ಗೂಡು
ಗೂಡು
ಕಳೆದುಕೊಳ್ಳಬೇಕಿತ್ತು
ನಾರು ಬೇರುಗಳು
ಪ್ರತ್ಯೇಕತೆಯನ್ನು |
ಒಂದಕ್ಕೊಂದು
ಹೆಣೆದುಕೊಂಡು
ಗೂಡಾಗಲು..
ಹಣತೆ ಹಚ್ಚಿದ ನಾಡಾಗಲು |
ಸಿದ್ಧವಿದೆ
ಸ್ವಾತಂತ್ರ್ಯ- ಸಮಾನತೆ
ಗರಿಹೊತ್ತ ಸುಂದರ
ಪಕ್ಷಿ ಸಮೂಹವೊಂದು |
ಬೇರೆ ಬೇರೆ ಹೆಸರುಗಳ
ನಾರು ಬೇರುಗಳ
ಹೊಂದಾಣಿಸಿ ತರುವ
ವೈಚಾರಿಕತೆಯ
ದೃಷ್ಟಿಕೋನಗಳಿವೆ |
ಸೂಕ್ಷ್ಮ ಚೊಂಚುಗಳಿವೆ
ಬಿಡಿಸಿಕೊಳ್ಳಲಾರದ
ನೇಯ್ಗೆ ಹಾಕಲು..|
ಒಂದಿಷ್ಟು ಸಹನೆಯಿಂದ
ಕೇಳಬೇಕಷ್ಟೆ
ನಾರುಬೇರುಗಳು
ಶಾಂತಿ ಸಾರುವ
ರೆಕ್ಕೆಗಳ ಮಾತು ||
