STORYMIRROR

Tulasi Naveen

Drama Fantasy Inspirational

4  

Tulasi Naveen

Drama Fantasy Inspirational

ಕಳೆದುಕೊಳ್ಳುವುದೇನಿದೆ?

ಕಳೆದುಕೊಳ್ಳುವುದೇನಿದೆ?

1 min
272

ಕಳೆದುಕೊಳ್ಳುವುದೇನಿದೆ

ಪ್ರೀತಿಯನ್ನ ಹಂಚಿದ ಮೇಲೆ

ಪಡೆದುಕೊಳ್ಳುವ ಪರಿಯಿದೆಯಲ್ಲ

ಮರೆಯಲಾಗದು ಉಸಿರಿರುವರೆಗೆ..


ಹೊಸ ಚಿಗುರು ಹೊಸ ಕನಸು

ಒಂದೇ ಸಮನೆ ಚಿಗುರಿತಿದೆ..

ನಗುಮೊಗ್ಗು ಅರಳುವ ಹೊತ್ತಿಗೆ

ಜೇನುನೊಣವು ಹಾರಿ ಬಂದಿದೆ..


ಅರಳಿದ ಸುಮದ ಘಮವೇ

ಜೇನ್ನೊಣಕೆ ಅಮಲಾಗಿದೆ..

ಹೂವಿನ ಮಡಿಲಿನಲೇ ಹಾಗೆ

ನಿದಿರೆಗೆ ಜಾರಿದೆ..


ಹಗಕು ಕಳೆದು ಕೈಜಾರಿ ಹೋಗಿ

ಸುತ್ತಲು ಕತ್ತಲೆ ಆವರಿಸೆ.

ಜೇನ್ನೊಣಕೆ ದಿಗಿಲಾಗಿ

ಒಂದೇ ಸಮನೆ ಅಳಲು ಶುರುಮಾಡಿದೆ..


ಕ.ಮದ ಏತಕೆ ಅಳುವೆ ನೀನು

ನಾನು ನಿನ್ನಯ ಅಮ್ಮನು

ಹೊಸ ಕನಸುಗಳ ಹೊತ್ತು ನಿಂತಿರುವೆ

ಹರುಷದಿ ಹೆಜ್ಜೆಯ ನೀನಿಡು..


Rate this content
Log in

Similar kannada poem from Drama