STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಕೇಸರಿ ಬಣ್ಣ

ಕೇಸರಿ ಬಣ್ಣ

1 min
256

ಕಿತ್ತಳೆ ಬಣ್ಣದ 

ಕಿತ್ತಳೆ ಹಣ್ಣು

ತಿನ್ನಲು ಬಹಳ 

ರುಚಿಯಿಹುದು ॥

ಹುಳಿ ಸಿಹಿ ಮಿಶ್ರಣ 

ಬಾಯಿಗೆ ಹೂರಣ 

ಮರಕದು ತೋರಣ

ಎನಿಸಿಹುದು॥

ಕಂದನ ಚಿತ್ರದಿ 

ಸೂರ್ಯನ ಬಣ್ಣವು

ಕೇಸರಿಯಾಗಿಹುದು॥

ಧ್ವಜದಲಿ ಮೆರೆಯುವ

ಕೇಸರಿ ಪಟ್ಟಿಯು

ಧೈರ್ಯದ ಕುರುಹಾಗಿಹುದು॥

ಉರಿಯುವ ಬೆಂಕಿಯು

ಕೇಸರಿ ಬಣ್ಣದಿ

ಮನಕದು ಭಯವನು

ಹುಟ್ಟಿಸಿದೆ ॥

ವ್ಯಕ್ತಿಯ ಜ್ಞಾನವು

ವ್ಯಕ್ತಿಯ ಬೆಳಗಿಸಿ

ಜ್ಞಾನದ ಜ್ಯೋತಿಯ 

ಹರಡುವುದು॥


Rate this content
Log in

Similar kannada poem from Classics