Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Geethasaraswathi K

Classics Inspirational Others

3  

Geethasaraswathi K

Classics Inspirational Others

ಗುರು ಸ್ಮರಣೆ

ಗುರು ಸ್ಮರಣೆ

1 min
198


ಬಾಳ ಪಥದಿ ನಡೆಯ ತೋರಿ

ಬೆಳೆಸಿದಂತ ಗುರುವೆ ನೀನು

ಅಮ್ಮ ನಿಮ್ಮ ಚರಣಗಳಿಗೆ

ನನ್ನ ಕೋಟಿ ನಮನಗಳು॥

ಪಾಠಶಾಲೆಯಲ್ಲಿ ಕೈಯ ಹಿಡಿದು

ಗುರಿಯ ತೋರಿ 

ಕಲಿಸಿ,ಹರಸಿ ನಡೆಸಿದಾ

ಶಿಕ್ಷಕರಿಗೆ ನನ್ನ ನಮನಗಳು॥

ತಪ್ಪು ತಿದ್ದಿ, ಸರಿಯ ತಿಳಿಸಿ

ಕಲಿಕೆಯನ್ನು ಸರಳಗೊಳಿಸಿ 

ಮನವ ಅನುವುಗೊಳಿಸಿದಂಥ 

ಶಿಕ್ಷಕರಿಗೆ ಕೋಟಿ ನಮನಗಳು॥ 

ಆಟ-ಪಾಠ, ನಗುವು-ಅಳುವಿನಲ್ಲಿ

ಜೊತೆಗೆ ಇದ್ದು ಮನವಗೆದ್ದ

ಬಿಚ್ಚು ಮನದ ಗೆಳೆಯರೆಲ್ಲ

ಬಾಳಪುಟದ ಗುರುಗಳು॥

ಇಂದು ನಾನು ನಿಂತ ನೆಲೆಯ

ಮೂಲವನ್ನು ಮರೆಯಲಾರೆ

ಪಥಕೆ ಬೆಳಕ ತೋರಿದೆಲ್ಲ

ಗುರುಗಳನ್ನು ಸ್ಮರಿಸುವೆ॥



Rate this content
Log in

Similar kannada poem from Classics