ನನ್ನಣ್ಣ
ನನ್ನಣ್ಣ
ನಿನ್ನ ಮಡಿಲ ಮಗಳಲ್ಲ ನಾನು
ಬರಿ ಒಡಹುಟ್ಟಿದವಳು ಆದರೂ
ನನಗಾಗಿಯೇ ಜೀವಿಸಿದೆ
ನನ್ನ ಏಳಿಗೆಗಾಗಿಯೇ ಶ್ರಮಿಸಿದೆ
ಅಣ್ಣನಲ್ಲವೋ ನೀನು ಪ್ರತ್ಯಕ್ಷ ದೇವರು
ಕತ್ತಲೆ ಕವಿದು ದಾರಿ ಕಾಣದ
ಸಂದಿಗ್ಧ ಪರಿಸ್ಥಿತಿಯಲ್ಲಿಯೂ
ಬೆಳಕಿನ ದ್ವೀಪ ಹಚ್ಚಿ ದಾರಿಯನು
ತೋರಿಸಿ ಕೈ ಹಿಡಿದು ನಡೆಸಿದೆ
ಅಣ್ಣನಲ್ಲವೋ ನೀನು ಪ್ರತ್ಯಕ್ಷ ದೇವರು
ಅಕ್ಷರ ಅಕ್ಷರಕೂ ಸ್ಫೂರ್ತಿಯನು
ನೀಡಿ ಸಾಕ್ಷರಸ್ತಳಾಗಿ ಮಾಡಿದೆ
ಭರವಸೆಯ ಚಿಲುಮೆ ಬತ್ತಿದಾಗಲೂ
ನವ ಚೈತನ್ಯವನು ತುಂಬಿದವನು
ಅಣ್ಣನಲ್ಲವೋ ನೀನು ಪ್ರತ್ಯಕ್ಷ ದೇವರು
ಎರಡು ಪುಟ್ಟ ಮಕ್ಕಳ ತಂದೆಯಾದರು
ಮೊದಲ ಕೂಸು ನನ್ನ ತಂಗಿ ಎಂದವನು
ಕಳೆದುಕೊಂಡಿಲ್ಲ ನಾ ಬಾಲ್ಯದ ಮಮತೆ
ಯಾಕೆಂದರೆ ಈಗಲೂ ನಾನಿನಗೆ ಕೂಸೆ
ಅಣ್ಣನಲ್ಲವೋ ನೀನು ಪ್ರತ್ಯಕ್ಷ ದೇವರು
ನಿನ್ನ ಜನುಮ ದಿನಕ್ಕೆ ನಾನೇನು
ಕೊಡಬಲ್ಲೆ ಶ್ರೇಷ್ಠ ಪ್ರೀತಿಯ ಕಾಣಿಕೆ
ಅದೆಲ್ಲದಕೂ ಮಿಗಿಲಾಗಿರುವ ನೀ ಕಲಿಸಿರುವ
ಈ ಅಕ್ಷರಗಳ ಕವಿತೆಯೇ ನಿನಗರ್ಪಣೆ
ಅಣ್ಣನಲ್ಲವೋ ನೀನು ಪ್ರತ್ಯಕ್ಷ ದೇವರು
