ಕಾಮದಂಗಡಿ
ಕಾಮದಂಗಡಿ
ನಗುವೇ ಇರದ ಊರಿನಲಿ
ಅಳುವ ಮುಖಗಳು
ಕಳಚಿ ಬಿದ್ದಿವೆ ಮುಖವಾಡಗಳು
ಹೆತ್ತು ಆಡಿಸಿದ ಕೈಗಳು
ದೇಹ ಸವೆಸಿದ ಮೈಗಳು
ಮನುಷ್ಯತ್ವ
ತೀಟೆಯ ತೊಟ್ಟಿಲಲಿ ನಿದ್ರಿಸುತ್ತಿದೆ
ಹಗಲು ಇರುಳುಗಳು
ಕಾಮದ ಮೋರಿಯೊಳಗೆ ಹರಿಯುವಾಗ
ಸೂರ್ಯನೂ ಸಂತೈಸಲಾರ
ಚಂದ್ರನೂ ಮಾತಿಗಿಳಿಯಲಾರ
ತನ್ನ ತಾನು ತೊಳೆದುಕೊಳ್ಳುವ ಜಗ
ಹೊಲಸನ್ನೆಲ್ಲ ಇವರ ಮೈಗೆ ಮೆತ್ತುವಾಗ
ಮಾತುಗಳು ಕಳಚಿ ಬೀಳುತ್ತವೆ
ಮಣ್ಣಿನ ಆಸರೆ ಬಯಸಿ
ದೇಹ ಪುಟಿದು ನಿಲ್ಲುತ್ತದೆ
ಜಗದ ನೋಟ ತಿರಸ್ಕರಿಸಿ
