STORYMIRROR

Padmalatha Mohan

Romance

3  

Padmalatha Mohan

Romance

ಹರೆಯ ಹರಿಯುವ ಮುನ್ನ

ಹರೆಯ ಹರಿಯುವ ಮುನ್ನ

1 min
11.8K

ಹರೆಯ ಹರಿಯುವ ಮುನ್ನ....


ಚಳಿಗಾಲದಲಿ 

ಬಿಸಿಯಪ್ಪುಗೆಯ ಒಲ್ಲೆ 

ಎಂದರೆ ಆ ಚಳಿಗಾಳಿಗೆ

ಬೇಸರ....

ಬೇಸಿಗೆಯಲಿ

ತನು ಸುಡುತಿರಲು

ದಾಹ....

ಬೇಡಿಬಂದಳು

ನೀರಡಿಕೆ..

ಮಳೆಗಾಲದಲಿ

ಒದ್ದೆಯಾದ ಗುಬ್ಬಿ ಮರಿ

ಆಸರೆ ಬಯಸಿ ಬಂದಿರೆ..

ಇನಿಯ ಪ್ರೀತಿಸದೆ ಇರಲು

ಯಾವ ಕಾರಣ ಹೇಳು?

ಮಧುಬಟ್ಟಲು ತುಂಬಿರಲು

ದುಂಬಿಯಾಗಿರೆ ನೀನು

ಜೇನ ಸವಿಯದೆ ಬಿಟ್ಟೆಯೇನು?

ಹರೆಯ ಹರಿಯುವ ಮುನ್ನ

ಪ್ರೀತಿ ಹರಿದರೆ ಚೆನ್ನ

ಬಾಳು ಜೊತೆಯಾಗಿ 

ನಡೆದರೆ ಚೆನ್ನ..

ಕನಸು ಮಾಸಿದ ಮೇಲೆ.

ಒಲವು ಮೂಡಿದರೇನು

ಹರೆಯ ಮತ್ತೆ ಮರಳದು

ತಿಳಿದಿರಲಿ ಜೋಕುಮಾರ...



Rate this content
Log in

Similar kannada poem from Romance