STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಮುಗ್ದ ಮನಸು

ಮುಗ್ದ ಮನಸು

1 min
294

ಕರೆಯದ ಹೊರತು ಬರಯೆ ಏನು 

ಕಾಣುವ ಬಯಕೆ ನಿನ್ನ ಕಾಡದೇನು 

ಮುಗ್ದ ಹುಡುಗಿಯ ಮನವಿದು 

ಹೆಣ್ಣಿನ ಮನ ಬಯಸದೇನು 


ಮುಂಗೋಪಿ ಮುದ್ದು ಚೆಲುವ 

ಹೇಳದೇ ಕದ್ದು ಹೋದೆಯ ಮನವ 

ಕನಸುಗಳು ನೂರೊಂದು ಬಿತ್ತಿ 

ವಿರಹ ಸುಡುತಿದೆ ಎದೆಯ ಹೊತ್ತಿ 


ಇರುಳಲಿ ಕನವರಿಕೆಯಾಗಿ ನೊಂದೆ 

ಬಳಿ ಬರದಿರಲು ಮಾಡಲೇನು ಮುಂದೆ 

ಅಚ್ಚ ಹಸಿರು ಒಣಗಿ ಉದುರುವ ಮುನ್ನ 

ಬೆಚ್ಚಗಿನ ಹೊದಿಕೆಯಾಗು ಬಾರೊ ಚೆನ್ನ 


ಗುಡಿಸಲಲಿ ಗುಮ್ ಎನ್ನುವ ಒಂಟಿತನ 

ನೀ ಬರದೆ ಬರಡಾಗಿದೆ ಹೆಣ್ತನ 

ಮುದ್ದು ಗರೆದು ರಮಿಸು ಬಾ ಮೆಲ್ಲ 

ತೋಳ್ತೆಕ್ಕೆಯಲಿ ಬಂದಿಯಾಗುವೆ ನಲ್ಲ 



এই বিষয়বস্তু রেট
প্রবেশ করুন

Similar kannada poem from Romance