STORYMIRROR

Rathna Nagaraj

Romance

3  

Rathna Nagaraj

Romance

ಪ್ರೀತಿ

ಪ್ರೀತಿ

1 min
11.5K

 

ಪ್ರೀತಿಗೆ ಎಲ್ಲೆಯಿಲ್ಲ 

ಪ್ರೀತಿಗೆ ಕೊನೆಯಿಲ್ಲ

ಕೊಡುವುದೆ ಪ್ರೀತಿ

ಪಡೆಯುವುದೆ ಪ್ರೀತಿ

ಕಳೆದು ಕೊಳ್ಳುವುದೆ ಪ್ರೀತಿ


ಹೃದಯದಿ ಅವಿತಿರುವುದೆ ಪೀತಿ

ಮನದಿ ಹುದುಗಿರುವುದೆ ಪ್ರೀತಿ

ಭಾವ ರಾಗ ದ್ವೇಷಗಳದ್ದೆ ಪ್ರೀತಿ

ಕಣ್ಣುಗಳು ಹೊಸೆಯುವುದೆ ಪ್ರೀತಿ


ಪ್ರೀತಿ ಪರೀಕ್ಷಿಸಿದರೆ

ಪ್ರೀತಿ ಕೊಟ್ಟವ ಕೊಡಂಗಿ

ಪ್ರೀತಿ ಈಸ್ಕೊಂಡವ ಈರಭದ್ರ

 

ಪ್ರೀತಿ ಏತಿ ತಾಜಮಹಲ ಪ್ರೀತಿ

ಪ್ರೀತಿ ಗೆದ್ದರೆ ಅಜರಾಮರ ಪ್ರೀತಿ

ಪ್ರೀತಿ ಸೋತರೆ ದೇವದಾಸ ಪ್ರೀತಿ

ಕ್ರೋಧ ಪ್ರೀತಿ ಇಹ ಬಿಟ್ಟ ಪ್ರೀತಿ


ಪ್ರೀತಿ ಅಳೆಯಲು ಹೋದರೆ

ಅರಿವಾಗುವುದು ತಳಮಳ ಪ್ರೀತಿ

ಘಳಿಗೆ ಅರಿಯಲಾರದೆ ಹುಟ್ಟುವುದೆ ಪ್ರೀತಿ

ತಡಬಡ ಗಡಿಬಿಡಿ ಅಚ್ಚರಿಯಲ್ಲಿ ಹುಟ್ಟುವುದೆ ಪ್ರೀತಿ


ಇಹ ಬಿಟ್ಟ ಪ್ರೀತಿ ಮರ್ಕಟ ಪ್ರೀತಿ

ಪ್ರೇತವಾಗಿ ಅಲೆಯುವುದೆ ಪ್ರೀತಿ

ಪಶ್ಚಾತ್ತಾಪದಿ ಕುದ್ದು ಹೋಗುವ ಪ್ರೀತಿ

ನೊಂದು ಬೆಂದರು ಬೆಂಬಿಡದು ಪ್ರೀತಿ

                 

ಪ್ರೀತಿಯ ಕೆಣಕಿದರೆ ಸೆಣಸಾಟವಾಗುವುದೆ ಪ್ರೀತಿ

ಪಣದಲ್ಲಿ ಸೋತ ಪ್ರೀತಿ ಸೆರೆವಾಸವಾಗುವುದೆ ಪ್ರೀತಿ

ಪ್ರೀತಿಗೆ ಹಲವು ಮುಖ ಸಹಜವೊಂದು ಪ್ರೀತಿ 

ಮಮತೆಯ ಪ್ರೀತಿ ಸಂಭದಗಳನು ಹೊಸೆಯುವುದೆ ಪ್ರೀತಿ


ಸಮಾಜ ಕಟ್ಟುವುದು ಜನಮನ ಪ್ರೀತಿ

ಮಂಥನದಲ್ಲಿ ಕವಲೊಡೆಯುವುದೆ ಪ್ರೀತಿ

ಯೌವನದ ಪ್ರೀತಿ ಗೆದ್ದರೆ ಝೇಂಕಾರ ಪ್ರೀತಿ

ಸೋತ ಪ್ರೀತಿ ಕ್ರಾಂತಿಕಾರಿ ಕಾರುವ ಪ್ರೀತಿ


ಚಿರ ಯೌವ್ವನೆ ಪ್ರೀತಿ ಸದಾ ಸಂಚಾರಿ

ದಿನ ನಿತ್ಯ ಟಿಸಿಲೊಡೆಯುತ್ತಲೇ ಇರುವ ಪ್ರೀತಿ 

    



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance