ರಾಜಧಾನಿ
ರಾಜಧಾನಿ
ರಾಜ್ಯದ ಆಡಳಿತಕ್ಕೊಂದು ಬೇಕು
ರಾಜಧಾನಿ,
ಸಕಲ ಸೌಕರ್ಯ ಸೌಲಭ್ಯಗಳನ್ನು
ಒದಗಿಸುವುದು ರಾಜಧಾನಿ,
ಕಡತಗಳ ವಿಲೇವಾರಿಗೆ
ಬೇಕು ರಾಜಧಾನಿ,
ನಮ್ಮ ಕರುನಾಡಿಗೆ ಇರುವವು
ಎರಡು ರಾಜಧಾನಿ,
ಒಂದು ಬೆಂಗಳೂರು
ಮತ್ತೊಂದು ಬೆಳಗಾವಿ,
ಆಡಳಿತ ಸುಗಮವಾಗಲು
ಬೇಕು ರಾಜಧಾನಿ,
ಎರಡಲ್ಲೂ ಕಾಣಬಹುದು
ವಿಧಾನ ಹಾಗೂ ವಿಕಾಸ ಸೌಧಗಳು,
ನಮ್ಮ ನಾಡಿನ ಹೆಮ್ಮೆಯ
ಕಟ್ಟಡಗಳು,
ಬೆಂಗಳೂರಿಗೆ ಕೆಂಪೆಗೌಡರು
ಬೆಳಗಾವಿಗೆ ಚೆನ್ನಮ್ಮನವರು,
ಕರುನಾಡು ಕಂಡಿದೆ
ಅನೇಕ ಶ್ರೇಷ್ಠರನ್ನು,
ಅನೇಕ ರಾಜರ ಆಳ್ವಿಕೆಯ
ಅವಧಿಯಲ್ಲಿದ್ದವು ಅವರವರ ರಾಜ್ಯದ ರಾಜಧಾನಿ....
