STORYMIRROR

Tulasi Naveen

Children Stories Inspirational Children

4  

Tulasi Naveen

Children Stories Inspirational Children

ಇರುವೆ ಮಕ್ಕಳ ಸಾಹಿತ್ಯ

ಇರುವೆ ಮಕ್ಕಳ ಸಾಹಿತ್ಯ

1 min
412

ಇರುವೆ ಇರುವೆ ಕೆಂಪಿರುವೆ

ಇರುವೆ ಇರುವೆ ಕಪ್ಪಿರುವೆ

ಎಲ್ಲಿರುವೆ ಕೆಂಚಿರುವೆ??

ಇರುವೆ ಇರುವೆ ಕೆಂಪಿರುವೆ

ಸಕ್ಕರೆ ನಿನ್ನಯ ಬಾಯ್ತುಂಬ

ಕಚ್ಚಿದರೆ ಉರಿ ಉರಿ ಮೈತುಂಬಾ

ಸಕ್ಕರೆ ನಿನ್ನಯ ಬಾಯ್ತುಂಬಾ

ಕಚ್ಚಿದರೆ ಉರಿಉರಿ ಮೈ ತುಂಬಾ

ಏತಕೆ ಭಯವು ನಿನಗೀತರ

ನಾನು ನಿನ್ನಯ ಗೆಳತಿ ತರ..

ಏತಕೆ ಭಯವು ನಿನಗೀತರ

ನಾನು ನಿನ್ನಯ ಗೆಳತಿ ತರ..

ನಾನೊಬ್ಬಳೆ ಇಲ್ಲಿ ಕುಳಿತಿರುವೆ

ನನ್ನಯ ಗೆಳೆತನ ಒಪ್ಪುವಿರೇ?

ವಿಧವಿಧ ಗೂಡನು ಕಟ್ಟುವಿರಿ

ಹೊಸ ಹೊಸ ಬಗೆಯಲಿ ಬದುಕುವಿರಿ

ಸಾಲು ಸಾಲು ಸಾಗುವಿರಿ

ನಿಮ್ಮಯ ಸಂಗಡ ನಾ ಬರಲೇ

ಶಿಸ್ತಿನ ಪಾಠವ ಕಲಿಸುವಿರಿ

ನಾಳೆಯ ಭರವಸೆ ತುಂಬುವಿರಿ..

ಸಿಂಧು ಭಾರ್ಗವ, ಬೆಂಗಳೂರು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ