ನಿನ್ನ ಗುಂಗಲ್ಲೇ
ನಿನ್ನ ಗುಂಗಲ್ಲೇ
ನಿನ್ನ ನೆನಪಲ್ಲೇ ನನ್ನ ಕೂತ ಜಾಗ ಬಿಟ್ಟು ಬಂದೆ.....
ಅದೇ ನೆನಪಲ್ಲೇ ಅಡುಗೆ ಮನೆಗೆ ಹೋದೆ....
ಅದೇ ನೆನಪಲ್ಲೇ ಫಿಲ್ಟರ್ ಕಾಫಿ ಮಾಡಿದೆ...
ಅದೇ ನೆನಪಲ್ಲೇ ನನ್ನ ಜಾಗದಲ್ಲಿ ಬಂದು ಕುಳಿತೆ....
ಒಂದು ಗುಟುಗು ಕಾಫೀ ಕುಡಿಯುವಾಗ ತಿಳಿಯಿತು....
ನಾನು ನೆನಪಿಸಿಕೊಂಡು ಹೋಗಿದು..
ಈ ಒಂದು ಫಿಲ್ಟರ್ ಕಾಫೀ ಗಾಗೇ ಎಂದು.......
ಕಾಫಿಯನ್ನು ಹೀರುತ್ತಾ ಹೀರುತ್ತಾ...
ಚಳೀಯನ್ನೆ ಮರೆತು....
ಮನದಲ್ಲಿಯೇ ಒಂದು ಎಲ್ಲಿಲದ ಉತ್ಸಾಹ...
ಕಾಫೀ...ನೀನು ಯಾಕೆ ಅಷ್ಟೋಂದು ನಾಲಿಗೆಗೆ ಸ್ವಾಧ ನೀಡುವೆ...
ನಿನ್ನ ಬಿಟ್ಟು ಇರಲು ನನಗೆ ಸ್ವಲ್ಪ ಕಷ್ಟ
ಯಾಕೆಂದರೆ ನನಗೆ ನೀನು ತುಂಬಾ ಇಷ್ಟ
ಆಹಾ......ಕಾಫೀ ಕುಡಿಯುತಾ
ನನ್ನ ಇಷ್ಟದ ಪುಸ್ತಕ ಓಡುತಿದ್ದರೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.....