STORYMIRROR

Angel Stella

Tragedy Classics Inspirational

4  

Angel Stella

Tragedy Classics Inspirational

ಮಾನವೀಯತೆಯನ್ನು ಮರೆತ ಮಾನವ

ಮಾನವೀಯತೆಯನ್ನು ಮರೆತ ಮಾನವ

1 min
203

ಈ ಜಗತ್ತು ನಮ್ಮದಲ್ಲ


ಐಕ್ಯತೆ ನಮ್ಮೊಳಗಿಲ್ಲ


ಕಷ್ಟಕ್ಕೆ ಸ್ಪಂದಿಸುವ ಭವಾನೆಯಿಲ್ಲ


ಸಹಾಯ ಕೇಳಿ ಬರುವವರಿಗೆ ಸ್ವಾರ್ಥಿಗಳಾದೇವಲ್ಲ


ನಾಳೆ ಏನಗುವುದೆಂಬ ಭರವಸೆಯಿಲ್ಲ


ನಾನೆಂಬ ಅಹಂ ಬಿಟ್ಟು ಹೋಗುತ್ತಿಲ್ಲ 


ದ್ವೇಷ ತೊರೆದಿಲ್ಲ 


ಕಳೆದುಕೊಂಡಿರುವುದು ಪಡೆದುಕೊಂಡಿಲ್ಲ 


ಬೇರೆಯವರಿಂದ ಅಪೇಶಿಸುವುದನ್ನು ಬಿಡುತ್ತಿಲ್ಲ


ಹಗೆತನ ಮರೆಯುತಿಲ್ಲ


ದುಷ್ಚಟ ತ್ಯಜಿಸುತಿಲ್ಲ


ಬಡವರಿಗೆ ಬೆಲೆಯಿಲ್ಲ


ವೃದ್ಧ ತಂದೆ ತಾಯಿಯರಿಗೆ ಮಕ್ಕಳ ಅನುಕಂಪವಿಲ್ಲ


ನಿರ್ಗತಿಕರಿಗೆ ಆಶ್ರಯವಿಲ್ಲ


ಅನಾಥ ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆಯಿಲ್ಲ


ವೇಶ್ಯೆ / ಮಂಗಳಮುಖಿ ಸಹೊದರಿಯರಿಗೆ ಸಮಾಜದಲ್ಲಿ ಗೌರವವಿಲ್ಲ


ಭ್ರಷ್ಟರಿಗೆ , ದರೋಡೆಕಾರರಿಗೆ, ದೇಶವನ್ನು ಲೂಟಿ ಮಾಡುವ ಹಲವು ರಾಜಕಾರಣಿಗಳಿಗೆ ಸಾಮಾನ್ಯ ಜನರ


ಕಣ್ಣೀರು ಲೆಕಕ್ಕಿಲ್ಲ 


ಪ್ರೀತಿಯಲ್ಲಿ ನಂಬಿಕೆಯಿಲ್ಲ 


ಸ್ನೇಹಿತರೊಳಗೆ ಒಮ್ಮನಸಿಲ್ಲ


ನ್ಯಾಯಕ್ಕೆ ಬೆಲೆಯಿಲ್ಲ


ಕೊಲೆಗಾರರು, ಕಾಮುಕರಿಗೆ ತಕ್ಕ ಶಿಕ್ಷೆಯಗುತಿಲ್ಲ 


ಹೆಣ್ಣು ಕುಲಕ್ಕೆ ರಕ್ಷಣೆಯಿಲ್ಲ


ಜಾತಿ ಹೆಸರಿನಲ್ಲಿ ಕಲಹವುಂಟು ಮಾಡುವವರೆಗೆ ಮನಸಾಕ್ಷಿಯಿಲ್ಲ


ನಮ್ಮನ್ನು ಕಾಯುವ ಯೋಧರಿಗೆ / ಆರಕ್ಷ ಸಿಬಂಧಿಗಳಿಗೆ


ನೆಮ್ಮದಿಯಿಲ್ಲ 


ವಿಧ್ಯಾರ್ಥಿಗಳಿಗೆ ಸರಿಯಾದ ವಿಧ್ಯಕ್ಕೆ ತಕ್ಕ ಉದ್ಯೋಗ ದೊರಕುತ್ತಿಲ್ಲ


ದೇವಾಲಯ ಗುಡಿ ಮಂದಿರಗಳಲ್ಲಿ ದೈವ ಶಾಂತಿಯನ್ನು


ಕಾಣಲಾಗುತಿಲ್ಲ


ಪ್ರಕೃತಿಯ ಮಲೀನತೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ


ಸಮಾಜವು ವ್ಯಕ್ತಿಯ ಹಾಗೂ ವ್ಯಕ್ತಿತ್ವದ ಕುರಿತಾಗಿ ನಿಂದಿಸಿ ಮಾತನಾಡಿ ಅವರನ್ನು ನೂಯಿಸುವುದನ್ನು ನಿಲ್ಲಿಸುತಿಲ್ಲ


ಸಂಬಂಧಿಕರಲ್ಲಿ ನಿಯತಿಲ್ಲ


ದೇಶ ದೇಶಗಳಲ್ಲಿ ಯುದ್ಧಗಳು ಮುಗಿಯುತ್ತಿಲ್ಲ


ಕಲ್ಲಿಗು ಹಾಗು ಮಾನವನಿಗೂ ವ್ಯತ್ಯಾಸವಿಲ್ಲ


ಒಳ್ಳೆಯವರಿಗೆ ಇಲ್ಲಿ ಕಾಲವಿಲ್ಲ

ದುರ್ಜನರಿಗೆ ಅಂತ್ಯವಿಲ್ಲ


ಎಷ್ಟೇ ಯುಗಗಳು ಕಳೆಯುತ್ತ ಬಂದರೂ ಕೊಂಚವೂ

ಪರಿವರ್ತನೆಯಾಗದೆ ಮಾನವೀಯತೆಯನ್ನು ಸಂಪೂರ್ಣ

ಮರೆತೇ ಹೋದೆವಲ್ಲ.



Rate this content
Log in

Similar kannada poem from Tragedy