STORYMIRROR

Sahana M

Romance

2  

Sahana M

Romance

ಹೃದಯದ ಮಾತು....

ಹೃದಯದ ಮಾತು....

1 min
663

ಮೆಲ್ಲಮೆಲ್ಲನೆ ನನ್ನ ಹೃದಯ ಜಾರುತಿದೆ

ಮೆಲ್ಲಮೆಲ್ಲನೆ ನನ್ನ ಹೃದಯ ಕಾಣೆಯಾಗಿದೆ

ನನಗೆ ತಿಳಿಯದೆ ನಿನ್ನನ್ನು ಎಷ್ಟು ಪ್ರೀತಿಸುವೆ

ನಿನ್ನ ಬೇಟಿಗಾಗಿ ನಾನು ಬಯಸುತ್ತಿರುವೆ


ಅದೆ ಸಂಜೆ ಅದೆ ಹಾಡು

ಆದರೆ ನಿನ್ನ ಮೇಲಿನ ಪ್ರೀತಿ ದಿನೆ ದಿನೆ ಹೆಚ್ಚಾಗುತ್ತಿದೆ

ನಿದ್ದೆ ಇಲ್ಲದೆ  ಕನಸು ಕಾಣಲು ಬಯಸುತ್ತೇನೆ

ನಾನು ನಿನಗಾಗಿ ಇನ್ನು ಏನು ಮಾಡಬೇಕು


ಮೆಲ್ಲಮೆಲ್ಲನೆ ನನ್ನ ಹೃದಯ ಜಾರುತಿದೆ

ಮೆಲ್ಲಮೆಲ್ಲನೆ ನನ್ನ ಹೃದಯ ಕಾಣೆಯಾಗಿದೆ

ಪ್ರೀತಿಯಲ್ಲಿ ಚಿಗುರಿತು ನನ್ನ ಮನಸು

ಆಸೆಯಲ್ಲಿ ಅರಳಿತು ನನ್ನ ಮನಸು


ನೀನೆ ಎಂದಾದರೂ ನನ್ನ ಬಳಿ ಹೇಳುವೆ

ಹಿಂತಿರುಗಿ ನನ್ನ ಬಳಿಗೆ ಬರುವೆ

ನಿನ್ನ ಪ್ರೀತಿಯ ಸನಿಹಕಾಗಿ ಕಾಯುತ್ತಿರುವೆ

ಮೆಲ್ಲಮೆಲ್ಲನೆ ನನ್ನ ಎದೆಯ ಗೂಡಿಗೆ ಸೇರಿಕೊ

                                      

ಮೆಲ್ಲಮೆಲ್ಲನೆ ನನ್ನ ಹೃದಯ ಜಾರುತಿದೆ

ಮೆಲ್ಲಮೆಲ್ಲನೆ ನನ್ನ ಹೃದಯ ಕಾಣೆಯಾಗಿದೆ

ನನ್ನ ಹೃದಯದಾಣೆ ಹೃದಯದಲ್ಲಿ ಪ್ರೀತಿ ಇದೆ

ಆಗೊಮ್ಮೆ ಈಗೊಮ್ಮೆ ನೀ ಬಂದು ದೋಚಿ ಹೋದ ನನ್ನ ಹೃದಯ ನಿನ್ನಲ್ಲಿದೆ........                            


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance