ಪ್ರೇಮ ಕಾನನ
ಪ್ರೇಮ ಕಾನನ


ಕಾರ್ಮೋಡಗಳ ಸೀಳಿ ಬಂದ ಮಿಂಚು ನೀ
ಸ್ಮೃತಿಸಾಗರದ ಆಳದಲ್ಲಿ ಬಚ್ಚಿಟ್ಟ ಮುತ್ತು ನೀ
ಜೀವನದ ಮರುಭೂಮಿಯಲ್ಲಿ ದಾಹನೀಗಿಸುವ ಹನಿಯಾದೆ ನೀ
ಕತ್ತಲನ್ನು ಹಿಂದಿಕ್ಕಿ ಬಂದ ಹೊಂಗಿರಣವಾದೆ ನೀ
ವಸಂತಮಾದ ಹೊಸ ಚಿಗುರಾದೆ ನಾ
ಹರುಷದ ಅಲೆಯಲ್ಲಿ ತೇಲಾಡಿತು ಪ್ರೇಮ ಕಾನನ
ನಿರಾಕಾರ ರೇಖೆಗಳಲ್ಲಿ ಮೂಡಿತೊಂದು ಚಿತ್ತಾರ
ಜೋಡಿ ಹಕ್ಕಿಗಳ ಸ್ವಚ್ಛಂದ ಹಾರಾಟಕ್ಕೆ ತಲೆದೂಗಿತು ಅಂಬರ
ನಿನ್ನ ಸ್ವರನಾದವನ್ನು ಮೌನ ಸಮ್ಮತಿಯಿಂದ ಆಲಿಸುವ ಆಸೆ
ನಡೆದಾಡದ ನನ್ನ ಮನಸ್ಸಿಗೆ ನಿನ್ನ ಕಡೆ ಓಡುವ ಆಸೆ
ನಿನ್ನ ಕಾಂತಿಯುತ ಕಂಗಳ ಮುಗ್ಧತೆ ನಾನಗುವ ಆಸೆ
ನನ್ನ ಹೃದಯ ನದಿಗೆ ನಿನ್ನ ಶರಧಿಯ ಸೇರುವ ಆಸೆ