೂಡಿತು
ಕನಸಿನರಮನೆಯಲ್ಲಿ ಸುಂದರ ತೋಟದಲ್ಲಿ
ತೂಗುಮಂಚ ಎನ್ನುವ ಬಾಳಿನ ಪಯಣದಲ್ಲಿ
ಶುಖರಾಜನ ಸುಂದರವಾದ ಗಾಯನದಲ್ಲಿ
ಹೊಸ ಕನಸುಗಳ ರೆಕ್ಕೆಗಳ ಚಿತ್ತಾರದಲ್ಲಿ
ಎಲ್ಲಾ ಕಡೆಯಲ್ಲಿ ಹೊಸ ಸ್ವರ ಕೇಳುತ್ತವೆ
ಮನದಲ್ಲಿ ಆಸೆಗಳೇ ಪ್ರೀತಿಗಳೇ ಹೆಚ್ಚಾಗಿವೆ
ಪಕ್ಷಿಗಳೇ ನನ್ನ ನಾದಕ್ಕೆ ಧ್ವನಿಯನ್ನು ಕೂಡಿಸಿವೆ
ಎಲ್ಲರೂ ಸೇರಿ ಹೊಸ ಪಯಣಕ್ಕೆ ಸಾಗಿವೆ
