STORYMIRROR

Mouna M

Classics Inspirational Others

4  

Mouna M

Classics Inspirational Others

ಹೆಮ್ಮೆಯ ಭಾರತೀಯ

ಹೆಮ್ಮೆಯ ಭಾರತೀಯ

1 min
234

ಇವರೇ ರಾಜು, ತಂದೆ ತಾಯಿಯ ಹೆಮ್ಮಯ ಮಗ 

ದೇಶ ಪ್ರೇಮವೇ ನನ್ನುಸಿರು ಎನ್ನುವ ಗಾರುಡಿಗ... 

 

ಹೆಂಡತಿ ಮಕ್ಕಳ, ಸಾಕಿ ಸಲುಹಿ

ತಾನು ಬೆಳೆದು, ಅವರನು ಬೆಳೆಸಿ, 

 

ಹಗಲು ರಾತ್ರಿ ಬೆವರನು ಹರಿಸುತ, 

ಹುಟ್ಟಿದ ನಾಡಿಗೆ ಹೆಸರನು ತಂದಿಹ .... 

 

ಬಿಸಿಲು, ಮಳೆ, ಚಳಿ ಗಾಳಿಯ ಲೆಕ್ಕಿಸದೆ 

ಯುದ್ಧವ ಗೆದ್ದು ವೈರಿಯ ಸೆದೆಬಡಿದ ..... 

ದೇಶ ವಿದೇಶವ ಸುತ್ತಿಬಂದು ಯುದ್ಧದ ರಣನೀತಿಯ ಕಲಿತು 

ತಾನು ಗೆದ್ದು, ಸೇನೆಯ ಗೆಲ್ಲಿಸಿದ ತಂತ್ರವು ಫಲಿಸಿತು 

 

ಶೌರ್ಯದಿ ತುಂಬಿದ ಕೆಚ್ಚೆದೆಯ ವೀರರ ವೀರ, ಶೂರರ ಶೂರ .. 

ಕೋಪವು ತೋರಿದರೆ ಎಲ್ಲವೂ ಭಯಂಕರ 

 

ರಾಜು ಬಂದರೆ ಯುದ್ಧದ ಭೂಮಿಗೆ, ವೈರಿಯು ಹೇಳುವ 

ಸೋಲು ನಮಗೆ ಕಟ್ಟಿಟ್ಟ ಬುತ್ತಿ ಕೇಳು ಗೆಳೆಯ ... 

 

ಈಗಲೇ ನಾವು ಸೋಲಪ್ಪಿಕೊಂಡು ನಮ್ಮಯ ಜೀವವ 

ಕಾಪಾಡಿಕೊಳ್ಳುವ, ಕೇಳದೇ ನಮ್ಮಯ ಎದೆಯ ಬಡಿತವ ... 

 

ಇದೇ ನಮ್ಮ ಆರ್ತನಾದ, ರಾಜುರವರೇ ನಿಮ್ಮ ಮುಂದೆ 

ನಾವು ನಿಲ್ಲಲಾರೆವು, ಕೇಳಿರಿ ನಮ್ಮೆಲ್ಲರ ಕೂಗು ಒಂದೇ .... 

 

ಯುದ್ಧವ ಬಿಟ್ಟು ಶರಣಾಗುವೆವು ನಾವು 

ನೀವೇ ನಮ್ಮ ನಾಯಕನೆಂದು ಅರಿತು ನಡೆವೆವು.. 

 

ನಿಮ್ಮಯ ನೇರ ನಡೆ ನುಡಿಯಿಂದ ಗೆದ್ದಿರಿ ಎಲ್ಲರ ಮನವ 

ಯಶಸ್ಸು ನಿಮ್ಮಯ ಕಟ್ಟಿಟ್ಟ ಬುತ್ತಿ, ಸಿಗಲೆಂದಿಗೂ ನಿಮಗೆ ವಿಜಯ ... 

 

ಇವರೇ ರಾಜು, ತಂದೆ ತಾಯಿಯ ಹೆಮ್ಮಯ ಮಗ 

ದೇಶ ಪ್ರೇಮವೇ ನನ್ನುಸಿರು ಎನ್ನುವ ಗಾರುಡಿಗ...

 

ಇಂತಿ ನಿಮ್ಮ ಪ್ರೀತಿಯ …. ಭಾರತೀಯ ..   


Rate this content
Log in

Similar kannada poem from Classics