STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಹೊಸ್ತಿಲು ದಾಟಿ!

ಹೊಸ್ತಿಲು ದಾಟಿ!

1 min
180


ನೂರು ಭಾವನೆಗಳ 

ಪುಟ್ಟ ಗೂಡೊಳಗೆ ನುಸುಳಿ, 

ಕಂಡ ಕಂಡ ಹಾದಿ ಸವೆಸಿ 

ಮುಂಜಾವಿನಲ್ಲಿ ಚಿಗುರು 

ಎಲೆಯ ಮೇಲೆ ಬಿದ್ದ 

ಮುಂಜಾವಿನ ಹನಿಯಂತೆ 

ಅಷ್ಟಷ್ಟೇ ಕರಗಿ ನೀರಾಗಿ, 

ಆವಿಯಾಗಿ , ಕಾರ್ಮೋಡವಾಗಿ 

ಚೈತ್ರದ ಚಿಗುರಾಗಿ 

ತಂಗಾಳಿಯ ತಂಪಲಿ 

ಮಿಂದು ನಡುಗುತ್ತಿರಲು .


ಮನದಲ್ಲಿನ ಮೌನಕಟ್ಟೆ ಒಡೆದು, 

ಒಡಲಿನ ಬೆಚ್ಚನೆಯ 

ಅಪ್ಪುಗೆಯ ಬಾಹುಬಂಧನದಲ್ಲಿ 

ಪುಟ್ಟ ಮಗುವಿನ ಹಾಗೇ ಕಣ್ಮುಚ್ಚಲು ,

ಕನಸಿನ ರಾಣಿ 

ತೊಟ್ಟಿಲು ತೂಗಿ, 

ಜೋಗುಳ ಹಾಡುವಾಗ 

ಸೊಗಸಾದ ಹೊಂಗನಸಿನ 

ಮೆಟ್ಟಲನ್ನೇರಿ ಸಾಗುತ್ತಿರುವೆ .


ಕ್ಷಣ ಸಮಯ 

ಎಲ್ಲವನ್ನೂ ತೊರೆದು 

ಅವಿತು ಕುಳಿತ 

ಆಸೆಯ ಪುಟವ ತೆರೆದು, 

ಸಾಗುತ್ತಿದ್ದೇನೆ ಹೊಸ್ತಿಲು ದಾಟಿ 

ಬಾಳಿನ ಹೊಸ ಹೊಸ್ತಿಲಿನ ಕಡೆಗೆ 

ಹೂಮನಸಿನಲಿ ಸಿಂಗರಿಸಿ 

ತೋರಣವ ಹಿಡಿದು !



Rate this content
Log in

Similar kannada poem from Classics