STORYMIRROR

Tulasi Naveen

Children Stories Inspirational Children

3  

Tulasi Naveen

Children Stories Inspirational Children

ಪುಟ್ಟ ಗುಬ್ಬಿ - ಮಕ್ಕಳ ಸಾಹಿತ್ಯ

ಪುಟ್ಟ ಗುಬ್ಬಿ - ಮಕ್ಕಳ ಸಾಹಿತ್ಯ

1 min
160

ಪುಟ್ಟ ಗುಬ್ಬಿ

ಚಿಕ್ಕ ಗುಬ್ಬಿ

ಗೂಡು ಕಟ್ಟಲು ಬಂದಿತು

ಕಸವ ತಂದು

ಕಾಳು ತಂದು

ಗೂಡು ಹೆಣೆಯ ತೊಡಗಿತು

ಗಂಡು ಹೆಣ್ಣು

ಗುಬ್ಬಿ ಜೋಡಿ

ಚಂದದ ಮನೆಯ ಕಟ್ಟಲು

ಉರುಳಿ ಹೊರಳಿ

ಒಂದು ಮತ್ತೊಂದು

ಎರಡು ತತ್ತಿಯನಿಟ್ಟಿತು..

ಅಚ್ಚರಿಯಿಂದ

ಆಸ್ತೆಯಿಂದ

ಕನಸು ಕಾಣ‌ಹೊರಟವು

ಎಚ್ಚರಿಕೆಯಿಂದ

ಕಾಳಜಿ ತೋರುತ

ದಿನವು ಕಾವು ಕೊಟ್ಟವು

ತತ್ತಿ ಒಡೆದು

ಮರಿಗಳು ಬರಲು

ಗುಬ್ಬಿಗಳ ಕಲರವ ಎಲ್ಲೆಡೆ

ಸುಂದರ ಸಂಸಾರ

ಆನಂದದಾಗರ

ಎಲ್ಲರೂ ಇಣುಕಿ ಕಂಡರು..


Rate this content
Log in