ಗುರು - ಗುರಿ
ಗುರು - ಗುರಿ
ಎಲ್ಲರೊಳಗೊಬ್ಬ ಗುರುವಿದ್ದಾನೆ
ಮಾಡುವ ಕಾರ್ಯಗಳಿಗೆಲ್ಲವೂ ಗುರಿಯೊಂದಿದೆ.
ಗುರಿ ತೋರಿ, ಪಥ ತೋರಿಸುವವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುರುಗಳೇ ಅಲ್ಲವೇ..?!
ಅಜ್ಞಾನದಿಂದ ಜ್ಞಾನದೆಡೆಗೆ
ಕತ್ತಲೆಯಿಂದ ಬೆಳಕಿನ ಕಡೆಗೆ
ಕರೆದೊಯ್ಯುವ ಯಾವುದೇ ಶಕ್ತಿಯು
ಗುರುವಿಗೆ ಸಮಾನವಲ್ಲವೇ..?!
ಅದನ್ನರಿಯುವ ಶಕ್ತಿ, ತಿಳುವಳಿಕೆ
ಮಾನವನಾದವನಿಗಿದ್ದರೆ
ಬಂಡೆಯಂತಹ ಕಷ್ಟಗಳು,
ಮಂಜಿನಂತೆ ಕರಗಿಬಿಡಬಹುದಲ್ಲವೇ..?!
