ಹುಚ್ಚು ಮನಸ್ಸು
ಹುಚ್ಚು ಮನಸ್ಸು
ಕೈ ತುಂಬ ಮದರಂಗಿ ಹಾಕಿಸಿಕೊಂಡು....
ಕಣ್ಣಿನ ತುಂಬ ನೂರಾರು ಕನಸ್ಸುಗಳನ್ನು
ಹೊತ್ತುಕೊಂಡು..
ಮನಸ್ಸಿನ ತುಂಬ ನೂರಾರು ಕಾಮನೆಗಳನ್ನು
ತುಂಬಿಕೊಂಡು ....
ಹಣೆಯಲ್ಲಿ ಬಾಸಿಂಗ,
ಕೈಯಲ್ಲಿ ಕಂಕಣ ಕಟ್ಟಿಸಿಕೊಂಡು
ಹಸಮಣೆಯ ಏರಬೇಕಾದವಳು...
ಹುಚ್ಚು ಮನಸ್ಸನ್ನು ಹರಿಯಲು ಬಿಟ್ಟು
ಹೆತ್ತ ಹೊಡಲ ಬರಿದಾಗಿಸಿ
ತನ್ನ ಪಯಣ ಬೆಳೆಸಿದ್ದಳು ಬಾರದ ಊರಿಗೆ....
ನೋವುಗಳಿಲ್ಲದ ಪ್ರೀತಿಯ ತೀರಕ್ಕೆ.....
