ಕರುಣಿಸು ಜ್ಞಾನದ ದೀಪ
ಕರುಣಿಸು ಜ್ಞಾನದ ದೀಪ
ಕರಮುಗಿದು ಬೇಡುವೆ ಗಣಪ
ಕರುಣಿಸು ಜ್ಞಾನದ ದೀಪ.!ಪ!
ಕಾಯಿ ಕಡುಬು ಮೋದಕ ತಂದು
ಗರಿಕೆಯಿಂದ ಪೂಜೆಯ ಮಾಡಿ
ನಿನ್ನ ನಾಮ ಭಜಿಸುವೆ ನಾನು
ವರವ ನೀಡಿ ಹರಿಸಯ್ಯ ಬೆನಕ.!
ಪಾಶಾಂಕುಶ ಲಂಭೋಧರನೇ
ಪಾರ್ವತಿಯ ಪ್ರೀಯ ಪುತ್ರನೇ
ಸರ್ವಗಣಗಳಧಿಪತಿ ನೀನು
ಕರುಣೆಗಣ್ಣು ತೋರದೇನು.?
ಭಾದ್ರಪದ ಶುಕ್ಲದ ಚೌತಿ ದಿನ
ಪೂಜಿಪೆನು ಭಕ್ತಿಯಲಿ ಗಣಪನ
ಮೂಷಿಕವಾಹನ ಗಣನಾಥನೆ
ಕಾಪಾಡು ನಿನ್ನ ಭಕ್ತ ಗಣವನೆ..
ಎಕದಂತನೇ ಕರುಣಾನಿಧಿಯೇ
ಕಷ್ಟಗಳ ಪರಿಹರಿಸಿ ಉಳಿಸಯ್ಯ
ಇಷ್ಟಾರ್ಥಗಳ ಸಿಧ್ದಿಸಿ ಬೆಳಿಸಯ್ಯ
ನಿನ್ನ ಭಕ್ತರ ಕೈಹಿಡಿದು ನೆಡೆಸಯ್ಯ.!
