ಎಲ್ಲಿದೆ ಮಾನವೀಯತೆ
ಎಲ್ಲಿದೆ ಮಾನವೀಯತೆ
ಎಲ್ಲಿದೆ ಇಲ್ಲೀಗ ಮಾನವೀಯತೆ?
ಮೌಲ್ಯಗಳೆಲ್ಲ ಸಾಯುತಿರುವಾಗ
ಕಷ್ಟಗಳ ಕಂಡು ಮರುವವರಿಲ್ಲ..
ಇಷ್ಟಗಳ ಯಾರೂ ಕೇಳುವವರಿಲ್ಲ.!
ಕೂಡಿ ಬಾಳುವವರೆ ಉರಿಯುತ್ತಾರೆ
ನಾ ಹೆಚ್ಚು ನೀ ಹೆಚ್ಚೆಂಬ ಭಾವದಿ
ಹೊಸ ನಾಡಿಮಿಡಿತಗಳು ಸ್ತಭ್ದವಾಗಿವೆ
ಭರವಸೆಯ ಕೈ ಈಗೀಗ ಬೆದರಿಸಿತ್ತಿದೆ.
ಉಳ್ಳವರು ಇಲ್ಲದವರ ತುಳಿತುಳಿದು
ಹಣದ ಹಿಂದೆಬಿದ್ದ ಲೋಕವಿದು
ಮಾನವೀಯ ಗುಣಗಳ ಕಾಣೆನು
ಮೋಸದ ಪ್ರಪಂಚ ತ್ರಾಸಿನ ಬದುಕು
ಕಾಯುವ ಕೈಗಳೆ ಕೊಲ್ಲುತಿವೆ ನೋಡು
ಸೋದರತೆ ಮಾಯವಾಗಿದೆ ಜಗದಿ
ಕಲಿಯಬೇಕಿದೆ ಮೌಲ್ಯಗಳ ಮತ್ತೆ
ಉಳಿದು ಬೆಳೆಯಬೇಕಿದೆ ಹೊಸತು.
