STORYMIRROR

Santhosh T C

Abstract Inspirational

2  

Santhosh T C

Abstract Inspirational

ಜೀವನ ಒಂದು ಬಣ್ಣದ ಗೆಜ್ಜೆ

ಜೀವನ ಒಂದು ಬಣ್ಣದ ಗೆಜ್ಜೆ

1 min
122

ಜೀವನ ಒಂದು ಬಣ್ಣದ ಗೆಜ್ಜೆ,

ಹೆಜ್ಜೆ ಮೇಲೊಂದು ಹೆಜ್ಜೆ

ಬಣ್ಣದ ಗೆಜ್ಜೆ 

ಕುಣಿಯುತ್ತಿದೆ ಘಲ್ ಘಲ್

ಕುಣಿಯುತ್ತಿದೆ ಜಲ್ ಜಲ್


ತಿರುಗುತ್ತಿರುವ ಭೂಮಿಯಲಿ ಇರೋದು ಕಲ್ಲು -ಮುಳ್ಳೆ,

ನಾವೆ ಚುಚ್ಸಿಕೋಬೇಕು , ನಾವೆ ಬಿಸಾದ್ಬೇಕು,

 ಹೆಜ್ಜೆ ಪಕ್ದಲ್ಲಿ ಹೆಜ್ಜೆ , ಬಣ್ಣದ ಗೆಜ್ಜೆ,

 ಕುಣಿಯುತ್ತಿದೆ ಘಲ್ ಘಲ್

 ಕುಣಿಯುತ್ತಿದೆ ಜಲ್ ಜಲ್.

 

 ಈ ಪುಟ್ಟ ಲೋಕದಲ್ಲಿ ನೂರಾರು ಕನಸುಗಳು

 ಹೊಡೆಯಲು ಕಾಯುತಿಹವು ಸಮಯದ ಗಿರುಗೆಜ್ಜೆ

 ಹೆಜ್ಜೆ ಹಿಂದೊಂದ್ ಹೆಜ್ಜೆ ಬಣ್ಣದ ಗೆಜ್ಜೆ

 ಕುಣಿಯುತ್ತಿದೆ ಘಲ್ ಘಲ್,

 ಕುಣಿಯುತ್ತಿದೆ ಜಲ್ ಜಲ್ ‌‌.


ಮೇಲೆ ಇರುವ ಚಂದ್ರನನ್ನು ಮುಟ್ಟುವ ಆಸೆ

ಕನಸುಗಳ ಕತ್ತರಿಸುವ ಜನಗಳು ಬಿಡಲು

ಹೆಜ್ಜೆ ಕೆಳಗೊಂದ್ ಹೆಜ್ಜೆ ಬಣ್ಣದ ಗೆಜ್ಜೆ

ಕುಣಿಯುತ್ತಿದೆ ಘಲ್ ಘಲ್

ಕುಣಿಯುತ್ತಿದ ಜಲ್ ಜಲ್


Rate this content
Log in

Similar kannada poem from Abstract