STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ಹಸಿರಿದ್ದರೆ ಉಸಿರು

ಹಸಿರಿದ್ದರೆ ಉಸಿರು

1 min
395


ಉರಿಬಿಸಿಲು ಕಂಡು ಹಿಡಿ ಶಾಪವಿಟ್ಟೇವು

ಉಸಿರಾಡುವ ಗಾಳಿಗೆ ಸಂಚಕಾರ ತಂದೇವು

ನೆರಳು ಕೊಡುವ ಮರದ ಕೊರಳನ್ನ ಕತ್ತರಿಸಿದೆವು 

ನೆರಳಲ್ಲಿ ಕೂತು ನರಳಾಡುವ ಸ್ಥಿತಿಗೇ ಮುಟ್ಟಿದೆವು 


ನೆಡಲಿಲ್ಲ ನಾವೆಂದೂ ಒಂದೂ ಮರವನ್ನು

ಮರೆತಿಲ್ಲ ಮರದ ನೆರಳಿಗೆ ನಿಲ್ಲುವದನ್ನು

ತಪ್ಪಿಸಿಲ್ಲ ಕೊಡಲಿಯ ಏಟನ್ನೆಂದೂ ನಾವು

ಕಡಿದದ್ದು ಮರವಲ್ಲ ನಮ್ಮ ಬದುಕನ್ನೇ ನಾವು


ಇನ್ನೂ ಅರಿತಿಲ್ಲ ವಿನಾಶದ ಅಂಚಿನಲ್ಲಿರುವುದನ್ನು

ಅಟ್ಟಹಾಸದಲ್ಲಿ ಕೆಡವಿ ಕಟ್ಟುತಿರುವೆವು ಮನೆಯನ್ನು

ಸುಂದರ ವಿನ್ಯಾಸದ ಬಹುಮಹಡಿ ಕಟ್ಟಡಗಳನ್ನು

ಹೀಗೆ ಸಾಗಿದರೆ ಉಳಿಯುವುದೇ ಪ್ರಕೃತಿ ನಮಗಿನ್ನು 


ಮಾನವನ ಕ್ರೂರತ್ವಕ್ಕೆ ಕೊನೆಯಿಲ್ಲವಲ್ಲ ಇಲ್ಲಿಂದು 

ಬರಿದು ಮಾಡುತ್ತಿರುವುದು ಹೆತ್ತೊಡಲನ್ನು ಇಂದು 

ಮರೆಯದಿರಿ ಮಣ್ಣಲ್ಲಿ ಮಣ್ಣಾಗುವ ಮುನ್ನವಿಂದು

ಉಳಿಸಿ ಬೆಳೆಸಬೇಕು ನಾವು ನಿತ್ಯವು ಹಸಿರನ್ನಿಂದು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics