ಕಗ್ಗತ್ತಲ ಕನಸು
ಕಗ್ಗತ್ತಲ ಕನಸು
ಕಗ್ಗತ್ತಲ ಕಾಡು
ಎಲ್ಲಿ ನೋಡಿದರು ಕತ್ತಲು
ನನ್ನ ನಡಿಗೆಯಲ್ಲಿ ಅಂಜಿಕೆಯ ಹೆಜ್ಜೆ
ನನ್ನ ಹೃದಯದಲ್ಲಿ ಭಯದ ಹಾಡು
ನನ್ನ ಸನಿಹಕ್ಕೆ ಒಂದು ಪರಿಮಳದ ಬೀಡು
ಅದುವೆ ಒಂದು ಹೂವಿನ ವಿಸ್ಮಯದ ಅರಳು
ಕಗ್ಗತ್ತಲ ಕಾಡು
ಎಲ್ಲಿ ನೋಡಿದರು ಕತ್ತಲು
ಮೋಡದಲ್ಲಿ ಒಂದು ಗುಂಡಾದ ವಜ್ರದ ಮಿಂಚು
ಅದುವೆ ಚಂದಿರನ ಒಳಪು
ವರುಣನ ಆರ್ಭಟಕ್ಕೆ ನಾ ಹೆದರಿದೆ
ಗುಡುಗು ಮಿಂಚಿನ ಸ್ಪೋಟಕ್ಕೆ ನಾ ಕರಗಿಹೋದೆ
ಕಗ್ಗತ್ತಲ ಕಾಡು
ಎಲ್ಲಿ ನೋಡಿದರು ಕತ್ತಲು
ಆ ಕತ್ತಲಿನಿಂದ ಹೊರಗೆ ಬರಲು ದೊರಕಿತ್ತು ಹಾದಿ
ನನ್ನ ಮೊಗದಿ ಒಂದು ಮುಗುಳು ನಗೆಯ ಮೋಡಿ
ನನ್ನ ಕಣ್ಣನ್ನು ಎಚರಿಸಿದಾಗ
ನನಗೆ ತಿಳಿಯಿತು ಅದುವೆ ನನ್ನ ಕಗ್ಗತ್ತಲ ಕನಸು....!
