ಜೀವನ ಸೋಲುಗಳು
ಜೀವನ ಸೋಲುಗಳು
ಗೀಚಲಾಗದ ಹಾಳೆಯಲ್ಲಿ ಗಿಚೀ ಹೋದ ನಮ್ಮ ಬದುಕು,
ನೋವಿನಿಂದ ಕೂಡಿ ಬಂದ ಜೀವನದ ನಮ್ಮ ಗುರಿಯು,
ಕೂಗಿ ಕೂಗಿ ಕರೆದರು ಅರಳದಿರುವ ನಮ್ಮ ನಗುವು,
ನೋವಿನಿಂದ ಬಳಲಿ ಕೂಡ ಬತ್ತು ಹೋದ ಕಂಬನಿ..
ನೀರೆ ಇಲ್ಲದ ಧರಣಿ ಮೋಡ ನೀಡದ ಆಸರೆ,
ಬರಗಾಲದ ಬಿಸಿ ಬೇಗೆಗೆ ಗಾಳಿ ನೀಡದ ಆಸರೆ,
ಒಣಗಿದ ಗಿಡಗಳು ಮತ್ತೆ ಚಿಗುರುವ ಆಸರೆ,
ನೊಂದ ಜೀವವು ಮತ್ತೆ ಜೀವನವ ಅನುಭವಿಸುವ ಆಸರೆ...
ಕೊಚ್ಚಿಹೋದ ನೀರು ಮತ್ತೆ ಸಾಗರಕೆ ಹೋಗದು,
ಕಳೆದು ಹೋದ ಸಮಯವು ಮತ್ತೆ ಬಂದು ಸೇರದು,
ಹರಿದೂ ಹೋದ ಹಾಳೆಯಲ್ಲಿ ಮತ್ತೆ ಲೇಖನಿ ಬರೆಯದು,
ಗಳಿಸಲಾಗದ ಹೇಸರ ಮತ್ತೆ ಗಳಿಸಲಾಗದು...
ಒಡೆದೂ ಹೋದ ಹೃದಯಕೆ ಮತ್ತೆ ನೋವಿನ ನೆನಪು,
ಗಾಯಗೊಂಡ ಮನವು ಈಗ ತಾನೇ ಆರಲು,
ಮತ್ತೆ ಕೊಲ್ಲಬೇಡಿ ಈ ದುರಾದೃಷ್ಟ ಪಾಪಿಯನ್ನು,
ಶಾಂತಿಯನ್ನು ಕೊಟ್ಟು ಕಳಿಸಿ ಮತ್ತೆ ಬರನು ಧರಣಿಗೆ.
